ಬೆಂಗಳೂರು ಎ 9,ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣ ಹಿನ್ನೆಲೆಯಲ್ಲಿ ಇನ್ನು 15 ದಿನ ಲಾಕ್ ಡೌನ್ ವಿಸ್ತರಣೆ ಒಳಿತು ಎಂದು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದ್ದರೂ ಬರುವ ಸೋಮವಾರ (13 ರಂದು) ಸರ್ಕಾರದ ಸ್ಪಷ್ಟ ತೀರ್ಮಾನ ಹೊರಬೀಳಲಿದೆ . ಸರ್ಕಾರದ ಉನ್ನತ ಮೂಲಗಳಿಂದ ಈ ಖಚಿತ ಮಾಹಿತಿ ಲಭ್ಯವಾಗಿದೆ ಇದೇ ಶನಿವಾರ ಪ್ರಧಾನಿ ನರೆಂದ್ರ ಮೋದಿ ಅವರು ಮೂರನೇ ಬಾರಿಗೆ ಭಾರಿಗೆ ರಾಜ್ಯಗಳ ಜೊತೆ ಸಮಾಲೋಚನೆ ಮಾಡಲಿದ್ದು ಬಳಿಕ ಸೋಮವಾರ ಅಂತಿಮ ತೀರ್ಮಾನ ಪ್ರಕಟವಾಗಲಿದೆ ಎನ್ನಲಾಗಿದೆ.
ತಜ್ಞರ ಸಮಿತಿ ಲಾಕ್‌ಡೌನ್ ಅವಧಿಯನ್ನು ಮತ್ತಷ್ಟು ಕಾಲ ವಿಸ್ತರಣೆ ಮಾಡಬೇಕು ಎಂದು ಶಿಫಾರಸ್ ಮಾಡಿದೆ ಏನೇ ಆಗಲಿ ಪಾಸಿಟಿವ್ ಪ್ರಕರಣ ವರದಿಯಾಗಿರುವ ಜಿಲ್ಲೆಗಳಲ್ಲಿ ಲಾಕ್ ಡೌನ್ ಪೂರ್ಣ ಸಡಿಲ ಮಾಡುವ ಪ್ರಶ್ನೆಯೆ ಇಲ್ಲ ಎಂದೂ ಹೇಳಲಾಗಿದೆ. ಈಗಾಗಾಲೇ ರಾಜ್ಯದ 18 ಜಿಲ್ಲೆಗಳಿಗೆ ಮಾರಕ ಸೋಂಕು ಹರಡಿದೆ ಹೀಗಾಗಿ ಮುನ್ನಚ್ಚೆರಿಕೆ ವಹಿಸಬೇಕಿದೆ ಆದ್ದರಿಂದ ಪಾಸಿಟಿವ್ ಪ್ರಕರಣ ವರದಿಯಾದ ಜಿಲ್ಲಗಳಲಲ್ಲಿ ಕಟ್ಟುನಿಟ್ಟಿನ ಅವಧಿ ಮುಂದುವರಿಯಲಿದ್ದು ಸೋಂಕು ಕಂಡುಬಾರದೆ ಇರುವ ಜಿಲ್ಲಗಳಲ್ಲಿ ಹಂಹಂತವಾಗಿ ಲಾಕ್ ಡೌನ್ ಅವಧಿ ಸಡಿಲ ಮಾಡಲಾಗುತ್ತದೆ ಎಂದೂ ಹೇಳಲಾಗಿದೆ. ಸರ್ಕಾರ ಈವರೆಗೆ ಯಾವುದೇ ಸ್ಪಷ್ಟ ಅಭಿಪ್ರಾಯಕ್ಕೆ, ತೀರ್ಮಾನಕ್ಕೆ ಬಂದಿಲ್ಲ ಎಲ್ಲಾ ವರದಿಗಳನ್ನು ಅಧ್ಯಯನ ಮಾಡುತ್ತಿದೆ. ಬೇರೆ ಬೇರೆ ರಾಜ್ಯಗಳ ಪರಿಸ್ಥತಿಯನ್ನುಸಹ ಅಧ್ಯಯನ ಮಾಡುತ್ತಿದೆ. ಕೇಂದ್ರ ಸರ್ಕಾರವು ಘೋಷಣೆ ಮಾಡಿದ್ದ 21 ದಿನಗಳ ರಾಷ್ಟ್ರೀಯ ಲಾಕ್‌ಡೌನ್ ಬರುವ ಮಂಗಳವಾರ ಮುಗಿಯಲಿದೆ.