ಹಾನಗಲ್ 03 :ತಾಲೂಕಿನ ಸುರಳೇಶ್ವರ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಿಂದ 46 ಲಕ್ಷ ರೂ. ಅನುದಾನದಲ್ಲಿ ಕುಂಟನಹೊಸಳ್ಳಿ,ಸುರಳೇಶ್ವರ ರಸ್ತೆ ಸುಧಾರಣೆ ಕಾಮಗಾರಿಗೆ ಶಾಸಕ ಶ್ರೀನಿವಾಸ ಮಾನೆ ಭೂಮಿಪೂಜೆ ನೆರವೇರಿಸಿದರು.
ಮಾ.18 ರಿಂದ ಆರಂಭಗೊಳ್ಳಲಿರುವ ಹಾನಗಲ್ ನಗರದ ಗ್ರಾಮದೇವಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಈ ರಸ್ತೆ ಬೈಪಾಸ್ ರಸ್ತೆಯಾಗಿ ತಾತ್ಕಾಲಿಕವಾಗಿ ಬಳಕೆಯಾಗಲಿದೆ. ಮುಖ್ಯರಸ್ತೆಯಲ್ಲಿ ಗ್ರಾಮದೇವಿ ಜಾತ್ರಾ ಮಂಟಪ ನಿರ್ಮಿಸುವ ಕಾರಣ ಸಂಚಾರ ನಿಷೇಧಿಸುವ ಹಿನ್ನೆಲೆಯಲ್ಲಿ ವಾಹನಗಳು ಈ ರಸ್ತೆ ಮೂಲಕ ಸಂಚರಿಸಲಿವೆ.
ರಸ್ತೆ ಸುಧಾರಣೆ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಗ್ರಾಮಸ್ಥರ ಅಹವಾಲು ಆಲಿಸಿದರು. ಸ್ಮಶಾನ ಒತ್ತುವರಿ ಮಾಡಲಾಗಿದ್ದು, ತೆರವುಗೊಳಿಸಬೇಕು ಎನ್ನುವ ಮನವಿಗೆ ಸ್ಪಂದಿಸಿದರು. ವಿವಿಧ ಓಣಿಗಳಲ್ಲಿ ಸಿಸಿ ರಸ್ತೆ ನಿರ್ಮಿಸುವುದು, ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಒತ್ತಾಯಿಸಿದಾಗ ಅನುದಾನ ಲಭ್ಯತೆ ಆಧರಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ನಿಗದಿತ ಕಾಲಾವಧಿಯಲ್ಲಿ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಗಮನ ಹರಿಸುವಂತೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು. ಗ್ರಾಪಂ ಅಧ್ಯಕ್ಷೆ ಯಂಕಮ್ಮ ಬಂಡಿವಡ್ಡರ,ಉಪಾಧ್ಯಕ್ಷ ನಾಗರಾಜ ತಳಗೇರಿ, ಸದಸ್ಯ ರೆಹೆಮತ್‌ಅಲಿ ನೆಲ್ಲಿಕೊಪ್ಪ,ಪಿಡಿಒ ಗುಡ್ಡಪ್ಪ ಬಾರ್ಕಿ,ಮುಖಂಡರಾದ ಪರಸಪ್ಪ ನಾಯಕ, ಶಿವಪುತ್ರ್ಪ ಬಾರ್ಕಿ,ಹನುಮಂತಪ್ಪ ಹಾನಗಲ್,ಬಸವರಾಜ ಹಾನಗಲ್,ಹುಲ್ಲಪ್ಪ ಕೊಟ್ರಣ್ಣನವರ, ಅಶೋಕ ಸುಬಾನಜಿ, ಅಬ್ದುಲ್‌ಖಾದರ ಶಿರಗೋಡ, ರಾಜೇಸಾಬ ಲಕ್ಷ್ಮೇಶ್ವರ,ದೇವೇಂದ್ರ್ಪ ನಾಯ್ಕ,ಬಸವರಾಜ ಮೈಲಾರದ,ಮಹದೇವಪ್ಪ ಬಂಡಿವಡ್ಡರ, ಜಗದೀಶ ವಾಲ್ಮೀಕಿ, ಪ್ರಕಾಶ ಸಿಂಧೂರ, ಖಂಡಪ್ಪ ಬಾವಿಕಟ್ಟಿ, ಲೋಕೋಪಯೋಗಿ ಇಲಾಖೆಯ ಎಇಇ ನಾಗರಾಜ ಸೇರಿದಂತೆ ಅನೇಕರಿದ್ದರು.