ಲೋಕದರ್ಶನ ವರದಿ
ಲಕ್ಷ್ಮೀಸೇನ ಶಿಕ್ಷಣ ಸಂಸ್ಥೆಯ ಪ್ರೌಢಶಾಲೆ ತಾಲೂಕಿಗೆ ಪ್ರಥಮ ಸ್ಥಾನ
ರಾಯಬಾಗ, 05 : ಎಸ್.ಎಸ್.ಎಲ್.ಸಿ ಪರೀಕ್ಷೆ-1 ಯಲ್ಲಿ ಪಟ್ಟಣದ ಲಕ್ಷ್ಮೀಸೇನ ಶಿಕ್ಷಣ ಸಂಸ್ಥೆಯ (ನ್ಯೂ ಹೈಸ್ಕೂಲ್) ಹೊಸ ಸಂಯುಕ್ತ ಪದವಿ ಪೂರ್ವ ಕಾಲೇಜ (ಪ್ರೌಢಶಾಲೆ) ಒಟ್ಟು ಫಲಿತಾಂಶ ಶೇ.95 ರಷ್ಟು ಆಗಿದ್ದು, ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದೆ. ಈ ಶಾಲೆ ವಿದ್ಯಾರ್ಥಿಗಳಾದ ವಾಣಿ ಉಪ್ಪಾರ 604 (ಶೇ.96.64) ಪ್ರಥಮ, ಸಮೀಕ್ಷಾ ತಂಗಡೆ 594 (ಶೇ.95.04) ದ್ವಿತೀಯ ಹಾಗೂ ಉಮಾ ಸುತಾರ 589 (ಶೇ.94.24) ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ. ಈ ವಿದ್ಯಾರ್ಥಿಗಳನ್ನು ಸಂಸ್ಥೆ ಅಧ್ಯಕ್ಷ ಡಿ.ಎಮ್.ಶೆಟ್ಟಿ ಹಾಗೂ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು ಅಭಿನಂದಿಸಿದ್ದಾರೆ.