ಲೋಕದರ್ಶನ ವರದಿ
ಬ್ಯಾಡಗಿ 16:- ಬ್ಯಾಡಗಿ ತಾಲೂಕನ್ನು ಬರಗಾಲ ಪೀಡಿತಎಂದು ಶೀಘ್ರವಾಗಿ ಘೋಷಿಸಬೇಕೆಂದು ಬ್ಯಾಡಗಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಬೆಳಗಾವಿ ಅಧಿವೇಶನದಲ್ಲಿ ಸರಕಾರಕ್ಕೆ ಒತ್ತಾಯಿಸಿದರು.
ದಿನಾಂಕ: 16 ರಂದು ಬೆಳಗಾವಿ ಅಧಿವೇಶನದಲ್ಲಿ ನಡೆದ ಪ್ರಶ್ನೋತ್ತಾರ ವೇಳೆಯಲ್ಲಿ ಪಕ್ಕದತಾಲೂಕ ಹಿರೇಕೆರೂರ ತಾಲೂಕು ಅರೆಮಲೆನಾಡು ಪ್ರದೇಶದ ವ್ಯಾಪ್ತಿಯಲ್ಲಿ ಬರುತ್ತಿದ್ದರೂ ಸಹ ಅದನ್ನು ಬರಗಾಲ ಪ್ರದೇಶವೆಂದು ಘೋಷಿಸಿ, ಪಕ್ಕದಲ್ಲಿರುವ ಅತೀ ಹಿಂದುಳಿದ ಬೆಂಗಾಡು ಪ್ರದೇಶವಾಗಿರುವ ಬ್ಯಾಡಗಿ ತಾಲೂಕನ್ನು ಏಕೆ ಬರಗಾಲ ಪೀಡಿತ ಅಂತಾ ಏಕೆ ಘೋಷಣೆ ಮಾಡಿಲ್ಲ. ಈ ತಾರತಮ್ಯಕ್ಕೆ ಕಾರಣವೇನು ? ಇದಕ್ಕೆ ಕೃಷಿ ಸಚಿವರು ಕಂದಾಯ ಸಚಿವರು ತಕ್ಷಣಕ್ರಮಕೈಗೊಂಡು ಬ್ಯಾಡಗಿ ತಾಲೂಕನ್ನು ಬರಗಾಲ ಪೀಡಿತವೆಂದು ಘೋಷಣೆ ಮಾಡಬೇಕು.
ಕುಡಿಯುವ ನೀರಿಗಾಗಿ ಕೊಳವೆ ಬಾವಿ ಕೊರೆಸಲು ಜಿಲ್ಲಾಧಿಕಾರಿಗಳ ಅನುಮತಿ ತೆಗೆದುಕೊಳ್ಳಬೇಕಾದ ಪರಿಸ್ಥಿತಿಯಲ್ಲಿ ಎಲ್ಲಾ ಜವಾಬ್ದಾರಿಗಳನ್ನು ಜಿಲ್ಲಾಧಿಕಾರಿಗಳಿಗೆ ವಹಿಸಿದರೆ ಕೆಲಸವಾಗುವುದು ಹೇಗೆ ? ಆದ್ದರಿಂದಾಟಾಸ್ಕ ಪೋರ್ಸ ಸಮಿತಿಯವರ ವರದಿಯ ಪ್ರಕಾರಕುಡಿಯುವ ನೀರಿಗೆ ಕೊಳವೆಭಾವಿ ತೋಡುವಕ್ರಮ ಕೈಗೊಳ್ಳಬೇಕು ತಕ್ಷಣ ಬರಗಾಲ ಕಾಮಗಾರಿಗಳನ್ನು ಪ್ರಾರಂಭಿಸಿ ಜನರಿಗೆಉದ್ಯೋಗ, ಕುಡಿಯುವ ನೀರಿಗೆ ವ್ಯವಸ್ಥೆ ಮಾಡಬೇಕೆಂದು ಶಾಸಕರು ಸರಕಾರಕ್ಕೆ ಒತ್ತಾಯಿಸಿದರು.