ಉಗ್ರಾಣಗಳು ಜನೋಪಯೋಗಿಯಾಗಲಿ: ಸಿದ್ದು ಸವದಿ

ಲೋಕದರ್ಶನವರದಿ

ಮಹಾಲಿಂಪುರ03: ರೈತರು ವರ್ಷಪೂತರ್ಿ ಬೆವರು ಸುರಿಸಿ ದುಡಿದ ಆಹಾರ ಪದಾರ್ಥಗಳನ್ನು ಹುಳು ಹುಪ್ಪಡಿಗಳ ಕಾಟದಿಂದ ಕಾಪಾಡಿ, ಯೋಗ್ಯ ಬೆಲೆ ಬಂದಾಗ ಮಾರಿ ಉತ್ತಮ ಲಾಭ ಪಡೆಯಲು ಉಗ್ರಾಣಗಳು ಅತ್ಯಾವಶ್ಯಕ ಎಂದು ಶಾಸಕ ಸಿದ್ದು ಸವದಿ ಹೇಳಿದರು.  

     ಸ್ಥಳೀಯ ಎಪಿಎಂಸಿ ಆವರಣದಲ್ಲಿ ಹಮ್ಮಿಕೊಂಡಿದ್ದ ನಬಾಡರ್್ ಸಂಸ್ಥೆಯ ಡಬ್ಲ್ಯೂಐಎಫ್ 2014-15 ರ ಯೋಜನೆಯಡಿಯಲ್ಲಿ ಮಂಜೂರಾದ 1000 ಮೆಟ್ರಿಕ್ ಟನ್ ಸಾಮಥ್ರ್ಯದ 1 ಕೋಟಿ ರೂಪಾಯಿಗಳ ಅಂದಾಜು ವೆಚ್ಚದ ಬೃಹತ್ ಉಗ್ರಾಣದ ಶಂಕುಸ್ಥಾಪನೆ ಕಾರ್ಯಕ್ರಮದ ಗುದ್ದಲಿ ಪೂಜೆ ನೆರವೇರಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು  ಕಷ್ಟಪಟ್ಟು ದುಡಿಯುವ ರೈತರು ತಮ್ಮ ಸುಗ್ಗಿ ಕಾಲದಲ್ಲಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಸಿಗದೇ ನಷ್ಟ ಅನುಭವಿಸುತ್ತಿದ್ದಾರೆ. ಅಂತಹ ಸಂದರ್ಭದಲ್ಲಿ ಅವರಿಗೆ ಉತ್ಪನ್ನಗಳನ್ನು ಉತ್ತಮ ಬೆಲೆ ಬರುವವರೆಗೆ ಹುಳುಗಳ ಕಾಟದಿಂದ ಮುಕ್ತವಾಗಿ ವೈಜ್ಞಾನಿಕವಾಗಿ ಸಂರಕ್ಷಿಸಿಕೊಳ್ಳಲು ಇಂತಹ ಸಂಗ್ರಹಗಾರಗಳ ಅವಶ್ಯಕತೆ ಇದೆ. ಅದರಲ್ಲಿಯೂ ಈ ಭಾಗದಲ್ಲಿ ಹೆಚ್ಚಾಗಿ ಅರಿಶಿಣ ಮತ್ತು ಇತರೆ ಬೆಳೆ ಬೆಳೆಯುವ ರೈತರಿಗೂ ಅನುಕೂಲವಾಗುವಂತೆ ಶೀತ ಸಂಗ್ರಹಗಾರಕ್ಕೆ ಬದಲಾಯಿಸುವ ಭರವಸೆ ನೀಡಿದರು.

        ರೈತರು, ವರ್ತಕರು, ಕಾಖರ್ಾನೆ ಮಾಲಿಕರುಗಳಿಗೆ ಅನುಕೂಲವಾಗುವಂತೆ ಪದಾಧಿಕಾರಿಗಳು,  ಅಧಿಕಾರಿಗಳು ಸೂಕ್ತ ಉಪಚಾರದ ವ್ಯವಸ್ಥೆ ಕೈಗೊಂಡು ಜನೋಪಯೋಗಿ ಉಗ್ರಾಣಗಳನ್ನಾಗಿಸಿ ಆಕಷರ್ಿಸಬೇಕು, ಸುತ್ತಲಿನ ಪ್ರತಿ ಹಳ್ಳಿಗಳ ರೈತರಿಗೆ ಉಗ್ರಾಣದ ಸದುಪಯೋಗದ ಅರಿವು ಮೂಡಿಸಲು ಹಾಗೂ ಅಲ್ಲಲ್ಲಿ ಬ್ಯಾನರ್ ಹಾಕಿ ತಿಳುವಳಿಕೆ ಮೂಡಿಸಲು ತಿಸಿದರು.  

    ಎಪಿಎಂಸಿ ಕಾರ್ಯದಶರ್ಿ ಎಸ್. ಎನ್. ಪತ್ತಾರ ಶಾಸಕರ ಆದೇಶದಂತೆ ಶೀತ ಸಂಗ್ರಹಗಾರ ಪ್ರಸ್ತಾವನೆಯನ್ನು ಸಕರ್ಾರಕ್ಕೆ ಸಲ್ಲಿಸುವುದಾಗಿ ತಿಳಿಸಿದರು.  

ಎಪಿಎಂಸಿ ಅಧ್ಯಕ್ಷ ವೆಂಕಪ್ಪ ಗಿಡ್ಡಪ್ಪನವರ, ಉಪಾಧ್ಯಕ್ಷೆ ಸಾವಕ್ಕ ವಂಕಿ, ತೇರದಾಳ ಮತ ಕ್ಷೇತ್ರದ ಭಾಜಪ ಗ್ರಾಮೀಣ ಘಟಕದ ಅಧ್ಯಕ್ಷ ಬಸನಗೌಡ ಪಾಟೀಲ, ಭಾಜಪ ನಗರ ಘಟಕದ ಅಧ್ಯಕ್ಷ ಮಹಾಲಿಂಗಪ್ಪ ಕುಳ್ಳೊಳ್ಳಿ, ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಮಹಾಂತೇಶ ಹಿಟ್ಟಿನಮಠ,  ಎಪಿಎಂಸಿ ಸದಸ್ಯರಾದ ವೆಂಕಣ್ಣ ಗೊಬ್ಬರದ, ಅಣ್ಣೇಶಗೌಡ ಉಳ್ಳಾಗಡ್ಡಿ, ಈರಪ್ಪ ಕಿತ್ತೂರ, ಎಂ. ವೈ. ಕೋಳಿಗುಡ್ಡ, ಜಿ. ಎಸ್. ಗೊಂಬಿ, ಯೋಗಗುರು ಫಕ್ರುದ್ದೀನ್ ಕುಂಟೋಜಿ,  ಬಿ. ಸಿ. ಮಾಳಿ,ಪುರಸಭಾ ಸದಸ್ಯರಾದ ಶೇಖರ ಅಂಗಡಿ,  ಚನ್ನಬಸು ಹುರಕಡ್ಲಿ, ಚನ್ನಬಸು ಯರಗಟ್ಟಿ, ಪ್ರಹ್ಲಾದ ಸಣ್ಣಕ್ಕಿ, ಬಸವರಾಜ ಹಿಟ್ಟಿನಮಠ ಮತ್ತು ಮಹಾದೇವ ಮಣ್ಣನ್ನವರ, ರಾಜು ಅಂಬಲಿ,  ಶಂಕರಗೌಡ ಪಾಟೀಲ, ಶಿವಾನಂದ ಅಂಗಡಿ, ಚನ್ನಪ್ಪ ರಾಮೋಜಿ, ಶಿವಲಿಂಗ ಘಂಟಿ, ಪ್ರಕಾಶ್ ಮರೇಗುದ್ದಿ, ಬಸವರಾಜ ಚಮಕೇರಿ, ಭೀಮಶೀ ಗೌಂಡಿ, ವಿಕ್ರಮ ಕುಳ್ಳೂರ, ಬಸವರಾಜ ಗಿರಿಸಾಗರ, ಶಿವಾನಂದ ಹುಣಶ್ಯಾಳ, ನಾಗೇಶ ಲಮಾಣಿ, ಮಹಾಲಿಂಗ ಮುದ್ದಾಪುರ ಮತ್ತು ಎಪಿಎಂಸಿ ಸಹಾಯಕ ಕಾರ್ಯದಶರ್ಿ ರಮೇಶ ಭೋಜನ್ನವರ, ಮೇಲ್ವಿಚಾರಕ ಬಸವರಾಜ ಬಾಡಗಿ, ಲೆಕ್ಕಿಗ ರವಿ ರಾಠೋಡ ಇತರರು ಇದ್ದರು. ಕಾನಿಪ ಅಧ್ಯಕ್ಷ ಜಯರಾಮ ಶೆಬಿ. ಸಿ. ಮಾಳಿಕಾರ್ಯಕ್ರಮ ನಿರೂಪಿಸಿದರು.