ಏಳು ವರ್ಷಗಳ ಬಳಿಕ ಮತ್ತೆ ಕ್ರಾಂತೀವೀರ ಬ್ರಿಗೇಡ್‌ಗೆ ಚಾಲನೆ: ಕೆ ಎಸ್ ಈಶ್ವರ್ಪ
ಮುದ್ದೇಬಿಹಾಳ 18: ಏಳು ವರ್ಷಗಳ ಬಳಿಕ ಮತ್ತೆ ಕ್ರಾಂತೀವೀರ ಬ್ರಿಗೇಡ್‌ಗೆ ಚಾಲನೆ ದೊರೆತಿದೆ. ಇದೀಗ ಕ್ರಾಂತೀವೀರ ಬ್ರಿಗೇಡ್ ಅನ್ನು ಘೋಷಣೆ ಮಾಡಲಾಗಿದೆ. ಫೆಬ್ರುವರಿ 4ರಂದು ಬಸವನ ಬಾಗೇವಾಡಿಯಲ್ಲಿ ವಿವಿಧ ಮಠಾಧೀಶರ ನೇತೃತ್ವದಲ್ಲಿ ಕ್ರಾಂತೀವೀರ ಬ್ರಿಗೇಡ್ ಉದ್ಘಾಟನೆಯಾಗಲಿದೆ ಮುದ್ದೇಬಿಹಾಳ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬಾಗವಹಿಸುವ ಮೂಲಕ ಬ್ರಿಗೇಡಗೆ ಶಕ್ತಿ ತುಂಬಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರ್ಪ ಕರೆ ನೀಡಿದರು.
ತಾಲೂಕಿನ ಸೂಕ್ಷೇತ್ರ ಕುಂಟೋಜಿ ಗ್ರಾಮದ ಬಸವೇಶ್ವರ ದೇವ ಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ದರ್ಶನಾಶಿರ್ವಾದ ಪಡೆದು ಬಳಿಕ ಸಂಗನಬಸವ ಮಂಗಲಭವನದಲ್ಲಿ ಹಮ್ಮಿಕೊಂಡಿದ್ದ ಬ್ರಿಗೇಡ ಫುರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಸಧ್ಯ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಜಾತಿಯಾದಾರಿತ ರಾಜಕಾರಣದಿಂದಾಗಿ ರಾಜ್ಯದಲ್ಲಿನ ಹಿಂದುಳಿದ ಹಿಂದೂ ಸಮಾಜದ ಬಂಧುಗಳು ತೀರಾ ಸಂಕಷ್ಟಕ್ಕೆ ಸಿಲುಕಿದ್ದಾರೆ ಮಾತ್ರವಲ್ಲದೇ ಅವರ ಮಕ್ಕಳು ಶಿಕ್ಷಣದಿಂದ ವಂಚಿತಗೊಂಡು ಅಸಹಾಯ ಸ್ಥಿತಿಯಲ್ಲಿದ್ದಾರೆ ಕಾರಣ ಹಿಂದೂಳಿದ ಹಿಂದೂ ಸಮಾಜಗಳ ರಕ್ಷಣೆ ನಿಲ್ಲಲು ಸಕಲ ಹಿಂದೂ ಸಮಾಜವನ್ನು ಒಂದು ಮಾಡಬೇಕು ಎಂಬ ಕಾರಣಕ್ಕೆ ಈ ಬ್ರಿಗೇಡ್ ಸ್ಥಾಪನೆಗೊಂಡಿದೆ. ಫೆಬ್ರವರಿ 4ರಂದು ಸ್ವಾಮೀಜಿಗಳ ನೇತೃತ್ವದಲ್ಲಿ ಬಸವನ ಬಾಗೇವಾಡಿಯಲ್ಲಿ ಉದ್ಘಾಟನೆ ನಡೆಯಲಿದೆ. ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಜನರು ಭಾಗಿಯಾಗಲಿದ್ದಾರೆ. ಮುಂದಿನ ದಿನಗಳಲ್ಲಿ ಪದಾಧಿಕಾರಿಗಳನ್ನು ನೇಮಕ ಮಾಡಲಾಗುವುದು ಎಂದರು
ಇವತ್ತು ಮಾರ್ಗದರ್ಶಕ ಮಂಡಳಿ ಹಾಗೂ ಬ್ರಿಗೇಡ್ ಹೆಸರು ಮಾತ್ರ ಘೋಷಣೆ ಮಾಡಲಾಗಿದೆ. ಪದಾಧಿಕಾರಿಗಳ ನೇಮಕ ಮಾಡುವಾಗ ನನ್ನನ್ನು ಸೇರಿದಂತೆ ಹಲವರನ್ನು ಸೇರೆ್ಡ ಮಾಡಲಾಗುವುದು. ಹಿಂದೂ ಸಮಾಜಕ್ಕೆ ಆಗುವ ಅನ್ಯಾಯದ ವಿರುದ್ಧ ಹೋರಾಡಲು ಈ ಬ್ರಿಗೇಡ್ ಕೆಲಸ ಮಾಡಲಿದೆ ಎಂದು ಈಶ್ವರ್ಪ ಹೇಳಿದರು.
ಭಾರತದಲ್ಲಿ ಹಸುವನ್ನು ಗೋಮಾತೆ ಎಂದು ಪೂಜ್ಯನೀಯ ಭಾವನೆಯಿಂದ ಗೌರವಿಸಿ ಪೂಜಿಸುತ್ತಿದ್ದೇವೆ ಮಹಾತ್ಮಾ ಗಾಂಧಿಜಿಯವರ ಕನಸೂ ಕೂಡ ಗೋಹತ್ಯೆ ನಿಷೇದ ಕಾಯ್ದೆ ಜಾರಿಗೊಳಿಸಬೇಕೇಂಬ ಇಚ್ಚೇ ಇತ್ತು. ಆದರೇ ಸಧ್ಯ ರಾಜ್ಯದಲ್ಲಿ ಕಾಂಗ್ರೇಸ್ ಸರಕಾರ ಅಧಿಕಾರಕ್ಕೆ ಬಂದನಂತರ ಗೋ ಹತ್ಯೆ ಕಾಯ್ದೆ ಬಗ್ಗೆ ಮಾತೆತ್ತುತ್ತಿಲ್ಲ ಇದರಿಂದಾಗಿ ಎಲ್ಲೆಡೆ ನ ಇತ್ಯ ಗೋ ಹತ್ಯೆ ಮಾಡುವ ಮೂಲಕ ನಮ್ಮ ಭಾರತಿಯ ಸಂಸ್ಕೃತಿಗೆ ದಕ್ಕೆ ತರುವಂತ ಕೃತ್ಯಗಳು ನಡೆಯುತ್ತಿವೆ ಈ ಕೂಡಲೇ ಗೋಹತ್ಯೆ ನಿಷೇದ ಕಾಯ್ದೆ ಜಾರಿಗೆ ತರಬೇಕು ಗೋ ಹತ್ಯೆ ಮಾಡಿದ ಕಿರಾತಕರಿಗೆ ಉಗ್ರ ಶಿಕ್ಷೆಗೊಳಸಬೇಕು ಎಂದರು.
ಮುಖಂಡರಾದ ಕೆಂಚಪ್ಪ ಬಿರಾದಾರ, ಮಲಕೇಂದ್ರಾಯಗೌಡ ಪಾಟೀಲ, ಗುರಲಿಂಗಪ್ಪಗೌಡ ಸುಳ್ಳಳ್ಳಿ, ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ, ಗೌರಮ್ಮ ಹುನಗುಂದ, ಶಿಲ್ಪಾ ಕುದರಗೊಂಡ, ಲಕ್ಷ್ಮಣ ಬಿಜ್ಜೂರ, ಮುತ್ತಣ್ಣ ಹುಗ್ಗಿ, ಮುತ್ತಣ್ಣ ಹುಂಡೇಕಾರ, ರವಿ ಪವಾರ, ಸಿದ್ದು ಬುಳ್ಳಾ,ರವಿ ಜಗಲಿ, ಸಂಗಪ್ಪ ಬೀಸಲದಿನ್ನಿ, ಗುರುಪಾದ ಹೆಬ್ಬಾಳ, ಹುಲಗಪ್ಪ ಕಿಲಾರಟ್ಟಿ, ಭೀಮಣ್ಣ ಹಳ್ಳೂರ, ರೇವಣಸಿದ್ದಪ್ಪ ಹರನಾಳ, ನಿಂಗಣ್ಣ ಮಡಿಕೇಶ್ವರ, ಅಯ್ಯಾಳಪ್ಪ ಕಂಬಳಿ, ಸಂಗಮೇಶ ಕುಂಬಾರ, ಸಿದ್ದು ಕಡ್ಡಿ, ಮಂಜುನಾಥ ಬಡಿಗೇರ ಸೇರಿದಂತೆ ಹಲವರು ಇದ್ದರು.