ಮುದ್ದೇಬಿಹಾಳ 04: ಕೇರಳ ಮಹಾರಾಷ್ಟ್ರ ಸೇರಿದಂತೆ ಇತರೇ ರಾಜ್ಯಗಳ ಮಾದರಿಯಲ್ಲಿ ಸ್ಥಳೀಯ ಸಂಸ್ಥೆಗಳ ಅನುದಾನ, ಚುನಾಯಿತ ಜನ ಪ್ರತಿನಿಧಿಗಳ ಗೌರವ ಧನ ಹೆಚ್ಚಿಸುವುದು ಹಲವು ರೀತಿಯ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಕುರಿತು ಸದನದಲ್ಲಿ ಸರಕಾರದ ಗಮನ ಸೆಳೆಯುವ ಮೂಲಕ ಮತ್ತಷ್ಟು ಶಕ್ತಿ ತುಂಬಲಾಗುವುದು ಎಂದು ವಿಜಯಪುರ ಹಾಗೂ ಬಾಗಲಕೋಟ ಜಿಲ್ಲೆಗಳ ವಿಧಾನಪರಿಷತ್ ಸದಸ್ಯ ಸುನೀಲಕುಮಾರ ಪಾಟೀಲ ಹೇಳಿದರು.
2018ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಗೆಲುವು ಸಾಧಿಸಿದ ದಿನದಿಂದಲೂ ಗ್ರಾಮ ಪಂಚಾಯಿತಿ, ತಾಲೂಕು, ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆ ಹೀಗೇ ಅನೇಕ ಸ್ಥಳಿಯ ಸಂಸ್ಥೆಗಳ ಜನಪ್ರತಿನಿಧಿಗಳಿಗೆ ಕೇವಲ 500 ರೂಗಳು ಮಾತ್ರ ನೀಡಲಾಗುತ್ತಿತ್ತು ಆದರೇ ನಾನು 2018ರಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಗೆಲುವು ಸಾಧಿಸಿದ ನಂತರ ವಿವಿಧ ರಾಜ್ಯಗಳಿಗೆ ಪ್ರವಾಸ ಕೈಗೊಂಡು ಅಧ್ಯಯನ ನಡೆಸಿ ಅಧಿವೇಶನದಲ್ಲಿ ಧ್ವನಿ ಎತ್ತುವ ಮೂಲಕ ಸ್ಥಳಿಯ ಸಂಸ್ಥೆಗಳ ಚುನಾಯಿತ ಜನಪ್ರತಿನಿಧಿಗಳ ಗೌರವ ಇಂದು 2ರಿಂದ 3 ಸಾವಿರಕ್ಕೆ ಏರಿಸುವಂತೆ ಮಾಡಿದ್ದೇನೆ.
ಗ್ರಾಮ ಪಂಚಾಯಿತಿಗಳು ಇರೋದೇ 15ನೇ ಹಣಕಾಸು ಯೋಜನೆಯಲ್ಲಿ ಆದರೇ ಕೇಂದ್ರ ಸರಕಾರ ಜೆ ಜೆ ಎಂ ಯೋಜನೆ ಜಾರಿ ತರುವ ಮೂಲಕ ಗ್ರಾಮೀಣ ಜನರಿಗೆ ಮನೆ ಮನೆಗೆ ಕುಡಿಯುವ ನೀರು ಒದಗಿಸುವ ಉದ್ದೇಶದಿಂದ ಅನುಷ್ಠಾನಗೊಳಿಸಿತು ಆದರೇ ಈ ಯೋಜನೆಯಲ್ಲಿ ಗ್ರಾಮ ಪಂಚಾಯಿತಿಯ 15ನೇ ಹಣಕಾಸು ಯೋಜನೆಯ ಅನುದಾನವನ್ನು ಬಳಸಿಕೊಂಡು ನಿರ್ಮಿಸಬೇಕು ಎನ್ನುವ ಕಾನೂನು ಜಾರಿಗೊಂಡಿತ್ತು. ಇದರಿಂದ ಗ್ರಾಮ ಪಂಚಾಯಿತಿ ಅಭಿವೃದ್ಧಿಗೆ ಅನುದಾನವಿಲ್ಲದೇ ತೊಂದರೆ ಅನುಭವಿಸುವಂತಾಗಿತ್ತು. ಈ ವಿಷಯ ತಿಳಿದು ಉತ್ತರ ಪ್ರದೇಶ ರಾಜ್ಯದಲ್ಲಿನ ಮಾದರಿಯಂತೆ ರಾಜ್ಯದಲ್ಲೂ ಜೆಜೆಎಂ ಯೋಜನೆಗೆ ಸರಕಾರದಿಂದ ಹಣ ಭರಿಸಬೇಕು ಗ್ರಾಮ ಪಂಚಾಯಿತಿಗಳ ಅಭಿವೃದ್ಧಿಗಾಗಿ ಇರುವ ವಿಶೇಷ ಅನುದಾನವನ್ನು ಬಳಸಬಾರದು ಎಂದು ಹಿಂದಿನ ಸರಕಾರದ ಅವಧಿಯಲ್ಲಿ ಸದನದಲ್ಲಿ ಧ್ವನಿ ಎತ್ತಿ ಪ್ರಶ್ನಿಸಿದೆ. ಈ ಬಗ್ಗೆ ಸದನದಲ್ಲಿ ಸಂಪೂರ್ಣ ಚರ್ಚೆಗೊಂಡು ಆಗುಹೋಗಗಳ ಬಗ್ಗೆ ಪರಾಮರ್ಶಿಸಿ ಗ್ರಾಮ ಪಂಚಾಯಿತಿಯಿಂದ ಜೆಜೆಎಂ ಸ್ಕೀಂಗೆ ಬಳಸಿಕೊಳ್ಳುತ್ತಿದ್ದ ಅನುದಾನವನ್ನು ತಡೆಹಿಡಿದು ಮರಳಿ ಗ್ರಾಮ ಪಂಚಾಯಿತಿಗೆ ಉಳಿಯುವಂತೆ ಮಾಡಿ ಆದೇಶ ಮಾಡುವಂತೆ ಹೋರಾಟ ಮಾಡಿದ್ದೇನೆ ಎನ್ನುವ ತೃಪ್ತಿ ತಂದಿದೆ.
ಕೋರೋನಾ ಸಂದರ್ಭದಲ್ಲಿ ಅವಳಿ ಜಿಲ್ಲೆಯ ಪ್ರತಿ ಪಂಚಾಯಿತಿಗೂ ಸ್ಯಾನಿಟೈಜರ್ ಯಂತ್ರ ವಿತರಿಸಿದ್ದೇನೆ. ಹೀಗೇ ಪ್ರತಿವರ್ಷವೂ ಸ್ಥಳಿಯ ಸಂಸ್ಥೆಗಳ ಸಮಸ್ಯೆಗಳ ಕುರಿತು ಧ್ವನಿ ಎತ್ತುವ ಮೂಲಕ ನ್ಯಾಯ ಒದಗಿಸುವ ಮಾಡುತ್ತಲೇ ಬಂದಿದ್ದೇನೆ. ಆದರೇ ಚುನಾವಣೆ ಹಿನ್ನೇಲೆಯಲ್ಲಿ ಕಳೆದ ಎರಡು ವರ್ಷ ಚುನಾಯಿತ ಸದಸ್ಯರ ಕುಂದುಕೊರತೆ ಆಲಿಸಲು ಸಾಧ್ಯವಾಲಿಲ್ಲ ಕಾರಣ ಈಗ ಎಲ್ಲ ವಿಧಾನ ಸಭಾ ಕ್ಷೇತ್ರಗಳಿಗೆ ತೆರಳಿ ಆಯಾ ಭಾಗದ ಆಡಳಿತಾತ್ಮಕ ಅಹವಾಲು ಸ್ವೀಕಾರ ಕಾರ್ಯಕ್ರಮದ ಮೂಲಕ ಮುಂಬರುವ ಅಧಿವೇಶನದಲ್ಲಿ ತಮ್ಮ ಸಮಸ್ಯೆಗಳ ಕುರಿತು ಧ್ವನಿ ಎತ್ತುವುದರೊಂದಿಗೆ ಸರಕಾರದ ಗಮನ ಸೆಳೆಯುವ ಉದ್ದೇಶ ಹೊಂದಿದ್ದೇನೆ ಎಂದರು. ಬಳಿಕ ವಿವಿಧ ಗ್ರಾಮ ಪಂಚಾಯಿತಿಗಳಿಂದ ಬಂದಿದ್ದ ಆಡಳಿತ ಮಂಡಳಿಯವರಿಂದ ಅಹವಾಲು ಸ್ವೀಕರಿಸಿದರು.
ತಾಲೂಕು ಪಂಚಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಸಳಿ, ಸರಕಾರದ ಗ್ಯಾರಂಟಿ ಯೋಜನೆ ತಾಲೂಕಾ ಅಧ್ಯಕ್ಷ ಶಿವಶಂಕರಗೌಡ ಹಿರೇಗೌಡರ, ತಾಲೂಕಾ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗುರು ತಾರನಾಳ, ಪಿಎಲ್ ಡಿ ಬ್ಯಾಂಕಿನ ಅಧ್ಯಕ್ಷ ಬಿ ಕೆ ಬಿರಾದಾರ, ಪುರಸಭೆ ಅಧ್ಯಕ್ಷ ಮೈಬೂಬ ಗೊಳಸಂಗಿ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಪುರಸಭೆ ಉಪಾಧ್ಯಕ್ಷೇ ಪ್ರೀತಿ ದೇಗಿನಾಳ, ತಾಲೂಕಾ ಬ್ಲಾಕ್ ಮಹಿಳಾ ಘಟಕದ ಅಧ್ಯಕ್ಷೆ ಶೋಭಭಾ ಶಳ್ಳಗಿ ಸೇರಿದಂತೆ ಹಲವರು ಇದ್ದರು.