ಯಲಬುಗರ್ಾ: ನಮ್ಮ ಜಿಲ್ಲೆಯಲ್ಲಿ 2018-19ನೇ ಸಾಲಿನ ಮುಂಗಾರು ಮಳೆ ಪ್ರಾರಂಭದಲ್ಲಿ ಮೇ ಮತ್ತು ಜೂನ್ ತಿಂಗಳ ಮೊದಲನೆ ವಾರದಲ್ಲಿ ಮಳೆ ಚನ್ನಾಗಿ ಆಗಿದ್ದು ನಂತರ ಮಳೆ ಕೈಕೊಟ್ಟಿದ್ದು ಬಿಕರ ಬರಗಾಲ ಎದುರಾಗಿದ್ದು ತಕ್ಷಣ ಮುಖ್ಯಮಂತ್ರಿಯವರು ನಮ್ಮ ಜಿಲ್ಲೆಯನ್ನು ಬರಗಾಲ ಪ್ರದೇಶವೆಂದು ಘೋಷಿಸಿ ಎಂದು ಕನರ್ಾಟಕ ಜನಹಿತ ವೇದಿಕೆ ತಾಲೂಕ ಅಧ್ಯಕ್ಷ ಇಮಾಮಸಾಬ ಮುಜಾವರ ಸರಕಾರವನ್ನು ಆಗ್ರಹಿಸಿದ್ದಾರೆ.
ನಗರದಲ್ಲಿ ತಹಶೀಲ್ದಾರ್ ರಮೇಶ ಅಳವಂಡಿಕರ್ ಅವರಿಗೆ ಸೋಮವಾರ ಮನವಿ ಸಲ್ಲಿಸಿ ಅವರು ಮಾತನಾಡಿದರು.
ನಮ್ಮ ತಾಲೂಕಿನಲ್ಲಿ 46857 ಹೇಕ್ಟರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು ಸುಮಾರು 50 ದಿನಗಳಿಂದ ಮಳೆಯಾಗದ ಕಾರಣ ರೈತರು ಬಿತ್ತಿರುವ ಬೆಳೆಗಳಾದ ಹೆಸರು, ಮೆಕ್ಕೆಜೋಳ, ಸಜ್ಜೆ,ತೋಗರಿ, ಶೇಂಗಾ ಹಾಗೂ ಇನ್ನೀತರ ಬೆಳೆಗಳು ಸಂಪೂರ್ಣವಾಗಿ ಒಣಗಿಹೊಗಿದ್ದು ಇದಕ್ಕೆ ಸಂಬಂದಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ಇವರೆಗೂ ಬೆಳೆ ಹಾನಿ ಬಗ್ಗೆ ಸವರ್ೆ ಮಾಡದೆ ನಿರ್ಲಕ್ಷ ವಹಿಸಿದ್ದಾರೆ,ಅಷ್ಟೇ ಅಲ್ಲದೆ 2016-17 ನೇ ಸಾಲಿನಲ್ಲಿ ಬೆಳೆ ವಿಮೆ ತುಂಬಿರುವ ರೈತರಿಗೆ ಇದುವರೆಗು ಯಾವುದೇ ವಿಮೆ ಜಮಾ ಮಾಡದೆ ಅಧಿಕಾರಿಗಳು ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಮತ್ತು 2016-17ನೇ ಸಾಲಿನ ಬೆಳೆ ನಷ್ಟದ ಬಗ್ಗೆ ಯಾವ ಮಾಹಿತಿ ಇದೆ ಎಂಬುದನ್ನು ಸ್ಪಷ್ಟ ಪಡಿಸಬೇಕು ಹಾಗೂ ಈ ವರ್ಷದ ಬೆಳೆ ನಷ್ಟದ ಬಗ್ಗೆ ಸರಿಯಾದ ರೀತಿಯಲ್ಲಿ ಸವರ್ೆ ಮಾಡಬೇಕು ಎಂದು ಮನವಿ ಮಾಡಿದರು.
ಸಂಘಟನೆಯ ಮುಖಂಡರಾದ, ದೇವಪ್ಪ ಪರಂಗಿ, ಬಸವರಾಜ ಕೊವಿ, ಯಮನೂರಪ್ಪ ಹರಿಜನ, ಭರಮೇಂದ್ರ, ಯಮನೂರಪ್ಪ ಈಳಗೇರ, ಶರಣಪ್ಪ ಮಾಟಲದಿನ್ನಿ, ಹನುಮಗೌಡ ಮಾಲಿಪಾಟೀಲ, ಶರಣಪ್ಪ ಮಡಿವಾಳರ್ ಸೇರಿದಂತೆ ಅನೇಕರು ಹಾಜರಿದ್ದರು.