ಕಾಲುವೆಗಳಿಗೆ ನೀರು ಹರಿಸುವಂತೆ ಶಾಸಕ ಯಾದವಾಡ ಒತ್ತಾಯ


ಬೆಳಗಾವಿ : ಜಿಲ್ಲೆಯ ರಾಮದುರ್ಗ ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಆಗದ ಪರಿಣಾಮ ಅಂತರ್ಜಲ ಮಟ್ಟ ಹಾಗೂ ಕೊಳವೆಭಾವಿಗಳು ಬತ್ತಿ ಹೋಗಿದ್ದು, ಮಲಪ್ರಭಾ ಎಡದಂಡೆಯ ವ್ಯಾಪ್ತಿಯಲ್ಲಿ ಬರುವ ಕಾಲುವೆಗಳಿಗೆ ನವಿಲತೀರ್ಥ ಡ್ಯಾಂ ಮೂಲಕ ನೀರನ್ನು ಬೀಡುವಂತೆ ರಾಮದುರ್ಗ ಶಾಸಕ ಮಹಾದೇಪ್ಪ ಯಾದವಾಡ ಅಫರ್ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. 

ಶುಕ್ರವಾರ ದಿನದಂದು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಶಾಸಕ ಯಾದವಾಡೆ ಅವರು, ಅಫರ್ ಜಿಲ್ಲಾಧಿಕಾರಿ ಭೂದೆಪ್ಪ ಅವರಿಗೆ ಮನವಿಯೊಂದನ್ನು ಸಲ್ಲಿಸಿ, ರಾಮದುರ್ಗ ತಾಲೂಕಿನಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ಉಂಟಾಗಿದೆ. ಆದರಿಂದಾಗಿ ತಾಲ್ಲೂಕಿನ ಮಲಪ್ರಭಾ ಎಡದಂಡೆಯ ವ್ಯಾಪ್ತಿಯಲ್ಲಿ ಬರುವ ಕಾಲುವೆಗಳಿಗೆ ನವಿಲತೀರ್ಥ ಡ್ಯಾಂ ಮೂಲಕ 10ರಿಂದ 15 ದಿನಗಳವರೆಗೆ ನೀರನ್ನು ಬೀಡಬೇಕು ಎಂದು ಒತ್ತಾಯಿಸಿದರು. 

 ಇದೇ ವೇಳೆಯಲ್ಲಿ ಪ್ರಾದೇಶಿಕ ಆಯುಕ್ತರಿಗೂ ಶಾಸಕ ಮಹಾದೇವಪ್ಪ ಯಾದವಾಡ  ಮನವಿಪತ್ರ ಸಲ್ಲಿಸಿ, ಈ ಕುರಿತು ನೀರು ಬಿಡಲು ಮನವಿ ಮಾಡಿಕೊಂಡರು. ಈ ಸಂಧರ್ಬದಲ್ಲಿ ರಾಜೇಶ ಬೀಳಗಿ ಮತ್ತು ಸೋಮನಾಥ ದೂತ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.