ಲೋಕದರ್ಶನ
ವರದಿ
ಕೊಪ್ಪಳ 19:
ಪತ್ರಿಕೋದ್ಯಮದಲ್ಲಿ ಜಿಲ್ಲೆಯ ಹಲವಾರು ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿ ಅನುಭವವಿರುವ
ಬಸವರಾಜ ಮರದೂರ ಅವರು ಸಂಪಾದಕರ ಸಾರಥ್ಯದಲ್ಲಿ
ನವೆಂಬರ್ನಲ್ಲಿ ಹೊರ ಹೊಮ್ಮುತ್ತಿರುವ "ಕೊಪ್ಪಳ ಕನಸು"
ಎಂಬ ಕನ್ನಡ ಮಾಸ ಪತ್ರಿಕೆ ಪೋಸ್ಟರ್
ಬಿಡುಗಡೆಯನ್ನು ತಾಲೂಕಿನ ಇರಕಲಗಡ ಗ್ರಾಮದ ಮೈತ್ರಿ ಅಸೋಸಿಯೇಷನ್ ಆಶ್ರಯದಲ್ಲಿ ವೃದ್ಧರು ಸಮ್ಮುಖದಲ್ಲಿ ವಿಜಯದಶಮಿ
ದಸರಾದಂದು ಸಿಹಿ ಹಂಚಿ ಹೊಸ
ಮಾಸ ಪತ್ರಿಕೆಯ ಪೋಸ್ಟರ್ನ್ನು ಬಿಡುಗಡೆಗೊಳಿಸಲಾಯಿತು.
ಪ್ರಧಾನ ಸಂಪಾದಕ ಬಸವರಾಜ ಮರದೂರ, ಗೌರವ ಸಂಪಾದಕ ಸಂತೋಷ ಕುಮಾರ್, ಸಹ ಸಂಪಾದಕ ವೀರೇಂದ್ರ ಈಶ್ವರ ಗೌಡರು, ಮತ್ತು ನಾಗರಾಜ್ ಡಿ ಎಮ್, ರಾಘವೇಂದ್ರ ಗೊಂದಿ ಮತ್ತಿತರರು ಉಪಸ್ಥಿತರಿದ್ದರು.