ಯುರೋ ಕಿಡ್ಸ ಪೂರ್ವ ಪ್ರಾಥಮಿಕ ಶಾಲೆ ಉದ್ಘಾಟಿದ ಶಾಸಕ ಲಕ್ಷ್ಮಣ ಸವದಿ

MLA Lakshman Savadi inaugurates Euro Kids Pre-Primary School

ಯುರೋ ಕಿಡ್ಸ ಪೂರ್ವ ಪ್ರಾಥಮಿಕ ಶಾಲೆ ಉದ್ಘಾಟಿದ ಶಾಸಕ ಲಕ್ಷ್ಮಣ ಸವದಿ 

ಅಥಣಿ, 14: ಭಾರತದಲ್ಲಿ ಶೈಕ್ಷಣಿಕ ವ್ಯವಸ್ಥೆ ಇನ್ನಷ್ಟು ಸುಧಾರಿಸಿದಲ್ಲಿ ಇಡೀ ವಿಶ್ವವನ್ನೇ ನಿಯಂತ್ರಿಸುವ ಶಕ್ತಿ ಭಾರತೀಯರಿಗೆ ಬರುತ್ತದೆ ಎಂದು ಮಾಜಿ ಉಪ ಮುಖ್ಯಮಂತ್ರಿ, ಶಾಸಕ ಲಕ್ಷ್ಮಣ ಸವದಿ ಹೇಳಿದರು. ಅವರು ಸಂಗಮನಾಥ ಎಜ್ಯುಕೇಶನ್ ಮತ್ತು ಸೋಸಿಯಲ್ ವೆಲ್ ಫೇರ್ ಫೌಂಡೇಶನ್ ಪ್ರಾರಂಭಿಸಿದ ಯುರೋ ಕಿಡ್ಸ ಪೂರ್ವ ಪ್ರಾಥಮಿಕ ಶಾಲೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.  

      ಶಿಕ್ಷಣದಿಂದ ಯಾರೂ ವಂಚಿತರಾಗಬಾರದು ಎನ್ನುವ ಕಾರಣದಿಂದ ಸರಕಾರ ಶಿಕ್ಷಣದ ಹಕ್ಕು ಜಾರಿಗೊಳಿಸಿದ್ದು, ಸರಕಾರದ ಈ ಹಕ್ಕನ್ನು ಸಾವಿರಾರು ಸಂಖ್ಯೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣ ಕೊಡುವ ಮೂಲಕ ಸಮಾಜದ ಕಟ್ಟಕಡೆಯ ಮಗುವಿಗೆ ತಲುಪಿಸುತ್ತಿವೆ ಎಂದ ಅವರು ಇತ್ತೀಚಿಗೆ ಆರ್ಟಿಫಿಸಿಯಲ್ ಇಂಟಲಿಜನ್ಸ ಇಂಜನೀಯರಿಂಗ, ವೈದ್ಯಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳಿಗೂ ಕಾಲಿಟ್ಟಿದ್ದು, ಕಾಲಕ್ಕೆ ತಕ್ಕಂತೆ ನಾವೂ ಬದಲಾಗುವುದು ಅನಿವಾರ್ಯವಾಗಿದೆ ಎಂದರು.   

     ಸವದಿ ಪರಿವಾರದಿಂದ ಆರಂಭಗೊಂಡ ಈ ಶಾಲೆಯಲ್ಲಿ ಕೆಲ ಬಡ ಮತ್ತು ಅನಾಥ ಮಕ್ಕಳಿಗೆ ಉಚಿತ ಶಿಕ್ಷಣ ಕೊಡುವ ಮೂಲಕ ಸಾಮಾಜಿಕ ಬದ್ಧತೆಗೆ ಮುಂದಾಗಬೇಕು ಎಂದರು.  

    ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಕಾಗವಾಡ ಶಾಸಕ ರಾಜು ಕಾಗೆ,  ಶಿಕ್ಷಣ ಸಂಸ್ಥೆಗಳು ವ್ಯಾಪಾರೀಕರಣವಾಗುತ್ತಿರುವುದು ದುರ್ದೈವದ ಸಂಗತಿಯಾಗಿದೆ ಎಂದರು. ಸರಕಾರಿ ಶಾಲೆಗಳಿಗೆ ಇಲ್ಲದ ಅನೇಕ ನಿಯಮಗಳು ಖಾಸಗಿ ಶಾಲೆ ಪ್ರಾರಂಭಿಸುವಾಗ ಅನ್ವಯವಾಗುತ್ತವೆ ಇದರಿಂದ ಅನೇಕ ಖಾಸಗಿ ಶಾಲೆಗಳು ಪ್ರಾರಂಭಗೊಳ್ಳಲು ವಿಳಂಬವಾಗುತ್ತಿವೆ ಎಂದ ಅವರು ಶಿಜ್ಷಣದಲ್ಲಿ ಮಾನವೀಯ ಮೌಲ್ಯಗಳು ಮಾಯವಾಗಿದ್ದು, ಇದರಿಂದ ಸಾಮಾಜಿಕ ವ್ಯವಸ್ಥೆಯ ಮೇಲೆ ಅಡ್ಡ ಪರಿಣಾಮಗಳಾಗುತ್ತಿರುವುದು ವಿಷಾದದ ಸಂಗತಿ ಎಂದರು.  

     ಯುರೋ ಕಿಡ್ಸನ ವಿನೋದ ರೆಡ್ಡಿ ಮಾತನಾಡಿ,ಭಾರತದಲ್ಲಿ 1800 ಶಾಲೆಗಳು ಪ್ರಾರಂಭಗೊಂಡಿವೆ ಜೊತೆಗೆ   ಬಾಂಗ್ಲಾ, ನೇಪಾಳ ದಲ್ಲಿಯೂ  ಕೆಲ ಸ್ಥಳಗಳಲ್ಲಿ ಶಾಲೆಗಳನ್ನು ಪ್ರಾರಂಭಿಸಲಾಗಿದೆ ಎಂದ ಅವರು ಇಲ್ಲಿಯವರೆಗೆ ಯುರೋ ಕಿಡ್ಸನಲ್ಲಿ 9 ಲಕ್ಷ ವಿದ್ಯಾರ್ಥಿಗಳು ಅಧ್ಯಯನ ನಡೆಸಿದ್ದಾರೆ ಎಂದರು. 

     ಸಾನಿಧ್ಯ ವಹಿಸಿದ್ದ ಕೌಲಗುಡ್ಡ-ಹಣಮಾಪುರದ ಶ್ರೀ ಅಮರೇಶ್ವರ ಮಹಾರಾಜರು, ಇಂಚಲದ ಶ್ರೀ ಪೂರ್ಣಾನಂದ ಸ್ವಾಮೀಜಿ, ಶೆಟ್ಟರ ಮಠದ ಮರುಳಸಿದ್ಧ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಪರ​‍್ಪ ಸವದಿ ಸರ್ವರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಮಲ್ಲೇಶ ಸವದಿ, ಶಿವಾನಂದ ಸವದಿ, ಶಿವುಕುಮಾರ ಸವದಿ, ಚಿದಾನಂದ ಸವದಿ, ನ್ಯಾಯವಾದಿ ಸಿದ್ಧಾರೂಢ ಸವದಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.