ಲಿಂ. ಬಸವ ಮಹಾಸ್ವಾಮಿಗಳ 14ನೇ ಪುಣ್ಯ ಸ್ಮರಣೋತ್ಸವ

ಲೋಕದರ್ಶನ ವರದಿ

ಗೋಕಾಕ02: ಮಾನವ ಧರ್ಮ ಶ್ರೇಷ್ಠವಾಗಿದ್ದು ಮಾನವನ ಸವರ್ಾಂಗೀಣ ವಿಕಾಸಕ್ಕಾಗಿ ಧರ್ಮ ಗುರುಗಳು ಶ್ರಮಿಸುತ್ತಾರೆ ಎಂದು ಹೊಸದಿಲ್ಲಿಯ ಹಜರತ ಅಖದಸ್ ಮೌಲಾನಾ ಚತುವರ್ೇದಿ ಮಹಫುಜುರ ರಹಮಾನ ಶಾಹೀನ ಜಮಾಲಿ ಸಾಹಬ ಹೇಳಿದರು.

    ನಗರದ ಶೂನ್ಯ ಸಂಪಾದನಾ ಮಠದ ಶರಣ ಸಂಸ್ಕೃತಿ ಉತ್ಸವ ಮತ್ತು ಲಿಂ. ಬಸವ ಮಹಾಸ್ವಾಮಿಗಳ 14ನೇ ಪುಣ್ಯ ಸ್ಮರಣೋತ್ಸವ ಗದುಗಿನ ಜಗದ್ಗುರು ಮಹಾಸನ್ನಿಧಿ ಅವರಿಗೆ ಗುರುವಂದನೆ ಹಾಗೂ ಭಾವೈಕ್ಯತೆ ಸಮಾವೇಶದ ನೇತೃತ್ವವನ್ನು ವಹಿಸಿ ಮಾತನಾಡಿದರು.

         ಎಲ್ಲ ಧರ್ಮಗಳಿಗೆ ಧರ್ಮ ಗುರುಗಳು ಇರುತ್ತಾರೆ. ಮಾನವ ಧರ್ಮದ ಉದ್ಧಾರಕ್ಕಾಗಿ ಶ್ರಮಿಸುತ್ತಾ ಬಂದಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನಾವಿಂದು ಮುನ್ನಡೆಯಬೇಕು. ದೇವರಲ್ಲಿ ಪ್ರೀತಿ ವಿಶ್ವಾಸ ನಂಬಿಕೆಯಿಂದ ನಡೆದುಕೊಳ್ಳಬೇಕು. ನಮ್ಮ ಜೀವನ ಸ್ವರ್ಗದಂತೆ ಇರಬೇಕು. ಅದನ್ನು ನರಕವಾಗಲು ಬೀಡಬಾರದು. ದಯವೇ ಧರ್ಮದ ಮೂಲವಾಗಿದೆ. 

       ದೇಶದ ಕಲ್ಯಾಣಕ್ಕಾಗಿ ಮಹಾತ್ಮರ ಪೂಜ್ಯರ ಕೊಡುಗೆ ಅಪಾರವಾಗಿದೆ. ಮಾನವ ಜಾತಿ ಒಂದೇ ಇದೆ. ಅದನ್ನು ಸಾರ್ಥಕ ಪಡಿಸಿಕೊಳ್ಳಬೇಕು. ಮುರುಘರಾಜೇಂದ್ರ ಶ್ರೀಗಳ ಸಾಮಾಜಿಕ ಕಳಕಳಿ ಹಾಗೂ ಧಾಮರ್ಿಕತೆ ಅಪಾರವಾಗಿದೆ. ಕನರ್ಾಟಕದಲ್ಲಿ ಕನ್ನಡ ಭಾಷೆ ಹಾಗೂ ಬರಹಗಳು ಹೂವಿನ ಹಾಸಿಗೆಯಂತೆ ಶೃಂಗಾರಗೊಂಡಂತೆ ಇದೆ. ಕನರ್ಾಟಕವು ಸಾಹಿತ್ಯಿಕ,ಸಂಸ್ಕೃತಿಗೆ ಮತ್ತು ಭಾವೈಕ್ಯತೆಗೆ ಹೆಸರುವಾಸಿಯಾಗಿದೆ ಎಂದರು. 

 ಎಡೆಯೂರು ಡಂಬಳ-ಗದಗದ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ ಜಗದ್ಗುರು ತೋಂಟದ ಸಿದ್ಧರಾಮ ಮಹಾಸ್ವಾಮಿಜಿಯವರು ಗುರುವಂದನೆ  ಸ್ವೀಕರಿಸಿ ಆಶೀರ್ವಚನ ನೀಡಿದ ಅವರು ಜನರಲ್ಲಿ ಸಾಮರಸ್ಯ ಬಿಂಬಿಸಬೇಕು. ಭಾವೈಕ್ಯತೆಯಿಂದ ಬದುಕಬೇಕು. 

 ಎಲ್ಲರಲ್ಲಿಯೂ ಲೇಸನ್ನು ಬಯಸುವ ಮನೋಭಾವವನ್ನು ಮುರುಘರಾಜೇಂದ್ರ ಶ್ರೀಗಳು ಮಾಡಿದ್ದಾರೆ. ಗುರುಗಳ ಸ್ಮರಣೆಯಲ್ಲಿ ಶರಣ ಸಂಸ್ಕೃತಿ ಉತ್ಸವ ನಡೆಸುತ್ತಿರುವ ಕಾರ್ಯ ಶ್ಲಾಘನೀಯ. ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಹೆಚ್ಚಿನ ಸ್ಥಾನಮಾನ ಇದೆ. ಗುರು ಸಾಕ್ಷಾತ್ ಶಿವನ ಸ್ವರೂಪಿಯಾಗಿದ್ದಾನೆ.

  ಗುರುವಿನ ಮಾರ್ಗದರ್ಶನದಿಂದ ಸಾಧನೆ ಮಾಡಬೇಕು. ಮೋಕ್ಷ ಪಡೆಯಬೇಕಾದರೆ ಗುರುವಿನ ಸೇವೆ ಅತ್ಯಮೂಲ್ಯವಾಗಿದೆ. ಸಾಧಕರನ್ನು ಗುರುತಿಸಿ ಸನ್ಮಾನ ಮಾಡುತ್ತಿರುವ ಮುಖ್ಯವಾಗಿದೆ ಎಂದರು. 

              ಸಮಾಜದ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ಬಸವರಾಜ ಪಾವಟೆ, ಚಂದ್ರಪ್ಪ ಮೆಳವಂಕಿ, ಬಸವರಾಜ ಈಳಿಗೇರ, ಶ್ರೀಶೈಲ ವಜರ್ಿ, ಶ್ರೀಕಾಂತ ಗೋಕಾಕ, ಸುರೇಶ ನೇಗಿನಾಳ, ಶಿವಲಿಂಗಪ್ಪ ಬಳಿಗಾರ, ಬಸವಂತ ಕಮತಿ, ಸುಭಾಸ ಘೋರ್ಪಡೆ, ಪರುಶರಾಮ ಕೊಪ್ಪದ, ಸತೀಶ ಬನ್ನಿಶೆಟ್ಟಿ ಅವರನ್ನು ಸತ್ಕರಿಸಲಾಯಿತು. ಕಾರ್ಯಕ್ರಮವನ್ನು ಶರಣ ಸಂಸ್ಕೃತಿಕ ಉತ್ಸವ ಸಮಿತಿ ಅಧ್ಯಕ್ಷ ಮಲ್ಲಿಕಾಜರ್ುನ ಕಲ್ಲೋಳ್ಳಿ ಸ್ವಾಗತಿಸಿದರು. ಶಿಕ್ಷಕ ಎಸ್.ಕೆ.ಮಠದ ನಿರೂಪಿಸಿದರು. 

 ಆರ್.ಎಲ್.ಮಿಜರ್ಿ ವಂದಿಸಿದರು. ಅಮ್ಮಾಜಿ ನೃತ್ಯ ಶಾಲೆಯ ವಿದ್ಯಾಥರ್ಿಗಳಿಂದ ಭಾವೈಕ್ಯತೆ ಸಂದೇಶ ಸಾರುವ ನೃತ್ಯವು ಜನಮನಸೊರೆಗೊಂಡಿತು.

     ಶುಕ್ರವಾರದಂದು ಮುಂಜಾನೆ ಶಾಲಾ ವಿದ್ಯಾಥರ್ಿಗಳಿಂದ ಅರಿವು-ಶಿಕ್ಷಣ-ಆರೋಗ್ಯ ಕಾಲ್ನಡಿಗೆ ಜಾಥಾ ಜರುಗಿತು. ನಂತರ ಷಟ್ಸ್ಥಳ ಧ್ವಜಾರೋಹಣವನ್ನು ಡಿಸಿಸಿ ಬ್ಯಾಂಕ ಉಪಾಧ್ಯಕ್ಷ ಸುಭಾಸ ಢವಳೇಶ್ವರ ನೆರವೇರಿಸಿದರು.

ನಗರದ ಶೂನ್ಯ ಸಂಪಾದನಾ ಮಠದ ಶರಣ ಸಂಸ್ಕೃತಿ ಉತ್ಸವದ ಭಾವೈಕ್ಯತೆ ಸಮಾವೇಶದ ನೇತೃತ್ವವನ್ನು ವಹಿಸಿದ್ದ ಹಜರತ ಅಖದಸ್ ಮೌಲಾನಾ ಚತುವರ್ೇದಿ ಮಹಫುಜುರ ರಹಮಾನ ಶಾಹೀನ ಜಮಾಲಿ ಸಾಹಬ ಅವರನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು.