ಬೈಲಹೊಂಗಲ 21: ಕನ್ನಡ ಫಿಲಂ ಚೇಂಬರ್ ಸಂಸ್ಥೆಯವತಿಯಿಂದ ದಿ.ಪುನೀತ ರಾಜಕುಮಾರ ಹುಟ್ಟುಹಬ್ಬದ ಅಂಗವಾಗಿ ಮಾರ್ಚ್ 23 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಪ್ರಶಸ್ತಿ ಸಮಾರಂಭದಲ್ಲಿ. ಬೈಲಹೊಂಗಲ ಪಟ್ಟಣದ ಕಲಾವಿದ, ನೃತ್ಯ ನಿರ್ದೇಶಕ ಕುಮಾರ ಬೋರಕನವರ ಅವರ ಆರಂಭ ಚಲನಚಿತ್ರದ ನೃತ್ಯ ನಿರ್ದೇಶನಕ್ಕೆ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಗಣ್ಯರು ಪ್ರದಾನ ಮಾಡಲಿದ್ದಾರೆ ಎಂದು ಕನ್ನಡ ಫಿಲಂ ಚೇಂಬರ್ ಅಧ್ಯಕ್ಷರಾದ ಎಂ ಎಸ್ ರವೀಂದ್ರ ಅವರು ತಿಳಿಸಿದ್ದಾರೆ.