ಸಾಹಿತ್ಯವೆನ್ನುವುದು ಸಹೃದಯನಿಗೆ ಹಿತವನ್ನುಂಟು ಮಾಡುವುದು'

ಗದಗ: ಸಾಹಿತ್ಯವೆನ್ನುವುದು ಸಹೃದಯನಿಗೆ ಹಿತವನ್ನುಂಟು ಮಾಡುವುದೇ ಆಗಿದೆ, ಎಂಬುದನ್ನು 2000 ವರ್ಷಗಳ ಹಿಂದಿನ ಇತಿಹಾಸ ಹೊಂದಿದ ಕನ್ನಡ ಸಾಹಿತ್ಯದಲ್ಲಿ ಅದರಲ್ಲೂ ಆಧುನಿಕ ಕನ್ನಡ ಸಾಹಿತ್ಯದಲ್ಲಿ ಬೆಳೆದು ಬಂದು ವಿವಿಧ ಘಟ್ಟಗಳಿಂದಾದ ನವೋದಯ ನವ್ಯ ದಲಿತ ಬಂಡಾಯ ಸಾಹಿತ್ಯದ ಸಂದರ್ಭದಲ್ಲಿ ಬೆಳೆದುಬಂದ ಭಾವಗೀತೆ ಪ್ರಕಾರವನ್ನು ಕುರಿತು ಮಹತ್ವದ ಸಂಗತಿಗಳನ್ನು ಗದುಗಿನ ಸರಕಾರಿ ಪ್ರಥಮ ದಜರ್ೆ ಮಹಿಳಾ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾದ ಪ್ರೊ. ಸಿದ್ದಲಿಂಗ ಸಜ್ಜನಶೆಟ್ಟರ್ ಅವರು ಸಭೆಯನ್ನುದ್ದೇಶಿಸಿ ತಿಳಿಸಿದರು. 

ಕೆ.ಎಲ್.ಇ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಸಹಭಾಗಿತ್ವ ಹಾಗೂ ಸಾಹಿತ್ಯ ಸಂಘಗಳ ಸಂಯುಕ್ತಾಶ್ರಯದಲ್ಲಿ ದಿ. 25ರಂದು ಸಾಹಿತ್ಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 

ಈ ಭಾವಗೀತೆ ಸಾಹಿತ್ಯ ಪ್ರಕಾರವನ್ನು ಬೆಳೆಯಿಸುವಲ್ಲಿ ತಮ್ಮ ಕಾಣಿಕೆಯನ್ನು ನೀಡಿದ ಕುವೆಂಪು, ದರಾಬೇಂದ್ರೆ, ಚೆನ್ನವೀರಕಣವಿ, ಗೋಕಾಕ್, ದೇವನೂರು ಮಹಾದೇವ, ಸಿದ್ದಲಿಂಗಯ್ಯ, ಶಶಿಕಲಾ, ವೀರಯ್ಯಸ್ವಾಮಿ, ಮೂತರ್ಿ ಚಾಣಕ್ಯ ಮುಂತಾದ ಕವಿ-ಯತ್ರಿಯರು ಹಾಗೂ ಜನಪದ ಮತ್ತು ಶಿಷ್ಟ ಸಾಹಿತ್ಯದ ಉದಾಹರಿಸುತ್ತ ನಾವು ಓದಿದ ಸಾಹಿತ್ಯ ಪರಿಣಾಮ ಬೀರಬೇಕಾದರೆ, ಕೆಲವು ಸಂಗತಿಗಳನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ. ಉದಾಹರಣೆಗೆ ಬಸವನೆಂದರೆ ಪಾಪ ದೆಸೆಗೆಟ್ಟು ಹೋಗುವುದು ಪುಣ್ಯ ತಾ ಬರುವುದು. ಎಂಬುದನ್ನು ಬಸವನೆಂದರೆ 'ಪಾಪ' ದೆಸೆಗೆಟ್ಟ್ಟುಹೋಗುವುದು ಪುಣ್ಯ ತಾ ಬರುವುದು ಎಂದಾಗಿ ಓದಿದರೆ ಅರ್ಥ ಅಪಹಾಸ್ಯಕ್ಕೆ ಗುರಿಯಾಗುತ್ತದೆ. ಕಾರಣ ಹಾಗಾಗದಂತೆ ನೋಡುಲು ಕಾವ್ಯ ಓದುಗರ ಬರುವ ಕಾಗುಣಿತಾಕ್ಷರಗಳು, ಅಲ್ಪ ವಿರಾಮ, ಪೂರ್ಣ ವಿರಾಮ, ಜಾತಕ ಚಿನ್ಹೆ ಮುಂತಾದ ಚಿಹ್ನೆಗಳ ಮಾಹಿತಿ ತಿಳಿದಿರಬೇಕು ಎಂಬ ಸಂಗತಿಯನ್ನು ರಸವತ್ತಾದ ಉದಾಹರಣೆಗಳ ಮೂಲಕ ತಿಳಿಸಿದರು. ಛಂದೋಮುಕ್ತವಾದ ಸಾಹಿತ್ಯವು ರಸಾನಂದ ನೀಡುತ್ತದೆ. ರಸಾನಂದವೇ ಸಾಹೀತ್ಯದ ಉದ್ಧೇಶವೆಂದು ತಿಳಿಸಿದರು.

ಈ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗಾಗಿಯೇ ಇಂಗ್ಲಿಷ ಮತ್ತು ಕನ್ನಡ ಸಾಹಿತಿಗಳ ಕವನವಾಚನ ಪುಸ್ತಕ  ಪರಿಚಯ ಸ್ವರಚಿತ ಕವನ ವಾಚನ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಇದರಲ್ಲಿ ಕನ್ನಡದ ಬೇಂದ್ರೆ, ಕುವೆಂಪು, ಸಿದ್ದಲಿಂಗಯ್ಯ, ಲಂಕೇಶ್, ಚೆನ್ನವೀರಕಣವಿ ಕವಿಗಳ ಹಾಗೂ ಇಂಗ್ಲೀಷಿನ ವಿಲಿಯಂ ವಡ್ಸರ್್ವರ್ಥ, ಷೇಕ್ಸ್ಪಿಯರ್ ಜಾನ್ ಕೀಟ್ಸ್ ಮುಂತಾದ ಕವಿಗಳ ಕವನಗಳನ್ನು ವಾಚಿಸಿದರು. ಇದರಲ್ಲಿ ಅರ್ಚನಾ ಹಿರೇಮಠ, ಶರಣಬಸವ, ನಂದಿನಿ ಮಡಿವಾಳರ, ಎಲ್ಲಮ್ಮ ಹೊಸಳ್ಳಿ, ಗಂಗಮ್ಮ ಕಂಬಳಿ ಹಾಗೂ ಪ್ರಾಧ್ಯಾಪಕರಾದ ಡಾ.ಏ.ಕೆ.ಮಠ ಡಾ.ಎ.ವ್ಹಿ.ದೇವಾಂಗಮಠ ಪ್ರೊ. ಸಂಧ್ಯಾ ಕುಲಕರ್ಣಿ  ಪ್ರೊ.ಪಿ.ಜೆ. ಕಟ್ಟಿಮನಿ ಪ್ರೊ.ವೀಣಾ ತಿಲರ್ಾಪುರ ಹಾಗೂ ಡಾ.ವೀಣಾ.ಈ ಭಾಗಿಗಳಾಗಿದ್ದರು.

ಅಧ್ಯಕ್ಷೀಯ ನುಡಿಗಳನ್ನಾಡಿದ ಪ್ರಾಚಾರ್ಯರಾದ ಪ್ರೊ.ಎಂ.ಬಿ.ಕೊಳವಿಯವರು ಸಾಹಿತ್ಯವು ಜೀವನದ ಪ್ರತಿಬಿಂಬವಾಗಿದೆ ತಾಂತ್ರಿಕ ಜಗತ್ತಿನಲ್ಲಿ ಸಾಹಿತ್ಯವನ್ನು ಕಟ್ಟುವ ರಕ್ಷಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸ್ತುತ್ಯಾರ್ಹವಾದದು ಸಾಹಿತ್ಯ ಸಾಧನೆಗೆ ಇರುವ ಸಂಗತಿಗಳನ್ನು ತಿಳಿದು ಅಧ್ಯಯನಶೀಲತೆ ಸಾಹಿತ್ಯ ಕೃಷಿಗೆ ತೊಡಗಿ ತಮ್ಮಲ್ಲಿರುವ ಕವಿತ್ವವನ್ನು ಬೆಳಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆಯಿತ್ತರು. ಸಾಹಿತ್ಯ ಸಂಘದ ಚೇರಮನ್ ಪ್ರೊ. ಸಂಧ್ಯಾ ಕುಲಕಣರ್ಿಯವರು ಕಾರ್ಯಕ್ರಮದ ಉದ್ದೇಶ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜಶೇಖರ ಕೊಪ್ಪಳ ಪ್ರಾಥರ್ಿಸಿದರು ಪ್ರೊ. ಪಿ.ಜೆ.ಕಟ್ಟಿಮನಿ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಡಾ. ಎ.ವ್ಹಿ.ದೇವಾಂಗಮಠ ವಂದಿಸಿದರು. ಕುಮಾರಿ ಆಯುಷ ನಿರೂಪಿಸಿದರು. ಸಿಬ್ಬಂದಿವರ್ಗ ಮತ್ತು ವಿದ್ಯಾಥರ್ಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.