ಮೂಡಲಗಿ: ಲೆಪ್ಟಿನೆಂಟ್ ಸೂರ್ಯನಾರಾಯಣಗೆ ಸನ್ಮಾನ

ಮೂಡಲಗಿ 26: ಕಿರಿಯ ವಯಸ್ಸಿನಲ್ಲಿ ಭಾರತೀಯ ಸೇನೆಗೆ ಲೆಪ್ಟಿನೆಂಟ್ ಉನ್ನತದ ಹುದ್ದೆಗೆ ಆಯ್ಕೆಯಾಗಿರುವ ಮೂಡಲಗಿಯ ಸೂರ್ಯನಾರಾಯಣ ಹಗೇದ ಅವರನ್ನು ಸ್ಥಳೀಯ ವಿಶ್ವಾಸ ಅರ್ಬನ್ ಕೋ-ಆಫ್ ಸೊಸಾಯಿಟಿಯ ವತಿಯಿಂದ  ಸನ್ಮಾನಿಸಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸ ಮಾತನಾಡಿ ಅವರು 'ಪರಿಶ್ರಮ ಇದ್ದಲ್ಲಿ ಯಶಸ್ಸು ಇರುತ್ತದೆ. ತಾವೂಗಳು ನೀಡಿದ ಸನ್ಮಾನವು ನನ್ನಲ್ಲಿ ದೇಶ ಸೇವೆ ಮಾಡುವ ಕೆಚ್ಚನ್ನು ಹೆಚ್ಚಿಸಿದೆ' ಎಂದರು. ಸೂರ್ಯನಾರಾಯಣ ಅವರ ತಂದೆ ಮಾಜಿ ಸೈನಿಕ ನಿಂಗಪ್ಪ ಹಗೇದ ಹಾಗೂ ಜಿ.ಎಸ್ ಬಿಜಗುಪ್ಪಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷ ರಾಮಚಂದ್ರ ಕಂಕಣವಾಡಿ, ಉದ್ದಪ್ಪ ಬಬಲಿ, ಪಿಕೆಪಿಎಸ್ ನಿದರ್ೇಶಕ ಈಶ್ವರ ಕಂಕಣವಾಡಿ, ಶಿವಬಸು ಕಂಕಣವಾಡಿ, ಮುಕೇಶ ಕಂಕಣವಾಡಿ, ಹಾಲ`ಪ್ಪ ಕಂಕಣವಾಡಿ, ಗೋಪಾಲ ಕಂಕಣವಾಡಿ, ಬಸವರಾಜ ಕಬ್ಬೂರ, ವಿಠ್ಠಲ ಕುಟ್ರಿ, ಶಿವಾನಂದ ಬಬಲಿ ಇದ್ದರು.