ಪ್ರವಚನ ಆಲಿಸುವುದರಿಂದ ಶಾಂತಿಯುತ ಸಮಾಜ ನಿರ್ಮಾಣ

ಲೋಕದರ್ಶನ ವರದಿ

ಬೈಲಹೊಂಗಲ 15: ಮಠಮಾನ್ಯಗಳಲ್ಲಿ ನಡೆಯುವ ಪ್ರವಚನ ಆಲಿಸಿ, ಜೀವನದಲ್ಲಿ ಅಳವಡಿಸಿಕೊಳ್ಳುವದರಿಂದ ಶಾಂತಿಯುತ ಸಮಾಜ ನಿರ್ಮಾಣವಾಗಿ ನೆಮ್ಮದಿಯ ಬದುಕು ಕಾಣಬಹುದು ಎಂದು ಮುರಗೋಡದ ದುರುದುಂಡೇಶ್ವ ಮಠದ ನೀಲಕಂಠ ಸ್ವಾಮೀಜಿ ಹೇಳಿದರು.

  ಅವರು ಪಟ್ಟಣದ ಶಾಖಾ ಮೂರುಸಾವಿರಮಠದ ಲಿಂ. ನೀಲಕಂಠ ಮಹಾಶಿವಯೋಗೀಶ್ವರರ ಜಾತ್ರಾ ಮಹೋತ್ಸವ ಹಾಗೂ ಲಿಂ. ಗಂಗಾಧರ ಸ್ವಾಮೀಜಿಗಳ 11  ನೇ ಪುಣ್ಯಸ್ಮರಣೋತ್ಸವ ನಿಮಿತ್ತ ಜರುಗಿದ ಜೀವನ ದರ್ಶನ ಪ್ರವಚನದ ಸಾನಿಧ್ಯವಹಿಸಿ ಮಾತನಾಡಿದರು. 

   ಲಿಂ. ಗಂಗಾಧರ ಶ್ರೀಗಳು 25 ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದರಿಂದ ಇಂದು ಸುಮಾರು 10 ಸಾವಿರ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಶ್ರೀಗಳು ನಾಡಿನ ಜನತೆಗೆ ಆದ್ಯಾತ್ಮಿಕತೆಯ ಸಾರವನ್ನು ಉಣಬಡಿಸುತ್ತಾ ಸಮಾಜ ಸುಧಾರಣೆಗೆ ಒತ್ತು ನೀಡಿದ್ದು ಅವೀಸ್ಮರಣೀಯವಾಗಿ ಇತರ ಮಠಮಾನ್ಯಗಳಿಗೆ ಮಾದರಿಯಾಗಿದೆ ಎಂದರು.

ಪುರಾಣ ಪ್ರವಚನಗಳಿಂದ ಜ್ಞಾನ ವೃದ್ದಿಯಾಗುತ್ತದೆ. ನಮ್ಮಲ್ಲಿಯ ಅಂಧಕಾರ ದೂರವಾಗುವದು. ಉತ್ತಮ ವ್ಯಕ್ತಿತ್ವ ರೂಪಗೊಳುವದು. ಮನಸ್ಸು ಹಗುರವಾಗುವದು. ಎಂದರು.

  ಪ್ರಭುನೀಲಕಂಠ ಸ್ವಾಮೀಜಿ ಸಾನಿಧ್ಯವಹಿಸಿ ಮಾತನಾಡಿ, ಶ್ರೀಮಠದಲ್ಲಿ ನಡೆಯುವ ಪ್ರವಚನದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ತಮ್ಮ ಜೀವನದಲ್ಲಿ ಹೆಚ್ಚಿನ ಸಂಸ್ಕಾರ ಅಳವಡಿಸಿಕೊಳ್ಳಬೇಕೆಂದರು. ಶಿವಾನಂದ ಮಠದ ಮಹಾದೇವ ಸರಸ್ವತಿ ಸ್ವಾಮೀಜಿ, ಉಪ್ಪಿನ ಬೆಟಗೇರಿಯ ಕುಮಾರ ವೀರುಪಾಕ್ಷ ಸ್ವಾಮೀಜಿ ಮಾತನಾಡಿ,  ಜನತೆಯ ಕಲ್ಯಾಣದ ಧ್ಯೇಯ ಹೊತ್ತಿರುವ ಮಠಮಾನ್ಯಗಳಲ್ಲಿ ನಡೆಯುವ ಆದ್ಯಾತ್ಮಿಕತೆಯತ್ತ ಹೆಚ್ಚಿನ ಒಲವು ತೊರಬೇಕು. 

   ನಾಡಿನ ಉದ್ಧಾರಕ್ಕಾಗಿ ಲಿಂ.ಗಂಗಾಧರ ಶ್ರೀಗಳು ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಿದ್ದು, ಅವರ ಮಾರ್ಗದರ್ಶನದಲ್ಲಿ ಶ್ರೀಮಠವನ್ನು ಉತ್ಸುಂಗಕ್ಕೆ ಏರಿಸುತ್ತಿರುವ ಪ್ರಭುನೀಲಕಂಠ ಸ್ವಾಮೀಜಿ ಅವರಿಗೆ ಭಕ್ತರು ಎಲ್ಲ ರೀತಿಯಿಂದ ಸಹಕರಿಸಿ ನಾಡಿನಲ್ಲಿ ಶ್ರೀಮಠದಿಂದ ಜನತೆಯ ಕಲ್ಯಾಣವಾಗಲು ಶ್ರಮಿಸಬೇಕೆಂದರು. ಯಡ್ರಾವಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಶರಣರ ಜೀವನ ದರ್ಶನ ಕುರಿತು ಪ್ರವಚನ ನಿಡಿದರು. ಜಿಪಂ ಮಾಜಿ ಸದಸ್ಯ ಬಾಬಾಸಾಹೇಬ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು. ನೀಲಕಂಠೇಶ್ವರ ಸಂಸ್ಥೆಯ ಕಾಯರ್ಾಧ್ಯಕ್ಷ ಸಿ.ಎಸ್. ಸಾಧುನವರ, ಮರ್ಚಂಟ್ಸ ಬ್ಯಾಂಕ್ ಅಧ್ಯಕ್ಷ ಬಸವರಾಜ ಮೂಗಿ, ಸಹಕಾರಿ ಧುರೀನ ಪ್ರಕಾಶ ಮೂಗಬಸವ, ಬಿಇಓ ಪಾರ್ವತಿ ವಸ್ತ್ರದ, ಡಿಡಿಪಿಐ ಕಚೇರಿ ಪರೀವಿಕ್ಷಕಿ ಶ್ರೀದೇವಿ ನಾಗನೂರ ಇದ್ದರು.  

  ಹಣಮಂತ ಪಾದಗಟ್ಟಿ, ಗಂಗಾಧರ ಕುಂಬಾರ ಅವರಿಂದ ಸಂಗೀತ ಸೇವೆ ಜರುಗಿತು. ಎಸ್.ಆರ್.ಕಲಹಾಳ ಸ್ವಾಗತಿಸಿದರು. ಎನ್.ಎಸ್. ಚಿಲಮೂರ ನಿರೂಪಿಸಿದರು. ಶೋಭಾ ಛಬ್ಬಿ ವಂದಿಸಿದರು.  

   ಸಂಸ್ಥೆಯ ನಿರ್ದೇಶಕ ಜಿ.ಎಸ್. ಹೂಲಿ, ಬಸವಪ್ರಭು ಬೆಳಗಾವಿ, ಎಸ್.ಎಫ. ಹರಕುಣಿ, ತಿಪ್ಪಣ್ಣ ಬಿಳ್ಳೂರ, ಶಂಕರೆಪ್ಪ ತುರಮರಿ, ವೀರನಗೌಡ ಪಾಟೀಲ, ಶಿವಬಸಪ್ಪ ತುರಮರಿ, ಮಹಾಂತೇಶ ಅಕ್ಕಿ, ಮಡಿವಾಳಪ್ಪ ಹೋಟಿ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ನೂರಾರು ಸದ್ಭಕ್ತರು ಇದ್ದರು.