ಲೈಂಗಿಕ ಕಿರುಕುಳ ನೀಡಿದ್ದ ಕ್ಯಾಬ್ ಚಾಲಕನ ಬಂಧನ

ಬೆಂಗಳೂರು, ಫೆ 17, ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಉಬರ್ ಕ್ಯಾಬ್ ಚಾಲಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.ಹಿಂದೂಪುರ ಮೂಲದ ರಾಮ್ ಮೋಹನ್ ಬಂಧಿತ ಉಬರ್ ಕ್ಯಾಬ್ ಚಾಲಕ.ಇದೇ  ತಿಂಗಳ 1ರಂದು ಹೆಬ್ಬಾಳ-ಕೆ ಆರ್ ಪುರಂ ಮಾರ್ಗದಲ್ಲಿ ತೆರಳುತ್ತಿದ್ದ ವೇಳೆ ತನ್ನ ಮೇಲೆ  ಉಬರ್ ಕ್ಯಾಬ್ ಚಾಲಕ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿ ಯುವತಿ ಕೆಆರ್  ಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಳು.ಪ್ರಕರಣದ ಜಾಡು ಹಿಡಿದ ಪೊಲೀಸರು ಆರೋಪಿ ಕ್ಯಾಬ್ ಚಾಲಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.