ಲೋಕದರ್ಶನ ವರದಿ
ಕೊಪ್ಪಳ 30: ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆಯ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಸಹ ಜರುಗಲಿರುವ ಜಿಲ್ಲಾ ಉತ್ಸವ ದಲ್ಲಿ ಎರಡನೇ ಬಾರಿಗೆ ನಡೆಯಲಿರುವ ಉದರ್ು ಕನ್ನಡಿಗರ ಸಾಂಸ್ಕೃತಿ ಸಮ್ಮೇಳನಕ್ಕೆ ಸವರ್ಾಧ್ಯಕ್ಷರಾಗಿ ನಿವೃತ್ತ ಉಪ ತಹಸೀಲ್ದಾರ ಎಂ.ಲಾಯಕ್ ಅಲಿ ಅವರು ಸವರ್ಾನುಮತದಿಂದ ಒಮ್ಮತದ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಕೊಪ್ಪಳದಲ್ಲಿ ರವಿವಾರ ಸಂಜೆ ಜರುಗಿದ ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆಯ ಪೂರ್ವಭಾವಿ ಸಿದ್ಧತ ಸಭೆಯಲ್ಲಿ ಚಚರ್ಿಸಿ ಎಂ. ಲಾಯಕ್ ಅಲಿ ಅವರ ಆಯ್ಕೆಗೆ ಸವರ್ಾನುಮತದ ಒಪ್ಪಿಗೆ ನೀಡಲಾಯಿತು. ಬರುವ ಆಗಸ್ಟ್ 23 ರಂದು ನಗರದ ಸಾಹಿತ್ಯ ಭವನದಲ್ಲಿ ಜರುಗಲಿರುವ ಜಿಲ್ಲಾ ಉತ್ಸವದಲ್ಲಿ ಉದರ್ು ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನ ಲಾಯಕ್ ಅಲಿ ಅಧ್ಯಕ್ಷತೆಯಲ್ಲಿ ಜರುಗಲಿದ್ದು ಅಂದು ಸಂಜೆ ಪ್ರವಾಸಿ ಮಂದಿರದಿಂದ ಸಾಹಿತ್ಯ ಭವನದವರೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಂತರ ಸಂಜೆ 5 ಗಂಟೆಗೆ ಸಮ್ಮೇಳನಾದ ಉದ್ಘಾಟನೆ ಅದೇ ದಿನ ರಾತ್ರಿ 9. 30 ಬಹುಭಾಷ ಕವಿಗೋಷ್ಠಿ ಜರುಗಲಿದೆ.
ಶನಿವಾರ ಜರುಗಿ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆಯನ್ನ ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ಅಧ್ಯಕ್ಷ ಜಿ.ಎಸ್.ಗೋನಾಳ ವಹಿಸಿದ್ದರು. ಸಭೆಯಲ್ಲಿ ಎಂ.ಸಾದಿಕ ಅಲಿ, ಹರೀಶ ಹೆಚ್.ಎಸ್. ಸಿದ್ದಪ್ಪ ಹಂಚಿನಾಳ, ಎಂ.ಡಿ.ಖಲೀಲ್ ಉಡೇವು, ಉಮೇಶ್ ಪೂಜಾರ್, ಶಿವಕುಮಾರ ಹಿರೇಮಠ ಸೇರಿದಂತೆ ಅನೇಕ ಪಾಲ್ಗೊಂಡಿದ್ದರು.