ಉಗರಗೋಳ: ಲಕ್ಷದೀಪೋತ್ಸವ ಕಾರ್ಯಕ್ರಮಕ್ಕೆ ಶಾಸಕ ಮಾಮನಿ ಚಾಲನೆ

ಲೋಕದರ್ಶನ ವರದಿ

ಉಗರಗೋಳ 23:  ಶ್ರೀಕ್ಷೇತ್ರ ಯಲ್ಲಮ್ಮನ ಗುಡ್ಡದಲ್ಲಿ ಶುಕ್ರವಾರ ಸಂಜೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ದೀಪ ಬೆಳಗಿಸುವ ಮೂಲಕ ಶಾಸಕ ಆನಂದ ಮಾಮನಿ ಲಕ್ಷದೀಪೋತ್ಸವಕ್ಕೆ ಚಾಲನೆ ನೀಡಿದರು.

ಲಕ್ಷದೀಪೋತ್ಸವ ಅಂಗವಾಗಿ ಏಳುಕೊಳ್ಳದ ನಾಡಿನಲ್ಲಿ ಹಬ್ಬದ ಸಂಭ್ರಮ ಮನೆಮಾಡಿತ್ತು. ಎತ್ತ ಕಣ್ಣು ಹಾಯಿಸಿದರೂ ಪ್ರಜ್ವಲಿಸುತ್ತಿದ್ದ ದೀಪಗಳ ಸಾಲು ಕಣ್ಮನ ಸೆಳೆಯಿತು. ಸುಂದರವಾದ ಪುಷ್ಪಾಲಂಕಾರ ಮನ ಸೆಳೆಯಿತು.

ಒಂದೆಡೆ ಭಕ್ತಿಯ ಜೈಕಾರ ಮೊಳಗಿದರೆ, ಮತ್ತೊಂದೆಡೆ ದೀಪಾಲಂಕಾರ ಬೆಳಕಿನ ಹಬ್ಬ ನೆನಪಿಸಿತು. ದೇವಸ್ಥಾನ ಹೊರಾಂಗಣದಲ್ಲಿ ಅಳವಡಿಸಿದ್ದ ದೀಪಗಳಿಗೆ ಎಣ್ಣೆ ಹಾಕಿ, ತಮ್ಮ ಬಾಳು ದೀಪದಂತೆ ಬೆಳಗುತ್ತಿರಲಿ ಎಂದು ಭಕ್ತರು ಪ್ರಾಥರ್ಿಸಿದರು. ಬಾನಂಗಳದಲ್ಲಿ ಸಿಡಿಮದ್ದುಗಳ ಪ್ರದರ್ಶನ ಗಮನ ಸೆಳೆಯಿತು. 

ಸವದತ್ತಿ ಕಲ್ಮಠದ ಶಿವಲಿಂಗ ಶ್ರೀಗಳು, ಬೆಟಸೂರ ಮಠದ ಅಜ್ಜಯ್ಯ ಶ್ರೀಗಳು, ಉಗರಗೋಳದ ಬ್ರಹ್ಮಾರೂಢ ಶ್ರೀಗಳು, ನಿವರ್ಾಣೇಶ್ವರ ಮಠದ ಗುರುಮಹಾಂತ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಹೈಕೋಟರ್್ ಧಾರವಾಡ ಪೀಠದ ನ್ಯಾಯಾಧೀಶ ಪಿ.ಬಿ.ಭಜಂತ್ರಿ, ಸವದತ್ತಿ ಹಿರಿಯ ದಿವಾಣಿ ನ್ಯಾಯಾದಿಶ ಸಿ ವಿರಭದ್ರಯ್ಯ,  ಕಿರಿಯ ದಿವಾಣಿ ನ್ಯಾಯಾಧಿಶ ಹರೀಶ, ಗಂಗಮ್ಮಾತಾಯಿ ಮಾಮನಿ, ಯಲ್ಲಮ್ಮ ದೇವಸ್ಥಾನದ ಕಾರ್ಯನಿವರ್ಾಹಕ ಅಧಿಕಾರಿ ರವಿ ಕೋಟಾರಗಸ್ತಿ, ಸಹಾಯಕ ಕಾರ್ಯನಿವರ್ಾಹಕ ಅಧಿಕಾರಿ ಬಸವರಾಜ ಜೀರಗಾಳ, ಡಿ ಕೆ ನಿಂಬಾಳ, ಸವದತ್ತಿ ಸಿಪಿಐ ಮಂಜುನಾಥ ನಡುವಿನಮನಿ, ಪಿಎಸ್ಐ ನಾಗನಗೌಡ ಕಟ್ಟಿಮನಿಗೌಡರ, ಪ್ರೋಪೇಸ್ನರ್ ಪಿಎಸ್ಆಯ್ ಆನಂದ ಚಾರಿಕಟ್ಟಿ, ಹನಮಂತ ಉಳ್ಳಾಗಡ್ಡಿ, ಗಜಾನನ ಕಲಾಲ, ಜಿ.ಕೆ.ಆದಪ್ಪಗೌಡ್ರ, ಸೋಮು ನಾಯಕ, ಎಸ್.ಆರ್.ಪಾಟೀಲ, ಶಿವಾನಂದ ಬಳ್ಳಾರಿ, ಅನ್ನಪೂರ್ಣ ತೊರಗಲ್ಲ, ಇತರರು ಇದ್ದರು.