ಕಾಯಕ,ದಾಸೋಹ: ಬಸವ ಪ್ರಜ್ಞೆಯ ತಳಹದಿ: ರಾಮಪ್ಪ

Kayaka, Dasoha: Base of Snail Consciousness: Ramappa

ಕಾಯಕ,ದಾಸೋಹ: ಬಸವ ಪ್ರಜ್ಞೆಯ ತಳಹದಿ: ರಾಮಪ್ಪ

ಹೂವಿನ ಹಡಗಲಿ 15: ಸತ್ಯ ಶುದ್ಧ ಕಾಯಕ ಮಾಡುವುದು ಕಾಯಕದಿಂದ ಗಳಿಸಿದ ಸಂಪತ್ತನ್ನು ದಾಸೋಹದ ಮೂಲಕ ಸಮಾಜಕ್ಕೆ ವಿನಿಯೋಗಿಸುವುದು ಬಸವ ಪ್ರಜ್ಞೆಯ  ತಳಹದಿಯಾಗಿದೆ ಎಂದು ಶಿಕ್ಷಕ,ಸಾಹಿತಿ ರಾಮಪ್ಪ  ಕೋಟಿಹಾಳ್ ಅಭಿಪ್ರಾಯಪಟ್ಟರು.   

ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಹೊಳಗುಂದಿಯ ಗ್ಲೋಬಲ್ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಹಾಗೂ ಕಾಲೇಜಿನಲ್ಲಿ ಆಯೋಜಿಸಿದ್ದ ಗುಡೆಕೋಟೆ ಕರಿಬಸಪ್ಪ, ಚಂದ್ರಮ್ಮ ಸ್ಮರಣಾರ್ಥ ದತ್ತಿ ಐಗೋಳ ಬಸವರಾಜಪ್ಪ ಸ್ಮರಣಾರ್ಥ ದತ್ತಿ, ತುರುಕಾಣಿ ಶಿವಪುತ್ರ​‍್ಪ ಸ್ಮಾರಕದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ’ಕಾಯಕ ಮತ್ತು ದಾಸೋಹ’, ಹಾಗೂ’ಅವಿಭಕ್ತ ಕುಟುಂಬಗಳು’ ಕುರಿತು ಮಾತನಾಡಿದರು.  ದತ್ತಿದಾನಿಗಳಾದ ಗುಡೆಕೋಟೆ      ಬಸವರಾಜಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಕ್ಕಳಲ್ಲಿ ಸಂಸ್ಕಾರ ಬೆಳಸುವಲ್ಲಿ, ಒಂಟಿತನ, ಅಭದ್ರತೆ ನೀಗಿಸುವಲ್ಲಿ ಅವಿಭಕ್ತ ಕುಟುಂಬಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ಅಭಿಪ್ರಾಯಪಟ್ಟರು.  

ಶಾಲೆಯ ಆಡಳಿತಾಧಿಕಾರಿ   ಡಿ.ಕರೀಂಸಾಬ್,  ಕಾಲೇಜಿನ ಪ್ರಾಚಾರ್ಯ      ಜಿ.ಸೋಮನಗೌಡ,ಪಬ್ಲಿಕ್ ಸ್ಕೂಲ್  ಪ್ರಾಚಾರ್ಯರಾದ ಹೆಚ್‌.ಕಿನ್ನರೇಶ್ವರಿ, ದತ್ತಿದಾನಿಗಳಾದ ಐಗೋಳ ಸುಭಾಷ್ ಇದ್ದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಉಪನ್ಯಾಸಕ ಬಸವರಾಜಪ್ಪ ಸ್ವಾಗತಿಸಿದರು. ಶಿಕ್ಷಕ ಅಜಯ್ ಕವನ ವಾಚಿಸಿದರು. ವಿ.ಭೀಮಾನಾಯ್ಕ್‌ ಪ್ರಾಸ್ತಾವಿಕವಾಗಿ ಮಾತನಾಡಿರು.ಕಸಾಪ ಇಟ್ಟಿಗಿ ಹೋಬಳಿ ಘಟಕದ ಅಧ್ಯಕ್ಷ ಜಿ.ಬಿ.ವಿನಯ್ ರಾಜ್  ಅಧ್ಯಕ್ಷತೆ ವಹಿಸಿದ್ದರು.