ಅಲ್ಲಿಪುರ ಕೆರೆಗೆ ಶಾಸಕ ರೆಡ್ಡಿ ಭೇಟಿ: ಕಾಮಗಾರಿ ಪರಿಶೀಲನೆ

ಬಳ್ಳಾರಿ 26: ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರು ನಗರಕ್ಕೆ ಕುಡಿಯುವ ನೀರು ಪೂರೈಸುವ ನಗರದ ಹೊರವಲಯದ ಅಲ್ಲೀಪುರ ಕೆರೆಗೆ ಬುಧವಾರ ಭೇಟಿ ನೀಡಿ ಅಮೃತ್ ಯೋಜನೆ ಅಡಿ ಕೈಗೆತ್ತಿಕೊಳ್ಳಲಾಗಿರುವ ದುರಸ್ತಿ ಕಾರ್ಯದ ಕಾಮಗಾರಿ ಪರಿಶೀಲನೆ ನಡೆಸಿದರು. 19 ಕೋಟಿ ರೂ.ವೆಚ್ಚದಲ್ಲಿ ಅಮೃತ್ ಯೋಜನೆ ಅಡಿ ಕೈಗೆತ್ತಿಕೊಳ್ಳಲಾದ 12660 ಮಿಲಿಯನ್ ಲೀಟರ್ ಸಾಮಥ್ರ್ಯದ ಅಲ್ಲಿಪುರ ಕೆರೆ ಪುನಶ್ಚೇತನಗೊಳಿಸುವ ಕಾಮಗಾರಿಯನ್ನು ಪರಿಶೀಲಿಸಿದ ಶಾಸಕ ಸೋಮಶೇಖರ ರೆಡ್ಡಿ ಅವರು, ನಗರಕ್ಕೆ ನೀರು ಪೂರೈಸುವ ಈ ಅಲ್ಲಿಪುರ ಜಲಸಂಗ್ರಹಗಾರದ ಕಾಮಗಾರಿಯನ್ನು ಗುಣಮಟ್ಟದಿಂದ ಮತ್ತು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳುವಂತೆ ಸೂಚಿಸಿದರು. 

   ಅ.1ರಿಂದ ಜನೆವರಿ 15ರವರೆಗೆ ಕಾಲುವೆಯಿಂದ ಈ ಜಲಸಂಗ್ರಹಗಾರಕ್ಕೆ ನೀರು ಪಂಪ್ ಮಾಡಲಾಗುವುದು. 6.50ಮೀಟರ್ ನೀರು ಸಂಗ್ರಹವಾಗಲಿದ್ದು, ಇದನ್ನು ಮಾಚರ್್ ತಿಂಗಳ ನಂತರ ನಗರದ ಜನರಿಗೆ ಕುಡಿಯುವುದಕ್ಕೆ ಉಪಯೋಗಿಸಲಾಗುವುದು ಎಂದರು. ಕಾಮಗಾರಿ 2017 ಮೇ ತಿಂಗಳಿಂದ ಆರಂಭವಾಗಿದ್ದು 2020 ಮಾಚರ್್ವರೆಗೆ ಇದ್ದು, ಅಷ್ಟರೊಳಗೆ ಮುಗಿಸಲಾಗುವುದು ಎಂದು ಅವರು ಹೇಳಿದರು.

   ಕನರ್ಾಟಕ ನಗರ ಕುಡಿಯುವ ನೀರು ಸರಬರಾಜು ಇಲಾಖೆಯ ಕಾರ್ಯನಿವರ್ಾಹಕ ಎಂಜನಿಯರ್ ಗಂಗಾಧರಗೌಡ ಅವರು ಕಾಮಗಾರಿಯ ವಿವರಣೆಯನ್ನು ಶಾಸಕರಿಗೆ ನೀಡಿದರು. ಬಳ್ಳಾರಿ ನಗರಕ್ಕೆ ನಿರಂತರ ಕುಡಿಯುವ ನೀರು ಸರಬರಾಜು ಮಾಡುವ 24*7 ಕಾಮಗಾರಿಗಳನ್ನು ಎರಡು ಹಂತದಲ್ಲಿ ಕೈಗೆತ್ತಿಕೊಳ್ಳಲಾಗಿದ್ದು.

   ಮೊದಲ ಹಂತದ 28 ವಲಯಗಳಲ್ಲಿ 10 ವಲಯ ಪೂರ್ಣಗೊಂಡಿದ್ದು, ಮಾಚರ್್ ಅಂತ್ಯದ ವೇಳೆಗೆ 29 ವಲಯಗಳನ್ನು ಪೂರ್ಣಗೊಳಿಸುವುದಕ್ಕೆ ಸೂಚನೆ ನೀಡಲಾಗಿದೆ. 2ನೇ ಹಂತದ 15 ವಲಯಕ್ಕೆ 52 ಕೋಟಿ ರೂ.ಅಗತ್ಯವಿದ್ದು, ಡಿಎಂಎಫ್ ಅಡಿ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅವರು ವಿವರಿಸಿದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತ ನಾರಾಯಣಪ್ಪ, ಪಾಲಿಕೆ ಸದಸ್ಯರಾದ ಶ್ರೀನಿವಾಸ ಮೋತ್ಕರ್, ಮಲ್ಲನಗೌಡ ಸೇರಿದಂತೆ ಕೆಯುಡಬ್ಲ್ಯೂಎಸ್ ಎಂಜನಿಯರ್ಗಳು ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳು ಇದ್ದರು.