ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ನ.23 ರಿಂದ 25ರವರೆಗೆ ಮಿಂಚಿನ ಕಾಯರ್ಾಚರಣೆ: ಜಿಲ್ಲಾಧಿಕಾರಿ

ಕಾರವಾರ 20 : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾರರ ಪಟ್ಟಿಯಲ್ಲಿ  ಯುವ ಮತದಾರರ ಸೇರ್ಪಡೆಗೆ ನ.23 ಮತ್ತು ನ.24 ಹಾಗೂ ನ.25 ರಂದು ಮಿಂಚಿನ ನೊಂದಣಿ ಅಭಿಯಾನ ನಡೆಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಹೇಳಿದರು.

ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತದಾರರ ಯಾದಿಯಿಂದ ಯಾರ ಹೆಸರೂ ಬಿಟ್ಟು ಹೋಗದಂತೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ರಾಜ್ಯ ಚುನಾವಣೆ ಆಯೋಗದ ಮುಖ್ಯ ಆಯುಕ್ತ ಸಂಜೀವಕುಮಾರ್ ಅವರ ನಿದರ್ೇರ್ಶನದಡಿಯಲ್ಲಿ ಈ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇದಲ್ಲದೇ ಮನೆಯಲ್ಲಿಯೇ ಸಂಪೂರ್ಣವಾಗಿ ಹಾಸಿಗೆ ಹಿಡಿದ ಅಂಗವಿಕಲರಿಗೆ ಅನುಕೂಲ ಕಲ್ಪಿಸಲು ಹೊಸ ಯೋಜನೆ ಪ್ರಾರಂಭಿಸಲಾಗುತ್ತಿದೆ. ಅವರನ್ನು ಮತದಾನ ಕೇಂದ್ರಕ್ಕೆ ಕರೆತರಲು ಆಯೋಗದ ವತಿಯಿಂದ ವಾಹನ ವ್ಯವಸ್ಥೆ ಮಾಡಲು ಜಿಲ್ಲಾಡಳಿತ  ಮುಂದಾಗಿದೆ ಎಂದರು.

ಮುಂಬರುವ ಚುನಾವಣೆ ಪ್ರಯುಕ್ತ ಮತದಾನ ಯಂತ್ರಗಳನ್ನು ದುರಸ್ತಿಗೊಳಿಸಿ, ಸುಸ್ಥಿತಿಯಲ್ಲಿಡುವ ಕಾರ್ಯ ಭರದಿಂದ ಸಾಗಿದೆ. ಈಗಾಗಲೇ ಹತ್ತು  ತಾಲೂಕುಗಳ ಕಾರ್ಯ ಪೂರ್ಣಗೊಂಡಿದ್ದು,ಬಾಕಿ ಉಳಿದಿರುವ ಇನ್ನು ಎರಡು ತಾಲೂಕುಗಳ ಕಾರ್ಯ ಇನ್ನೆರಡು ದಿನಗಳಲ್ಲಿ ಮುಗಿಯಲಿದೆ ಎಂದರು.

ಸೀಬಡರ್್ ಪರಿಹಾರ ಶೇ.95 ರಷ್ಟು ಪೂರ್ಣ:

ಸೀಬಡರ್್ ನೌಕಾನೆಲೆ ನಿರಾಶ್ರಿತರ ಪರಿಹಾರ ಪೂರ್ಣ ಪ್ರಮಾಣದಲ್ಲಿ ನೀಡಲಾಗಿದೆಯೇ ಎಂಬ ಬಗ್ಗೆ  ಸಾರ್ವಜನಿಕರಲ್ಲಿ ಸಾಕಷ್ಟು ಗೊಂದಲಗಳಿವೆ.ಶೇ.95 ರಷ್ಟು ಸೀಬಡರ್್ ಪರಿಹಾರ ನೀಡಲಾಗಿದೆ ಎಂದರು.

 ಬಾಕಿ ಉಳಿದ 861 ನಿರಾಶ್ರಿತರ ಪ್ರಕರಣಗಳಿಗೆ  ಸರಕಾರ ಸದ್ಯ 206.81 ಕೋಟಿ ರೂ.ಪರಿಹಾರ ಹಣ ಬಿಡುಗಡೆ ಮಾಡಿತ್ತು.   ಈಗಾಗಲೇ 861 ಪ್ರಕರಣಗಳಲ್ಲಿ 855 ಪ್ರಕರಣಗಳಿಗೆ ಅಂತಿಮ ಪರಿಹಾರ ನೀಡಲಾಗಿದೆ. ಉಳಿದ 6 ಪ್ರಕರಣಗಳು ಕಾರಣಾಂತರಗಳಿಂದ ಬಾಕಿ ಉಳಿದಿವೆ. ಅಲ್ಲದೇ ಕೌಟುಂಬಿಕ ಸಮಸ್ಯೆ ಕಾರಣಗಳಿಂದ 79 ಪ್ರಕರಣಗಳು ಬಾಕಿ ಉಳಿದಿದ್ದು,12.80 ಕೋಟಿ ಪರಿಹಾರ ಕಾಯ್ದಿರಿಸಲಾಗಿದೆ. ಕೌಟುಂಬಿಕ ಪ್ರಕರಣಗಳು ನಮ್ಮ ಕಚೇರಿ ವ್ಯಾಪ್ತಿಯಲ್ಲಿ ಬಗೆ ಹರಿಯದಿದ್ದರೆ , ವ್ಯಾಜ್ಯ ಇರುವ ಪ್ರಕರಣಗಳ ಹಣವನ್ನು ಕೋರ್ಟಗೆ ಜಮಾ ಮಾಡಲಾಗುವುದು ಎಂದರು. ಒಟ್ಟಾರೆ ಶೇ.95 ರಷ್ಟು ಸೀಬಡರ್್ ಪರಿಹಾರ ನೀಡಿದಂತಾಗುತ್ತದೆ ಎಂದರು.

ತಾಲೂಕಿನಲ್ಲಿ ಮರಳುಗಾರಿಕೆಗೆ ಅಡ್ಡಿಯಾಗಿರುವುದು ಸಿವಿಸಿ ವರದಿ:

ಕಾಳಿನದಿಯಲ್ಲಿ ಮರಳುಗಾರಿಕೆಗೆ ಅವಕಾಶ ನೀಡಲು  ಸೆಂಟ್ರಲ್ ವಿಜಿಲೆನ್ಸ ವರದಿ ಅಡ್ಡಿಯಾಗಿದೆ. ಜಿಲ್ಲಾಡಳಿತದಿಂದ ಏನು ಮಾಡದ ಸನ್ನಿವೇಶ ಇದೆ ಎಂದು  ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು. ಮರಳಿಗಾಗಿ ಆಗ್ರಹಿಸಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಅವರಿಗೆ  ಅಂಕೋಲಾದಿಂದ ಮರಳು ಪಡೆಯುವಂತೆ ಸೂಚಿಸಲಾಗಿದೆ. ಕಾಳಿ ನದಿಯಲ್ಲಿ ಮರಳುಗಾರಿಕೆಗೆ ಅನುಮತಿ ನೀಡುವಂತೆ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿತ್ತು.ಆದರೆ ಮೀನು ಸಂತತಿ ರಕ್ಷಣೆಗಾಗಿ ಕಾಳಿ ನದಿಯಲ್ಲಿ ಮರಳುಗಾರಿಕೆಗೆ ಸಿವಿಸಿ ಅನುಮೋದನೆ ದೊರೆತಿಲ್ಲ.

ಅಘನಾಶಿನಿಯಲ್ಲಿ 5 ಕಡೆ ಮರಳು ತೆಗೆಯಲು ಅನುಮತಿ:

ಪ್ರಸ್ತುತ ಗಂಗಾವಳಿ ನದಿಯಲ್ಲಿ 1, ಅಘನಾಶಿನಿಯಲ್ಲಿ 5 ಕಡೆ,  ಹಾಗೂ ಶರಾವತಿ ನದಿಯಲ್ಲಿ 2 ಮರಳು ದಿಬ್ಬಗಳಲ್ಲಿ ಮರಳು ತೆಗೆಯಲು  ಅನುಮೋದನೆ ದೊರೆತಿದೆ. ಅಲ್ಲಿ ಮಾತ್ರ ಮರಳು ತೆಗೆಯಲು ಅವಕಾಶವಿದೆ. ಜಿಲ್ಲಾಡಳಿತ 11ಲಕ್ಷ ಮೆಟ್ರಿಕ್ ಟನ್ ಮರಳಿಗಾಗಿ ಪ್ರಸ್ತಾವನೆ ಸಲ್ಲಿಸಿದ್ದು, 4ಲಕ್ಷ ಮೆಟ್ರಿಕ್ ಟನ್ ಮರಳುಗಾರಿಕೆಗೆ ಮಾತ್ರ ಅನುಮತಿ ದೊರೆತಿದೆ ಎಂದರು. ಶಿರಸಿ ಹಾಗೂ ಹಳಿಯಾಳದಲ್ಲಿ ಆಶ್ರಯ ಹಾಗೂ ಇಂದಿರಾ ಆವಾಸ್ ಯೋಜನೆಯ ಫಲಾನುಭವಿಗಳು ಸೇರಿದಂತೆ,ಸಾರ್ವಜನಿಕರ ಅನುಕೂಲಕ್ಕಾಗಿ ಮರಳು ಯಾಡರ್್ ಸ್ಥಾಪಿಸಲಾಗಿದೆ ಎಂದರು.

   ಮರಳು ಅಭಾವ ಸರಿಪಡಿಸಲು ಮಲೇಶಿಯಾದಿಂದ ಮರಳು ತರಿಸುವ ಬಗ್ಗೆ ಚಿಂತಿಸಲಾಗಿದೆ. ಕಾರವಾರ ಬಂದರಿನ ಮೂಲಕ ಮರಳನ್ನು ಇಳಿಸಿಕೊಳ್ಳುವದು ಸುಲಭವಾಗುತ್ತದೆ. ವಿದೇಶಿ ಮರಳು ಬಂದಲ್ಲಿ ಮರಳು ಸಮಸ್ಯೆ ದೂರವಾಗಬಹುದು ಎಂದರು.

ಚೀರೆಕಲ್ಲು ಗಣಿಗಾರಿಕೆ ನಿಯಂತ್ರಣಕ್ಕೆ ಕ್ರಮ:

ಚೀರೆಕಲ್ಲು ಗಣಿಗಾರಿಕೆಗೆ ಸಂಬಂಧಿಸಿದಂತೆ ಅಜರ್ಿ ಸಲ್ಲಿಸಿದರೆ ಅನುಮತಿ ನೀಡಲಾಗುತ್ತದೆ. ಸರಕಾರಿ ಜಾಗದಲ್ಲಿ ಚೀರೆಕಲ್ಲು ತೆಗೆಯಲು ಅನುಮತಿ ಇಲ್ಲ. ಖಾಸಗಿ ಜಾಗ ಹೊಂದಿದವರು ದಾಖಲೆಗಳೊಂದಿಗೆ ಅಜರ್ಿ ಸಲ್ಲಿಸಿದರೆ ಅನುಮತಿ ನೀಡಲಾಗುವದು ಎಂದರು. ಅಪರ ಜಿಲ್ಲಾಧಿಕಾರಿ ಸುರೇಶ್ ಇಟ್ನಾಳ್ ಇದ್ದರು.