ಗ್ರಂಥಾಲಯ ಸಪ್ತಾಹ ಕಾರ್ಯಕ್ರಮ

ಲೋಕದರ್ಶನವರದಿ

ರಬಕವಿ-ಬನಹಟ್ಟಿ: ಓದುವುದರಿಂದ ಜ್ಞಾನ ವೃದ್ಧಿಯಾಗುತ್ತದೆ. ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಗ್ರಂಥಾಲಯಕ್ಕೆ ಸ್ವಂತ ಸೂರು ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ರಬಕವಿ ಬನಹಟ್ಟಿ ನಗರಸಭೆಯ ಸದಸ್ಯ ಸಂಜಯ ತೆಗ್ಗಿ ಹೇಳಿದರು. 

ಅವರು ರಬಕವಿ ಶಾಖಾ ಗ್ರಂಥಾಲಯದಲ್ಲಿ ನಡೆದ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬಾಗಲಕೋಟ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸದಸ್ಯ ಹಾಸ್ಯ ಸಾಹಿತಿ ಯಶವಂತ ವಾಜಂತ್ರಿ ಮಾತನಾಡಿ ಗ್ರಂಥಾಲಯಗಳ ಉಪಯೋಗದಿಂದ ನಾಗರಿಕ ಸಮಾಜ ಸುಧಾರಿಸುತ್ತದೆ. ಜನರಲ್ಲಿ ಜ್ಞಾನ ಬೆಳೆಯುತ್ತದೆ. ಒಳ್ಳೆಯದು ಕೆಟ್ಟದ್ದು ವಿಚಾರ ಮಾಡುವ ಶಕ್ತಿ ಬೆಳೆಯುತ್ತದೆ ಎಂದರು. ಪತ್ರಕರ್ತ ಶಿವಾನಂದ ಮಹಾಬಳಶೆಟ್ಟಿ ಮಾತನಾಡುತ್ತ ವಿದ್ಯಾರ್ಥಿಗಳು ಗ್ರಂಥಾಲಯದ ಸದುಪಯೋಗ ಮಾಡಿಕೊಳ್ಳಬೇಕೆಂದರು. ಅಡಿವೆಪ್ಪ ಭಾವಲತ್ತಿ, ಶಂಕರ ಮೂತರ್ೆಲಿ ಮಾತನಾಡಿದರು. ಸಿದ್ದರಾಮ ಸೊಲ್ಲಾಪೂರ, ಕಾಡಪ್ಪ ಖಪಲಿ, ಮಹಾದೇವ ತೋಟಗೇರ ಮುಂತಾದವರು ಉಪಸ್ಥಿತರಿದ್ದರು