ಶ್ರೀನಗರ,
ಮಾರ್ಚ್ 27 ,ಬೇಸಿಗೆ ರಾಜಧಾನಿ ಶ್ರೀನಗರ ಮತ್ತು ಕಾಶ್ಮೀರ ಕಣಿವೆಯ ಇತರ
ಭಾಗಗಳಲ್ಲಿ ಬಹುತೇಕ ಮಸೀದಿಗಳು ಮತ್ತು ದೇವಾಲಯಗಳು ಮುಚ್ಚಿದ್ದು, ಜನರ ಸಂಚಾರ ಮತ್ತು
ಗುಂಪು ಸೇರುವಿಕೆ ಮೇಲೆ ಕಟ್ಟುನಿಟ್ಟಿನ ನಿರ್ಬಂಧಗಳು ಮುಂದುವರೆದಿರುವುದರಿಂದ ಒಂಬತ್ತನೇ
ದಿನವಾದ ಶುಕ್ರವಾರ ಅಲ್ಲಿನ ಬೀದಿಗಳು ಮತ್ತು ಮಾರುಕಟ್ಟೆಗಳು ಬಿಕೋ ಎನ್ನುತ್ತಿದ್ದವು.ಈ ಮಧ್ಯೆ, ಜನರ ಗುಂಪುಗಳನ್ನು ತಪ್ಪಿಸಲು ಕಣಿವೆಯಲ್ಲಿನ ಮಸೀದಿಗಳು ಮತ್ತು ದೇವಾಲಯಗಳಲ್ಲಿ ಯಾವುದೇ ದೊಡ್ಡ ಪ್ರಾರ್ಥನಾ ಕೂಟಗಳಿಗೆ ಅವಕಾಶ ನಿರಾಕರಿಸಲಾಗಿದೆ. ಕಣಿವೆಯಲ್ಲಿ
65 ವರ್ಷದ ವ್ಯಕ್ತಿಯೊಬ್ಬ ಕೊರೊನಾವೈರಸ್‍ಗೆ ತುತ್ತಾಗಿದ್ದಾನೆ. ಆತನ ಇಬ್ಬರು
ಮಕ್ಕಳಲ್ಲೂ ಸಹ ಗುರುವಾರ ಸೋಂಕು ದೃಢಪಡುವುದರೊಂದಿಗೆ ರಾಜ್ಯದಲ್ಲಿ ಸೋಂಕಿನ ಒಟ್ಟು
ಪ್ರಕರಣಗಳ ಸಂಖ್ಯೆ 9ಕ್ಕೆ ಏರಿದೆ. ಯಾವುದೇ ಪ್ರಾರ್ಥನಾ ಕೂಟಗಳನ್ನು ಕರೆಯದಂತೆ
ಧಾರ್ಮಿಕ ಮುಖಂಡರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡುವಂತೆ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ವರಿಷ್ಠಾಧಿಕಾರಿಗಳಿಗೆ ಸೂಚಿಸಲಾಗಿದೆ. ಸೋಂಕು ಹರಡುವಿಕೆಗೆ ಸಾರ್ವಜನಿಕ ಸಭೆಗಳು
ಸಾಮಾಜಿಕ ಸಂಪರ್ಕಗಳು ಪ್ರಮುಖ ಮೂಲವಾಗಿವೆ ಎಂದು ಜಮ್ಮು-ಕಾಶ್ಮೀರ ಕೇಂದ್ರಾಡಳಿತ
ಪ್ರದೇಶವಕ್ತಾರ ರೋಹಿತ್ ಕನ್ಸಾಲ್ ಶುಕ್ರವಾರ ತಿಳಿಸಿದ್ದಾರೆ. ಕಾಶ್ಮೀರ
ಕಣಿವೆಯಾದ್ಯಂತ ಸತತ ಒಂಬತ್ತನೇ ದಿನವೂ ಜನರ ಓಡಾಟ ಮತ್ತು ಗುಂಪು ಕೂಡುವುದರ ಮೇಲೆ
ಕಟ್ಟುನಿಟ್ಟಿನ ನಿರ್ಬಂಧಗಳು ಮುಂದುವರೆದಿದ್ದು, ಮಾರ್ಚ್ 31 ರವರೆಗೆ ರೈಲು ಸೇವೆಯನ್ನು
ಸ್ಥಗಿತಗೊಳಿಸಲಾಗಿದೆ ಅಧಿಕೃತ ಮೂಲಗಳು ಯುಎನ್‌ಐಗೆ ತಿಳಿಸಿವೆ.