ಪ್ಲಾಸ್ಟಿಕ್ ಮುಕ್ತ ಭಾರತಕ್ಕೆ ಶ್ರಮಿಸೋಣ: ಎಸ್. ಜಿ. ಪೂಜೇರಿ

ಲೋಕದರ್ಶನ ವರದಿ

ಚಿಂಚಲಿ 05: ಪರಿಸರ ಸಂರಕ್ಷಣೆ ಮೂಲ ಕರ್ತವ್ಯವಾಗಬೇಕು. ನಮ್ಮ ಹಿಂದಿನ ಪೀಳಿಗೆ ಕೊಟ್ಟು ಪರಿಸರನ್ನು ಕಾಪಾಡಿ ಶುದ್ಧವಾಗಿ ಮುಂದಿನ ಪೀಳಿಗೆಗೆ ನೀಡಬೇಕು. ಪ್ಲಾಸ್ಟಿಕ್ ಮಾನವ ವಿರೋಧಿಯಾಗಿದೆ. ಜೀವ ಸಂಕುಲವನ್ನು ನಾಶಮಾಡುತ್ತಿದೆ. ಆದ್ದರಿಂದ ಈ ಸಮಾಜವನ್ನು ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣ ಮಾಡಲು ಕೈ ಜೋಡಿಸುವಂತೆ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಎಸ್. ಜಿ. ಪೂಜೇರಿ ಹೇಳಿದರು.

ಅವರು ಪಟ್ಟಣ ಪಂಚಾಯತಿ ಕಾರ್ಯಾಲಯವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಹಾಗೂ ಲಾಲಬಾಹಾದ್ದೂರ ಶಾಸ್ತ್ರೀ ಜಯಂತಿ ನಿಮಿತ್ಯ ಪ್ಲಾಸ್ಟಿಕ್ ನಿಷೇಧಿಸಿ ಪರಿಸರ ಉಳಿಸೋಣ ಅಭಿಯಾನದಲ್ಲಿ ಮಾತನಾಡಿ ಈ ಪ್ಲಾಸ್ಟಿಕ್ ನಮ್ಮ ಭೂಮಿಯೊಳಗೆ ಸೇರಿ ಪರಿಸರದ ಮೇಲೆ ಪ್ರತಿಕೂಲ ಬೀರುತ್ತಿದೆ. ಪ್ಲಾಸ್ಟಿಕ್ ಪರಿಸರ ನಾಶ ಮಾಡುತ್ತಿದೆ. ಪ್ಲಾಸ್ಟಿಕ್ ಬಳಕೆ ಮಾಡದೆ ಇದ್ದರೆ ದನಕರಗಳು ಪ್ಲಾಸ್ಟಿಕ್ ತಿನ್ನುವುದನ್ನು ಆದ್ದರಿಂದ ಸಮಾಜದ ಪ್ರತಿಯೋಬ್ಬ ನಾಗರಿಕರು ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣ ಮಾಡಿ ಪರಿಸರ ಸಂರಕ್ಷಣೆ ಮಾಡುವುದು ನಮ್ಮ ಕರ್ತವ್ಯವಾಗಿದೆ. ದಿನ ನಿತ್ಯ ನಾವು ತಿಳಿದೋ ತಿಳಿಯದೆಯೇ ಶೇ 60% ರಷ್ಟು ಪ್ಲಾಸ್ಟಿಕ್ ಉಪಯೋಗ ಮಾಡುತ್ತಿದ್ದೇವೆ ಇದರಿಂದ ಸಮಾಜಕ್ಕೆ  ಮಾರಕವಾಗಿ ಪರಿಣಮಿಸುತ್ತಿದೆ. ಪ್ಲಾಸ್ಟಿಕ್ ಮುಕ್ತ ಭಾರತಕ್ಕೆ ಶ್ರಮಿಸಬೇಕಿದೆ ಸಮುದ್ರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪ್ಲಾಸ್ಟಿಕ್ ಬೀಳುತ್ತಿರುವುದರಿಂದ  ಜಲಚರ ಜೀವಿಗಳ ಹೊಟ್ಟೆಯಲ್ಲಿ ಪ್ಲಾಸ್ಟಿಕ್ನಿಂದ ಜೀವ ಕಳೆದುಕೊಳ್ಳುತ್ತಿವೆ. ಇದಕ್ಕೆ ನಾವುಗಳು ಕಡಿವಾಣ ಹಾಕಲು ಒಗ್ಗಟ್ಟಿನಿಂದ ಶ್ರಮಿಸಬೇಕಿದೆ ಎಂದು ಮುಖ್ಯಾಧಿಕಾರಿ ಎಸ್. ಈ. ಪೂಜೇರಿ ಹೇಳಿದರು.

ಪ್ಲಾಸ್ಟಿಕ್ ಮುಕ್ತ ಭಾರತ ನಿರ್ಮಾಣ ಮಾಡಲು ಜನರು ಸಂಕಲ್ಪ ಮಾಡಬೇಕು. ಕಳೆದ ಒಂದು ವರ್ಷದಲ್ಲಿ ಸಾಕಷ್ಟು ಬದಲಾಣೆಯಾಗಿದೆ. ಆನ ಪ್ಲಾಸ್ಟಿಕ್ ಬಳಸುವುದನ್ನು ತ್ಯಜಿಸಿದಾಗ ಮಾತ್ರ ಹಂತ ಹಂತವಾಗಿ ಪ್ಲಾಸ್ಟಿಕ್ ಮುಕ್ತವಾಗುವುದ್ದು. ಮನೆಯಲ್ಲಿ ಉಪಯೋಗಿಸುವ ಪ್ಲಾಸ್ಟಿಕ್ ಬಳೆಕೆಯ ತ್ಯಾಜ್ಯದಿಂದ ಸಾವಿರಾರು ಪ್ರಾಣಿ ಸಂಕುಲಗಳು ಪ್ಲಾಸ್ಟಿಕ್ ಚೀಲಗಳು ಪ್ಲಾಸ್ಟಿಕ್  ಮುಕ್ತ ಭಾತರಕ್ಕೆ ಮೊದಲು ಮನೆಯಿಂದಲೇ ಸಂಕಲ್ಪ ಪ್ರಾರಂಭವಾಗಬೇಕು. ಬಳಿಕ ಸಮಾಜಕ್ಕೆ ತಿಳಿಸುವ ಕಾರ್ಯವನ್ನು ಪ್ರತಿಯೊಬ್ಬರು ಮಾಡಬೇಕೆಂದು ಗ್ರಾಮಲೇಕಾಧಿಕಾರಿ ಜಗದೀಶ ಕಿತ್ತೂರ ಪ್ರಾಸ್ತಾವಿಕಾಗಿ ಪ್ಲಾಸ್ಟಿಕ್ ಮುಕ್ತ ಮಾಡು ಬಗ್ಗೆ ಮಾತನಾಡಿದ್ದರು.

ಸಮಾರಂಭದಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ಲಾಸ್ಟಿಕ್ ನಿಷೇಧಿಸಿ ಪರಿಸರ ಉಳಿಸಿ ಮುಂದೆ ಎಂದಿಗೂ ಪ್ಲಾಸ್ಟಿಕ್ ಬಳಕೆ ಮಾಡದಿರಲು ಪ್ರತಿಜ್ಞಾ ಬೋಧಿಸಲಾಯಿತು. ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜಾಥ ಮುಖಾಂತರ ಪ್ಲಾಸ್ಟಿಕ್ ನಿಷೇಧಿಸಿ ಪರಿಸರ ಉಳಿಸಿ ಎಂಬ ಘೋಷಣೆಯೊಂದಿಗೆ ಜನರಲ್ಲಿ ಪ್ಲಾಸ್ಟಿಕ್ ಬಳಕೆ ಮಾಡದಂತೆ ಜಾಗೃತಿ ಮೂಡಿಸಲಾಯಿತು. ಪಟ್ಟಣ ಪಂಚಾಯತಿ ಸದಸ್ಯ ಅಕುಂಶ ಜಾಧವ, ಜಾಕೀರ ತರಡೆ, ಸಂಜು ಮೈಶಾಳೆ, ಮಾಹಾದೇವ ಪಡೋಳಕರ. ಭರತೇಶ ಗಣ್ಣಿ, ಸುಭಾಷ ಮಲಾಜುರೆ, ಸಭಾಜಿ ಶಿಂದೆ. ಸಂಜು ನಿಗನೂರೆ, ಲಕ್ಷ್ಮಣ ಕೋಳಿಗುಡ್ಡೆ, ಮಾರುತಿ ನಾಗರಾಜ ವಡ್ಡರ, ಮೀರಾಸಾಬ ಕೊಥಳ್ಳಿ ಹಾಗೂ ಪಟ್ಟಣದ ಗಣ್ಯರು ಉಪಸ್ಥಿತರಿದ್ದರು.