ಬೈಲಹೊಂಗಲ 06: ಪಟ್ಟಣದ ಹೊಸೂರ ರಸ್ತೆಯ ವಿಜಯ ಸೋಶೀಯಲ್ ಕ್ಲಬನಲ್ಲಿ ಡಿ. 8 ರಂದು ಮಧ್ಯಾಹ್ನ 2.30 ಕ್ಕೆ ಹಿತೈಷಿ ಚಾರಿಟೇಬಲ್ ಟ್ರಸ್ಟ್ ಮತ್ತು ನ್ಯಾಯವಾದಿಗಳ ಸಂಘ, ಭಾರತೀಯ ಕೃಷಿಕ ಸಮಾಜದ ಸಂಯಕ್ತಾಶ್ರಯದಲ್ಲಿ ಕೃಷಿ ತಜ್ಞೆ ಕವಿತಾ ಮಿಶ್ರಾರ ಕೃಷಿ ಉಪನ್ಯಾಸ ಹಮ್ಮಿಕೊಳ್ಳಲಾಗಿದ್ದು ರೈತ ಸಮುದಾಯ ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಮ್.ಆರ್.ಮೆಳವಂಕಿ ಹೇಳಿದರು.
ಅವರು ಪಟ್ಟಣದ ನ್ಯಾಯವಾದಿಗಳ ಸಂಘದ ಸಭಾಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಂದು ಕೃಷಿ ಲಾಭದಾಯಕವಲ್ಲದ ಕ್ಷೇತ್ರ ಎಂದು ಬಿಂಬಿತವಾಗುತ್ತಿದೆ. ಇದು ಹೀಗೆ ಮುಂದುವರೆಗದರೆ ಕೃಷಿ ಕ್ಷೇತ್ರವೆ ನಶಿಸಿಹೋಗುತ್ತದೆ. ಇದನ್ನು ಬೆಳೆಸಿ ಪೋಸಿಸಲು ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಬೆಂಗಳೂರು ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂತರ್ಿ ಎ.ಎಸ್.ಪಾಶ್ಚಾಪುರೆ ಕಾರ್ಯಕ್ರಮ ಉದ್ಘಾಟಿಸುವರು. ರಾಜ್ಯ ವಕೀಲರ ಪರಿಷತ್ ಮಾಜಿ ಅಧ್ಯಕ್ಷ ಎ.ಎರ್.ಪಾಟೀಲ ಅಧ್ಯಕ್ಷತೆ ವಹಿಸುವರು.
ಅತಿಥಿಗಳಾಗಿ ಭಾರತೀಯ ಕೃಷಿಕ ಸಮಾಜದ ರಾಜ್ಯರ್ಧಯಾಕ್ಷ ಲಿಂಗರಾಜ ಪಾಟೀಲ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಮ.ಅರ್ಋ.ಮೆಳವಂಕಿ ಮತ್ತು ಬೆಳಗಾವಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಎಸ್.ಎಫ.ದೊಡಗೌಡ್ರ ಆಗಮಿಸುವರು.
ಸವದತ್ತಿ ಎಪಿಎಂಸಿ ಸದಸ್ಯ ಎಫ್.ಎಸ್.ಸಿದ್ದನಗೌಡರ ಮಾತನಾಡಿ, ರೈತ ಸಮುದಾಯ ಕೃಷಿಯಲ್ಲಿನ ವೈಜ್ಞಾನಿಕ ವಿಧಾನಗಳನ್ನು ಆಳವಡಿಸಿಕೊಳ್ಳದೆ ಅತಿಯಾದ ಖಚರ್ುವೆಚ್ಚಗಳಿಂದ ರೈತರ ಜೀವನ ದುಸ್ಥರವಾಗುತ್ತಿದೆ. ಇದನ್ನು ತಪ್ಪಿಸಲು ನಮ್ಮ ರೈತರಿಗೆ ಆಧುನಿಕ ಬೇಸಾಯ ಪದ್ದತಿಗಳನ್ನು ಆಳವಡಿಸಿಕೊಂಡು ಅವರ ಜೀವನವನ್ನು ಉಜ್ವಲಗೊಳಿಸುವ ನಿಟ್ಟಿನಲ್ಲಿ, ಒಣ ಜಮೀನದಲ್ಲಿ ಮಳೆ ನೀರಿನಿಂದ ಕಡಿಮೆ ಖಚರ್ಿನಲ್ಲಿ 12 ತಿಂಗಳು ಮಿಶ್ರ ಬೇಸಾಯ ಪದ್ದತಿಯಿಂದ ಉತ್ಕ್ರಷ್ಟ ಬೆಳೆ ಬೆಳೆದು ನಾಡಿನ ಜನಮಾನಸದಲ್ಲಿ ಅಚ್ಚುಳಿದಿರುವುದಾಗಿ ಎಂದರು.
ಗೋಷ್ಠಿಯಲ್ಲಿ ಎಸ್.ಎಸ್.ಮಠದ, ಎಸ್.ನಿ.ಆನಿಗೋಳ,ಸಂಘದ ಕಾರ್ಯದಶರ್ಿ ಆಯ್.ಬಿ.ಮೇಟಿ ಇದ್ದರು.
ಕಾರ್ಯಕ್ರಮಕ್ಕೆ ಆಗಮಿಸುವ ರೈತರಿಗೆ ಆಸನದ ವ್ಯವಸ್ಥೆ ಮತ್ತು ಉಪಹಾರ ವ್ಯವಸ್ಥೆ ಮಾಡಲಾಗಿದೆ ಎಂದು ನ್ಯಾಯವಾದಿಗಳ ಸಂಘದ ಕಾರ್ಯದಶರ್ಿ ಆಯ್.ಬಿ.ಮೇಟಿ ತಿಳಿಸಿದರು.