ಲೋಕದರ್ಶನ ವರದಿ
ಬೈಲಹೊಂಗಲ: ರಾಮದುರ್ಗ ತಾಲೂಕಿನ ವಿವಿಧ ಗ್ರಾಮಗಳಲ್ಲಿದ್ದ 90 ಜನ ಜೀತದಾಳುಗಳಿಗೆ ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಜೀತ ಪದ್ಧತಿಯಿಂದ ವಿಮುಕ್ತಿಗೊಳಿಸಿ ಬುಧವಾರ ಬಿಡುಗಡೆ ಪತ್ರ ನೀಡಿದರು.
ರಾಮದುರ್ಗ ತಾಲೂಕಿನ ಚುಂಚನೂರನಲ್ಲಿನ 22, ಕುಳ್ಳೂರ 22, ಕಮಕೇರಿ 18, ಬುದ್ನಿ 6, ತೊಂಡಿಗಟ್ಟಿ 18, ರಾಮದುರ್ಗ 4 ಜೀತದಾಳುಗಳಿದ್ದರು. ಜೀವಿಕ ಸಂಘಟನೆಯವರು ಜೀತದಾಳುಗಳನ್ನು ಗುರುತಿಸಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ಗ್ರಾಮ ಪಂಚಾಯತ ಕಮೀಟಿ ಮೂಲಕ ಸವರ್ೇ ಮಾಡಿಸಿ ಪತ್ತೆ ಮಾಡಿದ್ದರಿಂದ 90 ಜನ ಜೀತದಾಳುಗಳು ದೊರೆತ್ತಿದ್ದಾರೆ. ಅವರಿಗೆ ಬಿಡುಗಡೆ ಭಾಗ್ಯ ದೊರೆತ್ತಿದ್ದು, ಬಿಡುಗಡೆ ಹೊಂದಿದ 90 ಜನರು ಖುಷಿಖುಷಿಯಾಗಿ ಉಪವಿಭಾಗಾಧಿಕಾರಿಗಳ ಕಚೇರಿಯಿಂದ ಹೊರ ಬಂದರು.
ಜೀವಿಕ ಸಂಘಟನೆ ಜಿಲ್ಲಾ ಸಂಚಾಲಕ ರುದ್ರಪ್ಪ ಮುಂದಿನಮನಿ, ಸಂಚಾಲಕ ಕೃಷ್ಣಾ ಸಾಲಿಮನಿ, ಒಕ್ಕೂಟ ಅಧ್ಯಕ್ಷ ಲಕ್ಕಪ್ಪ ಜಟ್ಟೇನ್ನವರ, ಸಿದ್ದಪ್ಪ ಜಟ್ಟೆನ್ನವರ ಇದ್ದರು.