ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಶಾಸಕ ಬಳ್ಳಾರಿ ಚಾಲನೆ

ಬ್ಯಾಡಗಿ: ತಾಲೂಕಿನ ಆಣೂರು ಮತ್ತು ಬುಡುಪನಹಳ್ಳಿ ಗ್ರಾಮಗಳ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ರಾಜ್ಯದ ಮುಖ್ಯಮಂತ್ರಿಗಳಿಂದ ಶೀಘ್ರದಲ್ಲಿಯೇ ಕಾಮಗಾರಿಗಳಿಗೆ ಚಾಲನೆ ಸಿಗಲಿದೆ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು. ಲೋಕೋಪಯೋಗಿ ಇಲಾಖೆಯ ವತಿಯಿಂದ ಎಸ್.ಸಿ.ಪಿ./ ಟಿ.ಎಸ್.ಪಿ. ಯೋಜನೆಯಡಿ ಮಾಸಣಗಿ ಗ್ರಾಮದಲ್ಲಿ 17.83 ಲಕ್ಷ, ಶಂಕ್ರಿ ಪುರ ಗ್ರಾಮದಲ್ಲಿ 13.98 ಲಕ್ಷ ಹಾಗೂ ಅಂದಾನಿಕೊಪ್ಪ ಗ್ರಾಮದಲ್ಲಿ 10 ಲಕ್ಷ ಸೇರಿದಂತೆ 41.81 ಲಕ್ಷ ರೂಗಳ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾದ ಕಾಂಕ್ರೀಟ್ ರಸ್ತೆ/ಪಕ್ಕಾ ಗಟಾರ ನಿಮರ್ಾಣ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು ಆಣೂರು ಮತ್ತು ಬುಡುಪನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರ ಬಹು ದಿನಗಳ ಕನಸು ನನಸಾಗುವ ಹಂತದಲ್ಲಿದ್ದು, ಗ್ರಾಮಗಳಲ್ಲಿ ನಡೆಯುವ ಪ್ರತಿಯೊಂದು ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಸಾರ್ವಜನಿಕರು ನಿಗಾ ವಹಿಸಿ ಅನುದಾನದ ದುರ್ಬಳಕೆ ಆಗದಂತೆ ನೋಡಬೇಕು ಎಂದು ಹೇಳಿದರು. ಎಪಿಎಂಸಿ ನಾಮ ನಿದರ್ೆಶಿತ ಸದಸ್ಯ ಶಿವಪ್ಪ ಕುಮ್ಮೂರ ಮಾತನಾಡಿ, ಜನಪರ ಅಭಿವೃದ್ಧಿ ಕಾರ್ಯಗಳಿಗೆ ಬಿಜೆಪಿ ಸಕರ್ಾರವು ಮುಂದಾಗಿದ್ದು, ಕ್ಷೇತ್ರದ ಸವರ್ಾಂಗೀಣ ಅಭಿವೃದ್ಧಿಗೆ ಶಾಸಕರು ಶ್ರಮಿಸುತ್ತಿರುವುದು ಸ್ವಾಗತಾರ್ಹ ಎಂದರು. ಈ ಸಂದರ್ಭದಲ್ಲಿ ಮಲ್ಲೂರು ಗ್ರಾ.ಪಂ. ಅಧ್ಯಕ್ಷ ಲಕ್ಷ್ಮಣ ಮೇಗಳಮನಿ, ಬನ್ನಿಹಟ್ಟಿ ಗ್ರಾ.ಪಂ. ಅಧ್ಯಕ್ಷೆ ಮಂಜುಳಾ ರಂಗಾರೆ, ಮಾಸಣಗಿ ಗ್ರಾ.ಪಂ. ಅಧ್ಯಕ್ಷೆ ಅಕ್ಕಮ್ಮ ಓಲೇಕಾರ, ಉಪಾಧ್ಯಕ್ಷ ಬಸನಗೌಡ ಸಣ್ಣಗೌಡ್ರ, ಸದಸ್ಯರಾದ ಕುಬೇರಪ್ಪ ಕೊಲರ್ಿ, ಮಂಗಳಾ ದೊಡ್ಡಮನಿ, ಬಿಜೆಪಿ ಮುಖಂಡರಾದ ಶಿವಬಸಪ್ಪ ಕುಳೇನೂರ, ಶಿವಪ್ಪ ಹರಮಗಟ್ಟಿ, ವಿಜಯ ಬಳ್ಳಾರಿ, ಚನ್ನಬಸವ ವೀರನಗೌಡ್ರ, ಇಂಜನೀಯರಗಳಾದ ಅಜ್ಜನಗೌಡ ಪಾಟೀಲ, ಕೆ ರಾಜಪ್ಪ, ಗುತ್ತಿಗೆದಾರರಾದ ಈರಣ್ಣ ಮರಬಸಣ್ಣನವರ, ಆನಂದ ದೊಡ್ಡಮನಿ, ರಮೇಶ ಹಳೇಮನಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.