ಹೊಸಪೇಟೆ: ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಹೊಸಪೇಟೆ ವಕೀಲರ ಸಂಘದ ಪದಧಿಕಾರಿಗಳು ಮತ್ತು ಹಿರಿಯ ವಕೀಲರ ಸಮ್ಮುಖದಲ್ಲಿ ಮಾನ್ಯ ಕಾನೂನು ಮತ್ತು ಸಂದೀಯ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿ ಇವರಿಗೆ ಹೊಸಪೇಟೆಗೆ ಹಾಗೂ ಸುತ್ತಮುತ್ತಲಿನ ತಾಲೂಕುಗಳಾದ ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ, ಹಡಗಲಿ, ಹರಪನಹಳ್ಳಿಯ ಕಕ್ಷಿದಾರರಿಗೆ ಹಾಗೂ ವಕೀಲರುಗಳಿಗೆ ಸಾರ್ವಜನಿಕರ ಹಿತದೃಷ್ಠಿಯಿಂದ ಹೊಸಪೇಟೆಗೆ ಹೆಚ್ಚುವರಿವಿಶೇಷ ಜಿಲ್ಲಾ ಸತ್ರ ನ್ಯಾಯಾಲಯಗಳಾದ ಪೊಕ್ಸೊ, ಜಾತಿನಿಂದನೆ ಪ್ರಕರಣ ಕಾರ್ಮಿಕರ ನ್ಯಾಯಾಲಯಗಳು ಶೀಘ್ರವೇ ಮಾಡಿಸಿಕೊಡಬೇಕೆಂದು ಮನವಿ ಸಲ್ಲಿಸಲಾಯಿತು.
ಸಚಿವರಾದ ಜೆ.ಸಿ.ಮಾಧುಸ್ವಾಮಿಯವರು ದಿನಾಂಕ: 10.09.2019ರಂದು ಹೊಸಪೇಟೆಯಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಪಾಲ್ಗೊಂಡು ಸಮಯದಲ್ಲಿ ವಕೀಲರ ಸಂಘವು ಮನವಿ ಪತ್ರ ಸಲ್ಲಿಸಿದ್ದು, ತಕ್ಷಣವೇ ಸಚಿವರುಗಳಾದ ಜೆ.ಸಿ. ಮಾಧುಸ್ವಾಮಿ ಇವರುಗಳು ಕರ್ನಾಟಕದ ಉಚ್ಛನ್ಯಾಯಾಲಯದ ನ್ಯಾಯಮೂರ್ತಿಗಳೊಂದಿಗೆ ಚಚರ್ಿಸಿ ನಿಮ್ಮ ಬೇಡಿಕೆಗೆ ಪ್ರಯತ್ನಿಸುತ್ತೆನೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ತಾರಿಳ್ಳಿ ಹನುಮಂತಪ್ಪ, ಪ್ರ.ಕಾರ್ಯದರ್ಶಿ, ಜಿ.ಕೊಟ್ರಗೌಡ, ಹಿರಿಯ ವಕೀಲರುಗಳಾದ ಕೆ.ಪ್ರಭಾಕರ ರಾವ್, ಕೆ.ಪ್ರಹ್ಲಾದ್, ಟಿ.ಹೆಚ್.ಎಮ್.ನಂಜುಂಡೇಶ್ವರ, ಪುಮಡಲಿಕ ಪ್ರಭು, ಬಿ.ಸಿ.ಮಹಾಂತೇಶ್, ಪಿ.ಶ್ರೀನಿವಾಸಮೂತರ್ಿ, ಯು.ಗೋಪಾಲ್, ಶ್ವೇತಾಂಬರಿ, ಹೆಚ್, ಮಹೇಶ್, ಅನೀಲ್, ಜಾಕೀರ್, ಇನ್ನಿತರರು ಉಪಸ್ಥಿತರಿದ್ದರು.