ನವದೆಹಲಿ, ಮಾರ್ಚ್ 29, ಕರೋನವೈರಸ್ ಪೀಡಿತ ಇರಾನ್‌ನಿಂದ ಹೆಚ್ಚಾಗಿ ಯಾತ್ರಿಕರು ಮತ್ತು ವಿದ್ಯಾರ್ಥಿಗಳನ್ನು ಒಳಗೊಂಡ 275 ಭಾರತೀಯ ಪ್ರಜೆಗಳ ಆರನೇ ತಂಡವನ್ನು ಭಾನುವಾರ ದೆಹಲಿಗೆ ಸ್ಥಳಾಂತರಿಸಲಾಗಿದೆ. ಸ್ಥಳಾಂತರಗೊಂಡವರಲ್ಲಿ ಲಡಾಕ್ ಮತ್ತು ಕಾಶ್ಮೀರದ ಯಾತ್ರಿಕರು ಮತ್ತು ವಿದ್ಯಾರ್ಥಿಗಳು ಸೇರಿದ್ದು, ಇವರನ್ನು ರಾಜಸ್ಥಾನದ ಜೋಧ್‍ಪುರದ ಭಾರತೀಯ ಸೇನಾ ಕ್ಷೇಮ ಕೇಂದ್ರದಲ್ಲಿ ಇರಿಸಲಾಗುವುದು. ಜೋಧ್‍ಪುರದಲ್ಲಿ ಸೇನೆಯು ಎರಡನೇ ಕೇಂದ್ರವನ್ನು ಆರಂಭಿಸಿದೆ ಎಂದು ಗಾಂಧಿನಗರ ಮೂಲದ ರಕ್ಷಣಾ ಸಾರ್ವಜನಿಕ ಸಂಪರ್ಕಾಧಿಕಾರಿ ವಿಂಗ್ ಕಮಾಂಡರ್ ಪುನೀತ್ ಚಾಧಾ ಹೇಳಿದ್ದಾರೆ. ಇರಾನ್‌ನಿಂದ ಸ್ಥಳಾಂತರಗೊಂಡ ಭಾರತೀಯ ಪ್ರಜೆಗಳ ಆರನೇ ತಂಡ ಇದಾಗಿದೆ. ಮಧ್ಯಪ್ರಾಚ್ಯ ದೇಶವಾದ ಇರಾನ್ ಹೆಚ್ಚು ಕರೋನವೈರಸ್ ಪ್ರಕರಣಗಳು ಮತ್ತು ಸಾವುಗಳಿಂದ ಬಾಧಿತವಾಗಿರುವ ಅಮೆರಿಕ, ಇಟಲಿ, ಸ್ಪೇನ್ ಮತ್ತು ಚೀನಾ ದೇಶಗಳಲ್ಲಿ ಇರಾನ್ ಕೂಡ ಒಂದಾಗಿದೆ.
ದೆಹಲಿ ಮತ್ತು ಜೋಧ್‌ಪುರ ನಡುವೆ ವಿಶೇಷ ವಿಮಾನ ಹಾರಾಟ ನಡೆಸಲು ಖಾಸಗಿ ವಿಮಾನಯಾನ ಸಂಸ್ಥೆ ಸ್ಪೈಸ್‌ಜೆಟ್ ವಿಮಾನವನ್ನು ನಿಯೋಜಿಸಲಾಗಿದೆ. ಭಾನುವಾರ ಸ್ಥಳಾಂತರಗೊಂಡವರನ್ನು ಜೋಧ್‍ಪುರದ ಸಂಪರ್ಕತಡೆ ಕೇಂದ್ರಕ್ಕೆ ವಿಶೇಷ ವಿಮಾನ ಹೊತ್ತೊಯ್ಯಲಿದೆ.ಜಗತ್ತಿನಾದ್ಯಂತ ಮನುಕುಲ ಸಂಕಷ್ಟದ ಬಿಕ್ಕಟ್ಟನ್ನು ಎದುರಿಸುತ್ತಿರುವ ಸವಾಲಿನ ಸಮಯದಲ್ಲಿ, ಕರೋನವೈರಸ್ ವಿರುದ್ಧದ ಜಂಟಿ ಹೋರಾಟದಲ್ಲಿ ಭಾಗಿಯಾಗಿರುವುದಕ್ಕೆ ಸ್ಪೈಸ್ ಜೆಟ್ ಹೆಮ್ಮೆಪಡುತ್ತದೆ ಎಂದು ಸ್ಪೈಸ್ ಜೆಟ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಜಯ್ ಸಿಂಗ್ ಹೇಳಿದ್ದಾರೆ.
ಜಾಗತಿಕ ಸಾಂಕ್ರಾಮಿಕ ರೋಗದಿಂದ ಹೆಚ್ಚು ಬಾಧಿತವಾಗಿರುವ ದೇಶಗಳ ಪೈಕಿ ಇರಾನ್ ಒಂದಾಗಿದ್ದು ಶನಿವಾರ ಒಂದೇ ದಿನದಲ್ಲಿ 139 ಜನರು ಕರೋನವೈರಸ್‍ನಿಂದ ಸಾವನ್ನಪ್ಪಿದ್ದಾರೆ. ಇದರೊಂದಿಗೆ ದೇಶದಲ್ಲಿ ಸಾವನ್ನಪ್ಪಿದ್ದವರ ಸಂಖ್ಯೆ 2,517 ಕ್ಕೆ ಏರಿದೆ.ಕಳೆದ 24 ತಾಸಿನಲ್ಲಿ 3,076 ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು ಸೋಂಕುಗಳ ಸಂಖ್ಯೆ 35,408 ಕ್ಕೆ ತಲುಪಿದೆ ಎಂದು ಇರಾನ್ ಆರೋಗ್ಯ ಸಚಿವಾಲಯದ ವಕ್ತಾರ ಕಿಯಾನೌಶ್ ಜಹಾನ್ಪೂರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.