ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸೈಟಿಯ ಚುನಾವಣೆಯಲ್ಲಿ 13 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆ
ರಾಣಿಬೆನ್ನೂರ 15: ಇಲ್ಲಿನ ಮಹಿಷಾಸುರ ಮರ್ದಿನಿ ಅರ್ಬನ್ ಕೋ ಆಪ್ ಕ್ರೆಡಿಟ್ ಸೊಸೈಟಿಯ ಆಡಳಿತ ಮಂಡಳಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಎಲ್ಲ 13 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಚಂದ್ರಶೇಖರ್ ಭಜಂತ್ರಿ ಘೋಷಿಸಿದರು.
ನೂತನ ನಿರ್ದೇಶಕರುಗಳಾಗಿ ರಾಜು ಗಿರಿಯಪ್ಪ ಹೊನ್ನಾಳಿ, ಹುಚ್ಚಂಗೆಪ್ಪ ಪರಸಪ್ಪ ನಾಗಾಲಾಪರ, ಪ್ರಕಾಶ ನಿಂಗಪ್ಪ ಭಾವಿಕಟ್ಟಿ, ಗೀರೀಶ ಶಿವಾನಂದಪ್ಪ ಬತ್ತಿಕೊಪ್ಪ, ಸುಮಾ ಗೋಪಾಲ ಕುಂದಾಪುರ, ಸುನೀತಾ ಜಗದೀಶ ಕುಂದಾಪುರ, ಅಶೋಕ ಧರ್ಮಪ್ಪ ಮಡಿವಾಳರ, ದೀಪಕ ದೇವೇಂದ್ರ್ಪ ಕಲಾಲ, ಮಂಜುನಾಥ ಸುಭಾಸ ಬೆಟಗೇರಿ, ಗೀರೀಶ ರಂಗಪ್ಪ ಅಡಕಿ, ಕುರವತ್ತಿ ನಾಗಪ್ಪ ಮಳವಳ್ಳಿ, ಅರುಣ ಶ್ರೀನಿವಾಸ ನಾಯಕ, ಸದಾನಂದ ಗೋವಿಂದಪ್ಪ ಕುಂದಾಪುರ ಆಯ್ಕೆಗೊಂಡರು.
ಆನಂತರ ನಡೆದ ಅಭಿನಂದನಾ ಸಮಾರಂಭದಲ್ಲಿ ಸೊಸೈಟಿಯ ಮಾಜಿ ಅಧ್ಯಕ್ಷೆ ಶಶಿಕಲಾ ಕುಂದಾಪುರ, ಶಿವಾನಂದ ಸಾಲಗೇರಿ, ರಮೇಶ್ ಬ್ಯಾಹಟ್ಟಿ, ರವಿ ಮಾಂಡ್ರೆ, ಇರ್ಫಾನ್ ದಿಡಗೂರ್, ಲಕ್ಷ್ಮಣ ಶಿಗ್ಗಾವಿ , ಅಮೀರ್ ಗುರನ್ನಿ, ರಾಘವೇಂದ್ರ ಎನ್ , ಭೀಮಣ್ಣ ಹಾವನೂರ, ಶಿವಕುಮಾರ್ ಸೋಗಿ, ಬಸವರಾಜ್ ಬಂಗೇರ್ ಹಾಗೂ ಸೊಸೈಟಿಯ ಸಿಬ್ಬಂದಿಗಳು ಇದ್ದರು