ಕಾನೂನು ಬಾಹೀರ ಚಟುವಟಿಕೆಗಳಿಗೆ ಕಡಿವಾಣ ಹಾಕುವೆ

ಲೋಕದರ್ಶನ ವರದಿ

ಗಂಗಾವತಿ 15: ಗಂಗಾವತಿ ಗ್ರಾಮೀಣಾ ಠಾಣೆಗೆ ನೂತನ ಪಿಎಸ್ಐ ದೊಡ್ಡಪ್ಪ ಜೆ. ಇಂದು ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಗಂಗಾವತಿ ತಾಲೂಕು ಪ್ರವಾಸಿತಾಣವಾಗಿರುವುದರಿಂದಾಗಿ ಈ ಭಾಗದಲ್ಲಿ ಅಪಘಾತ ಸಂಖ್ಯೆ ಹೆಚ್ಚಾಗಿದ್ದು ಸೂಕ್ತ ಕ್ರಮ ಜರುಗಿಸಲಾಗುವುದು, ಮಟಗಾ, ಇಸ್ಪೀಟ್, ಮರಳು ಮಾಫಿಯ ಕಲ್ಲುಗಣಿಗಾರಿಕೆ ಸೇರಿದಂತೆ ಎಲ್ಲ ವಿಧದ ಕಾನೂನು ಬಾಹೀರ ಚಟುವಟಿಗಳಿಗೆ ಕಡಿವಾಣ ಹಾಕಲಾವುದು ಎಂದು ತಿಳಿಸಿದರಲ್ಲದೆ, ಅಪರಾಧಿಕ ಕೃತ್ಯಗಳು ಜರುಗದಂತೆ ತೀವ್ರ ನಿಗಾವಹಿಸುವುದಾಗಿ ಅವರು ಸ್ಪಷ್ಟಪಡಿಸಿದರು.