ಮೂಡಲಗಿ 03: ಇಲ್ಲಿಯ ವೆಂಕಟೇಶ ಚಿತ್ರಮಂದಿರದಲ್ಲಿ ಕಳೆದ 25 ದಿನಗಳಿಂದ ಪ್ರದರ್ಶನಗೋಳ್ಳುತ್ತಿರುವ ಇಂಚಗೇರಿ ಸಾಂಪ್ರದಾಯದ ಸದ್ಗುರು ಸಮರ್ಥ ಶ್ರೀ ಮಾಧವಾನಂದ ಪ್ರಭುಜಿ ಅವರು ಜೀವನ ಆಧಾರಿತ ಚಲನ ಚೀತ್ರದ 25ನೇ ದಿನದ ಸಂಭ್ರಮಾಚರಣೆಯನ್ನು ಗುರುವಾರದಂದು ಈ ಭಾಗ ಶ್ರೀ ಮಾಧವಾನಂದ ಪ್ರಭುಜೀ ಅವರ ಭಕ್ತರು ಆಚರಿಸಿದರು.
ಸಂಭ್ರಮಾಚರಣೆಯಲ್ಲಿ ನಾಗನೂರದ ರಾಮಣ್ಣಾ ನಾಯಿಕ ಮಾತನಾಡಿ, ಉತ್ತರ ಕನರ್ಾಟಕದಲ್ಲಿ ಮಹತ್ವ ಪಡೆದಿರುವ ಸ್ವಾಂತಂತ್ರ್ಯ ದಿನಗಳಲ್ಲಿನ ಇಂಚಗೇರಿ ಸಂಪ್ರದಾಯದ ದೇವರು ಎಂದೇ ಪ್ರಖ್ಯಾತಿ ಪಡೆದಿದ್ದ ಶ್ರೀ ಮಾಧವಾನದ ಪ್ರಭುಜೀ ಅವರ ಜೀವನ ಚರೀತೆ ಹಾಗೂ ಸ್ವಾತಂತ್ರ್ಯ ಹೋರಾಟ ಮತ್ತು ಅಂತರ ಜಾತಿ ವಿವಾಹ, ಗೋವಾ ವಿಮೋಚನೆ ಚಳುವಳಿ, ಪವಾಡಗಳನ್ನು ಮತ್ತು ಸೇವೆಯನ್ನು ಕ್ರಾಂತಿ ಯೋಗಿ ಮಾಹಾದೇವರು ಎಂಬ ಚಲ ಚಿತ್ರದ ಮೂಲಕ ಇಂದಿನ ಯುವ ಪೀಳಿಗೆಗೆ ತಿಳಿಸಿಸು ಕಾರ್ಯ ಮಾಡಿರು ಶ್ಲಾಘನಿಯವಾದುದು ಎಂದರು.
ಮಾಧವಾನಂದ ಪ್ರಭುಜೀ ಅವರು ಭಾವ ಚಿತ್ರಕ್ಕೆ ಪೂಜೆಸಲ್ಲಿಸಿ ಸೇಜಾರತಿ ಮಾಡಿ ಅನ್ನ ಪ್ರಸಾದ ನೆರವೇರಿಸಿದರು.
ಸಮಾರಂಭದಲ್ಲಿ ಬನಹಟ್ಟಿ ಆಶ್ರಮದ ಯಲ್ಲಪ್ಪ ಮಹಾರಾಜರು, ಇಂಚಗೇರಿ ಮಠದ ಭಕ್ತರಾದ ತಮ್ಮಣ್ಣಪ್ಪ ಹೋರಟ್ಟಿ, ಅಲ್ಲಪ್ಪ ಕಿತ್ತೂರ, ಮುತ್ತಪ್ಪ ಬೀದರಿ, ರೇವಣ್ಣ ಪಾಟೀಲ, ಮಾರುತಿ ಕೌಜಲಗಿ, ಶಿವನಪ್ಪ ರೋಡನ್ನವರ, ಪ್ರಭು ಅಡಪ್ಪದ, ಸಂಗಮೇಶ ಪಾಲ್ಸ್, ಗುರುಪಾದ ಕುಲಕಣರ್ಿ, ಹನಮಂತ ಬಡಗಣ್ಣವರ, ಮಲ್ಲಪ್ಪ ಖಂಡ್ರಟ್ಟಿ, ಸನೀತ ಸೋನವಾಲ್ಕರ, ಗೌಡಪ್ಪ ಹಾಗೂ ಶಿವಾಪೂರ, ಮುನ್ಯಾಳ, ಕಮಲದಿನ್ನಿ, ರಂಗಾಪೂರ, ನಾಗನೂರ, ಸುಣಧೋಳಿ, ಖಂಡ್ರಟ್ಟಿ ಗ್ರಾಮಗ ಇಂಚಗೇರಿ ಸಾಂಪ್ರದಾಯದ ಭಕ್ತರು ಭಾಗವಹಿಸಿದರು.