ಅದ್ದೂರಿಯಾಗಿ ಕನಕದಾಸ ಜಯಂತಿ ಆಚರಿಸಿ: ಅಳವಂಡಿಕರ್

ಲೋಕದರ್ಶನ ವರದಿ

ಯಲಬುಗರ್ಾ 20: ಇದೇ ನ. 26ರಂದು ಸಂತ ಶ್ರೇಷ್ಠ ಭಕ್ತ ಕನಕದಾಸ ಜಯಂತಿಯನ್ನು ಸಮುದಾಯದ ಸಹಭಾಗಿತ್ವದಲ್ಲಿ ಅತ್ಯಂತ ಅದ್ದೂರಿಯಾಗಿ ಆಚರಿಸಲಾಗುವದು ಎಂದು ತಹಸೀಲ್ದಾರ ರಮೇಶ ಅಳವಂಡಿಕರ್ ಹೇಳಿದರು.

ನಗರದ ತಹಸೀಲ್ದಾರ ಕಛೇರಿ ಸಭಾಂಗಣದಲ್ಲಿ ನಡೆದ ಕನಕದಾಸ ಜಯಂತ್ಯೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅದ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನಮ್ಮ ತಾಲೂಕ ಮಟ್ಟದ ಕೇಲವು ಅಧಿಕಾರಿಗಳು ಪ್ರತಿಯೊಂದು ಪೂರ್ವಭಾವಿ ಸಭೆಗೆ ಗೈರಾಗುತ್ತಿದ್ದು ಇದು ಸರಿಯಾದ ಕ್ರಮವಲ್ಲಾ ಹಾಗೂ ಮುಂದಿರುವ ಕನಕದಾಸ ಜಯಂತಿಯಂದು ಎಲ್ಲಾ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು ಇಲ್ಲವಾದಲ್ಲಿ ಅಂತಹವರ ವಿರುದ್ಧ ಸೂಕ್ತ ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವದು ಎಂದರು.

ಸಮಾಜದ ಮುಖಂಡ ಅಂದಾನಗೌಡ ಪೋಲಿಸ್ ಪಾಟೀಲ ಮಾತನಾಡಿ ತಾಲೂಕ ಆಡಳಿತದಿಂದ ನಡೆಯುವ ಜಯಂತ್ಯೋತ್ಸವಕ್ಕೆ ನಮ್ಮ ಸಮಾಜದ ಬೆಂಬಲವಿದೆ ಹಾಗೂ ಅಂದು ಬೆಳಿಗ್ಗೆ ನಗರದ ಬೀರಲಿಂಗೇಶ್ವರ ದೇವಸ್ಥಾನದಿಂದ ಕನಕದಾಸರ ಭಾವಚಿತ್ರ ಮೆರವಣಿಗೆ ಕುಂಭಮೇಳ ಹಾಗೂ ವಿವಿಧ ವಾದ್ಯಗಳೋಂದಿಗೆ ಪ್ರಾರಂಭವಾಗುತ್ತದೆ ಹಾಗೂ ನಗರದ ವಿವಿಧ ವೃತ್ತಗಳ ಮೂಲಕ ಸಂಚರಿಸಿ ಹಳೆ ಪಪಂ ಆವರಣದಲ್ಲಿ ನಡೆಯುವ ಕಾರ್ಯಕ್ರಮ ವೇದಿಕೆ ತಲುಪಲಿದೆ ಎಂದರು.

ಪಪಂ ಸದಸ್ಯ ರೆವಣೆಪ್ಪ ಹಿರೇಕುರುಬರ ಮಾತನಾಡಿ ಅಂದು ಕನಕದಾಸರ ಜೀವನ ಹಾಗೂ ಸಾಧನೆ ಕುರಿತು ವಿಶೇಷ ಉಪನ್ಯಾಸ ನಡೆಯಲಿದೆ, ಅಂತಹ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಹಾಜರಿದ್ದರೆ ಒಳ್ಳೆಯದು ಹಾಗೂ ಕುಡಿಯುವ ನೀರು, ಹಾಗೂ ಮೆರವಣಿಗೆ ಸಾಗಿ ಬರುವ ರಸ್ತೆಯನ್ನು ಸ್ವಚ್ಚಗೋಳಿಸಬೇಕು ಎಂದರು.

ಪಪಂ ಸದಸ್ಯರಾದ ಕಳಕಪ್ಪ ತಳವಾರ, ಮುಖಂಡರಾದ ಕೇರಿಬಸಪ್ಪ ನಿಡಗುಂದಿ, ರಾಮಣ್ಣ ಪ್ರಭಣ್ಣನವರ, ಸುರೇಶ ಮಾಟೂರು, ದೊಡ್ಡಯ್ಯ ಗುರುವಿನ, ಈಶ್ವರ ಅಟಮಾಳಗಿ, ಸುರೇಶ ಜಮಾದಾರ, ಅಧಿಕಾರಿಗಳಾದ, ನಾಗೇಶ, ಸುರೇಖಾ ಕುರಟ್ಟಿ, ರೇಣುಕಾ ಕಮತದ, ಉಮೇಶ ಮಂಡಸೊಪ್ಪಿ, ಆರ್ ಕೆ ಮಠದ, ಮಹೇಶಗೌಡ ಸೋಪೂರ, ನಾಗಪ್ಪ ಸಜ್ಜನ, ಸೇರಿದಂತೆ ಅನೇಕ ಮುಖಂಡರು, ಅಧಿಕಾರಿಗಳು ಹಾಜರಿದ್ದರು.