ದೇಶದ ಭವಿಷ್ಯಕ್ಕೆ ಪ್ರಸಕ್ತ ಲೋಕಸಭಾ ಚುನಾವಣೆ ನಿರ್ಣಾಯಕ : ಬಾಬಾ ರಾಮ್ ದೇವ್


ಪಾಟ್ನ ಏ 26 - ಪ್ರಧಾನಿ ನರೇಂದ್ರ ಮೋದಿ ಅವರ ರಾಷ್ಟ್ರವಾದಕ್ಕೆ ತಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಹೇಳಿರುವ ಯೋಗ ಗುರು ಬಾಬಾ ರಾಮ್ ದೇವ್ ಅವರು, 2019ರ ಲೋಕಸಭಾ ಚುನಾವಣೆ ಮುಂದಿನ 50 ವರ್ಷಗಳಿಗೆ ದೇಶದ ಭವಿಷ್ಯವನ್ನು ನಿರ್ಧರಿಸಲಿದೆ ಎಂದು ಹೇಳಿದ್ದಾರೆ.   ಶುಕ್ರವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಯೊಬ್ಬರಿಗೂ ಶಿಕ್ಷಣ ದೊರೆಯುವಂತಾಗಬೇಕು. ಪ್ರತಿಯೊಬ್ಬರ ಘನತೆಯನ್ನು ಸಹ ಕಾಪಾಡಬೇಕು ಹೇಳಿದ್ದಾರೆ.   ಜಾತಿಯತೆಯಲ್ಲಿ ನಂಬಿಕೆ ಇಡುವುದು ಒಳ್ಳೆಯದೆ. ಆದರೆ ಪ್ರಧಾನಿ ನರೇಂದ್ರಮೋದಿಯವರ ಪ್ರಮುಖ ಕಾರ್ಯಸೂಚಿಯಾದ ರಾಷ್ಟ್ರವಾದ, ಜಾತೀಯತೆಗಿಂತ ಪ್ರಮುಖವಾದದ್ದು. ರಾಷ್ಟ್ರೀಯತೆ ವಿಷಯದಲ್ಲಿ ಮೋದಿಯವರೊಂದಿಗೆ ನಿಲ್ಲುತ್ತೇನೆ.  ಭಾರತ ಸದ್ಯ ಭಾರಿ ಬದಲಾವಣೆ ಕಾಣುತ್ತಿದ್ದು, ಈ ಚುನಾವಣೆ ದೇಶದ ಭವಿಷ್ಯಕ್ಕೆ ನಿರ್ಣಾಯಕ ವೆನಿಸಿದೆ' ಎಂದು ಬಾಬಾ ರಾಮ್ದೇವ್ ಹೇಳಿದ್ದಾರೆ.  

ಮತದಾರರು ಯಾವ ಪಕ್ಷಕ್ಕೆ ಮತ ಹಾಕಿದರೆ ಒಳ್ಳೆಯದು ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ಸಿದ್ದಾಂತ ಮತ್ತು ಅದರ ಉದ್ದೇಶಗಳು ಸರಿಯಾಗಿರುವುದರಿಂದ ಆ ಪಕ್ಷದಅಭ್ಯರ್ಥಿಗಳ  ಪರ ಮತ ಚಲಾಯಿಸುವುದೇ ಸೂಕ್ತ. ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಭಾರತದ ಘನತೆ ಹೆಚ್ಚಿದೆ ಎಂದು ಹೇಳಿದ್ದಾರೆ.  

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಆರ್ ಜೆಡಿ ವರಿಷ್ಠ ಲಾಲು ಪ್ರಸಾದ್ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗೆ ವೈಯಕ್ತಿಕ ಬಾಂಧವ್ಯ ಹೊಂದಿದ್ದೇನೆ. ಆದರೆ, ದೇಶದ ಭದ್ರತೆ ಮೋದಿ ಅವರ ಆಳಿತದಲ್ಲಿ ಸುಭದ್ರವಾಗಿತ್ತು ಎಂದು ಹೇಳಿದರು.  

'ಪಾಟ್ನಾ ಸಾಹಿಬ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ  ರವಿಶಂಕರ್ ಪ್ರಸಾದ್ ಭಾರಿ ಬಹುಮತದಿಂದ ಗೆಲ್ಲುವಂತಾಗಲು ಅವರನ್ನು ಆಶೀರ್ವದಿಸಲುಬಂದಿದ್ದೇನೆ' ಎಂದು ಬಾಬಾ ರಾಮ್ದೇವ್ ಹೇಳಿದ್ದಾರೆ.