ಸಣ್ಣ ಪತ್ರಿಕೆಗಳ ಬೆಳವಣಿಗೆಗೆ ಸರ್ಕಾರ ಸೌಲಭ್ಯ, ಭದ್ರತೆ ಕಲ್ಪಿಸಲಿ: ಕಲಾವಿದ ವಿಷ್ಣು

ಲೋಕದರ್ಶನ ವರದಿ

ಗಂಗಾವತಿ 16: ಪ್ರಸ್ತುತ ದಿನಗಳಲ್ಲಿ ದೊಡ್ಡ ಪತ್ರಿಕೆಗಳ ನಡುವೆ ಪೈಪೋಟಿ ಜೊತೆಗೆ ಟಿವ್ಹಿ ಮಾಧ್ಯಮ ಹೆಚ್ಚಳದಿಂದಾಗಿ  ಸಣ್ಣ ಪತ್ರಿಕೆಗಳು ತೀವ್ರ ಸಂಕಷ್ಟಗಳನ್ನು ಎದುರಿಸುತರ್ತಿದ್ದು, ಸರ್ಕಾರ  ಬೆಳವಣಿಗೆಗೆ ಸೌಲಭ್ಯಗಳೊಂದಿಗೆ ಭದ್ರತೆ ಕಲ್ಪಿಸಬೇಕೆಂದು ಕನರ್ಾಟಕ ಸಂಪಾದಕರ ಮತ್ತು ವರದಿಗಾರರ ಸಂಘದ ರಾಜ್ಯಾಧ್ಯಕ್ಷ ಕಲಾವಿದ ವಿಷ್ಣು ಹೇಳಿದರು.

ಧಾರವಾಡದ ನಗರದ ಕನರ್ಾಟಕ ವಿದ್ಯಾವರ್ಧಕ ಸಭಾಭವನದಲ್ಲಿ   ಹೂ ಅಲ್ ಶಿಫಾಹ ವನೌಷಧಿ ಆಯುವರ್ೇದ ವೈದ್ಯ ಪರಿಷತ್ ಹಾಗೂ ಜನಕಲ್ಯಾಣ ಟ್ರಸ್ಟ್, ವೈದ್ಯಕಿರಣ ಮತು ನಮ್ಮೂರ ಶಾಸಕರು ರಾಷ್ಟ್ರೀಯ ಕನ್ನಡ  ಮಾಸಪತ್ರಿಕೆಗಳ ಆಶ್ರಯದಲ್ಲಿ  "ಮಾನವ ಧರ್ಮ 2ನೇ ಮಾಧ್ಯಮ ಸಮಾವೇಶ" ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಪತ್ರಿಕೋದ್ಯಮ ಇಂದು ಹೂವಿನ ಹಾಸಿಗೆಯಾಗಿರದೇ, ಮುಳ್ಳಿನಿಂದ ಕೂಡಿದೆ. ಯಾವುದೇ ಸುದ್ದಿಗಳನ್ನು ಪಾರದರ್ಶಕವಾಗಿ ಬರೆಬೇಕೆಂದರೆ ಪತ್ರಕರ್ತರಿಗೆ ಸಕರ್ಾರದ ಸೌಲಭ್ಯ ಗಳು ಸರಿಯಾಗಿ ಸಿಗುತಿಲ್ಲ. ಅಲ್ಲದೇ ಭದ್ರತೆಯೇ ಇಲ್ಲ. ಕೆಲವೆಡೆ ಪತ್ರಕರ್ತರನ್ನು ಕಡೆಗಣಿಸಲಾಗುತ್ತಿದೆ. ಇದರಿಂದ ಸಣ್ಣಪತ್ರಿಕೆಗಳಲ್ಲಿ ಕಾರ್ಯನಿರ್ವಹಿ ಸುತ್ತಿರುವ ಪತ್ರಕರ್ತರ ಕುಟುಂಬಗಳು ಸಂಕಷ್ಟದಲ್ಲಿವೆ. ಸಕರ್ಾರ ಮತ್ತು ಚುನಾಯಿತ ಪ್ರತಿನಿಧಿಗಳು ಗಮನ ಹರಿಸಿ ಸಕರ್ಾರದ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕೆಂದರು.

ನಂತರ ಟ್ರಸ್ಟ್ನ ಅಧ್ಯಕ್ಷ ಡಾ. ಜಲಾಲುದ್ದೀನ್ ಅಕ್ಬರ್ ಮಾತನಾಡಿ, ಪತ್ರಿಕೆ ಓದುಗರು, ಅಭಿಮಾನಿಗಳ ಸಹಕಾರದಿಂದ  ಪ್ರತಿವರ್ಷ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಗುತ್ತಿದೆ. ಪ್ರತಿ ಯೊಬ್ಬರು ಪತ್ರಿಕೆಗಳನ್ನು ಕೊಂಡು ಓದುಗಬೇಕು. ದೇಶ, ಭಾಷಾಭಿಮಾನ ಬೆಳಸಿಕೊಳ್ಳಬೇಕೆಂದ ರೆಲ್ಲದೇ, ಇತ್ತೀಚಿಗೆ ಸುರಿದ ಭಾರಿ ಮಳೆಯಿಂದಾಗಿ ರಾಜ್ಯದ ವಿವಿಧೆಡೆ ನೆರೆಹಾವಳಿಯುಂಟಾಗಿದ್ದು, ಅಧಿಕಾರದಲ್ಲಿರುವವರು ನೆರೆ ಸಂತ್ರಸ್ತರಿಗೆ ಪರಿಹಾರ ಕೊಡದೇ ಹೆಂಡ ತುಂಡಿನಲ್ಲಿ ತೇಲಾಡುತ್ತಾ ಅಧಿಕಾರದ ದರ್ಪದಿಂದ ಕಾಲಕಳೆಯುತ್ತಿದ್ದಾರೆ. ಇನ್ನೊಂದೆಡೆ ಪತ್ರಕರ್ತರಿಗೆ ರಕ್ಷಣೆಯಿಲ್ಲದಂತಾಗಿದೆ. ಜನಪರ ಕೆಲಸ ಮಾಡಲು ಪತ್ರಕರ್ತರು ಭದ್ರತೆಯಿಲ್ಲದೇ ತೊಂದರೆ ಅನುಭವಿಸುತ್ತಿದ್ದಾರೆ. ಪತ್ರಕರ್ತರಿಗೆ ಸಕರ್ಾರದಿಂದ ಸೌಲಭ್ಯ ಒದಗಿಸಿಕೊ ಡಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಈಶ್ವರ ಚಂದ್ರ ಹೊಸಮನಿ ಮಾತನಾಡಿ, ಮಾನವ ಧರ್ಮ ಮಾಧ್ಯಮ ಸಮಾವೇಶ ಹಮ್ಮಿಕೊಂಡಿ ರುವುದು ಶ್ಲಾಘನೀಯ ಕಾರ್ಯವಾಗಿದೆ. ಇಂತಹ ಕಾರ್ಯಕ್ರಮಗಳು ಇನ್ನೂ ಹೆಚ್ಚೆಚ್ಚು ನಡೆಯಬೇಕು. ಈ ಸಂಸ್ಥೆ ನಡೆಸುವ ಕಾರ್ಯಕ್ರಮಗಳಿಗೆ ಸದಾ ಪ್ರೋತ್ಸಾಯಿಸುವುದಾಗಿ ತಿಳಿಸಿದರಲ್ಲದೇ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಭೇಟಿ ಮಾಡಿಸುವ ಜೊತೆಗೆ ಸಕರ್ಾರದ ಸೌಲಭ್ಯ ಗಳನ್ನು ಒದಗಿಸಿಕೊಡುವಂತೆ ಮನವಿ ಮಾಡಲಾ ಗುವುದು ಎಂದರು.

ನಂತರ ವಿವಿಧ ರಂಗಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಪ್ರಶಸ್ತಿ ನೀಡುವುದರೊಂದಿಗೆ ಗೌರವಿಸಲಾಯಿತು.

ಪುಟ್ಟಮಗು ದೀಪಶ್ರೀಯಿಂದ ಕಾರ್ಯಕ್ರಮ ಉದ್ಘಾಟಿಸಲಾಯಿತು. ವೇದಿಕೆ ಮೇಲೆಎಕ.ಪಿ.ಮ ಸಂಘಗಳ ಮಹಾಮಂಡಳಿ ರಾಜ್ಯಾಧ್ಯಕ್ಷ ಡಾ. ಅಬ್ದುಲ್ ರಜಾಕ್ ನದಾಫ್, ಸಹಾಯ ಚಾರಿಟೇಬಲ್ ಟ್ರಸ್ಟ್ ಅದ್ಯಕ್ಷ ಬಶೀರಾ ಬಿ. ತಿಲರ್ಾಪುರ ಸೇರಿದಂತೆ ಇತರರಿದ್ದರು.