ಬೆಂಗಳೂರು 17: ಮಳೆಯ ಆರ್ಭಟಕ್ಕೆ ಕೊಡಗು ಜಿಲ್ಲೆ ಭಾರೀ ಸಂಕಷ್ಟಕ್ಕೆ ಸಿಲುಕಿದ್ದು, ಎಲ್ಲೆಂದರಲ್ಲಿ ಬೆಟ್ಟಗಳು ಕುಸಿದು ಬೀಳುತ್ತಿರುವ ಪರಿಣಾಮ ಸಾವಿರಾರು ಜನರು ತಮ್ಮ ತಮ್ಮ ಮನೆಗಳನ್ನು ಕಳೆದುಕೊಂಡಿದ್ದಾರೆ. ಬೆಟ್ಟಗಳು ಕುಸಿದು ಬೀಳುತ್ತಿರುವ ಪರಿಣಾಮ ಮಕನೂರು ಪ್ರದೇಶದಲ್ಲಿರುವ ಕೊಡಲು-ಮಂಗಳೂರಿನ ಹೆದ್ದಾರಿಗಳು ಸಂಪೂರ್ಣವಾಗಿ ಬಂದ್ ಆಗಿವೆ ಎಂದು ಶುಕ್ರವಾರ ತಿಳಿದುಬಂದಿದೆ.
ಮಳೆಯ ಆರ್ಭಟಕ್ಕೆ ಹಲವೆಡೆ ಸಂಭವಿಸಿದ ದುರಂತದಲ್ಲಿ ಗುರುವಾರ ಒಟ್ಟು 7 ಮಂದಿ ಮೃತಪಟ್ಟಿದ್ದಾರೆ. ಕೊಡಗು ಜಿಲ್ಲೆಯ ವಿರಾಜಪೇಟೆ ಮತ್ತು ಮಡಿಕೇರಿ ತಾಲೂಕುಗಳಲ್ಲಿ ಐವರು ಮೃತಪಟ್ಟಿದ್ದಾರೆ. ಕಲಬುರಗಿಯಲ್ಲಿ ಗೋಡೆ ಕುಸಿದುಬಿದ್ದ ಪರಿಣಾಮ ಮೂವರು ಮಂದಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ತೀರ್ಥಹಳ್ಳಿ ತಾಲ್ಲೂಕು ಕೋಣಂದೂರಿನಲ್ಲಿ ಮನೆಯ ಗೋಡೆ ಕುಸಿದು ಬಿದ್ದು 5 ವರ್ಷದ ಮಗು ಮೃತಪಟ್ಟಿದೆ. ಮಡಿಕೇರಿಯ ಮುತ್ತಪ್ಪ ದೇವಾಲಯದ ಬಳಿ ಮನೆ ಕುಸಿದು ರಸ್ತೆಗೆ ಬಂದು ನಿಂತಿದೆ. ಅಪಾಯ ತಿಳಿದು ಮನೆಯವರನ್ನು ಗಂಜಿಕೇಂದ್ರಕ್ಕೆ ಸ್ಥಳಾಂತರಿಸಿದ ಕಾರಣ ಅಪಾಯಗಳು ಸಂಭವಿಸಿಲ್ಲ. ತೇವಾಂಶ ಹೆಚ್ಚಾಗಿ ಗುಡ್ಡ ಕುಸಿದ ಪ್ರಕರಣಗಳು ಹೆಚ್ಚಾಗುತ್ತಿದ್ದು ಬೆಟ್ಟಗುಡ್ಡಗಳಲ್ಲಿ ವಾಸವಿದ್ದ ಸಾವಿರಾರು ಜನರನ್ನು ಗಂಜಿಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ.
ಮಲೆನಾಡಿನಲ್ಲಿ ಭೂಕುಸಿತ ಗೊಂಡಿದ್ದು ಪರಿಣಾಮ ರಕ್ಷಣಾ ಕಾಯರ್ಾಚರಣೆಗಳಿಗೆ ತೊಡಕು ಎದುರಾಗಿದೆ. 300ಕ್ಕೂ ಹೆಚ್ಚಿ ಮಂದಿ ರಕ್ಷಣಾ ಕಾಯರ್ಾಚರಣೆಗಳಿಗಾಗಿ ಕಾದು ಕುಳಿತಿದ್ದಾರೆ. ಗುಡ್ಡ ಕುಸಿತಗೊಂಡ ಪರಿಣಾಮ ರಸ್ತೆಗಳು ಸಂಪೂರ್ಣವಾಗಿ ನಾಶಗೊಂಡಿದ್ದು, ರಕ್ಷಣಾ ಕಾಯರ್ಾಚರಣೆಗಳಿಗೆ ಸಮಸ್ಯೆಯಾಗುತ್ತಿದೆ. ಕೊಡಗು ಜಿಲ್ಲೆಯಲ್ಲಿ ಗುರುವಾರ ಬೆಳಿಗ್ಗೆ 8.30 ರಿಂದ ರಾತ್ರಿ 8.30ರವರೆಗೂ 60-70 ಎಂಎಂ ಮಳೆಯಾಗಿದೆ.
ಮಳೆಯ ಪರಿಣಾಮ ರೈಲು ಸಂಚಾರಗಳ ಮೇಲೆ ಗಂಭೀರವಾದ ಪರಿಣಾಮ ಬೀರಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪ್ರಖ್ಯಾತ ದೇವಾಲಯ ಕುಕ್ಕೆ ಸುಬ್ರಮಣ್ಯ ದೇಗುಲದ ಸುತ್ತಲೂ ನೀರು ತಂಬಿದೆ. ಕಬಿನಿ ಜಲಾಶಯದಲ್ಲಿ ಒಳಹರಿವು ಹೆಚ್ಚಾಗಿದ್ದು, ಮೈಸೂರು ಜಿಲ್ಲಾ ಆಡಳಿತ ಮಂಡಳಿಯ ಅಧಿಕಾರಿಗಳು ಪ್ರವಾಹದ ಎಚ್ಚರಿಕೆಗಳನ್ನು ನೀಡಿದ್ದಾರೆಂದು ತಿಳಿದುಬಂದಿದೆ.
ಜನರು ಎಲ್ಲಿಯೂ ಹೋಗಲು ಸಾಧ್ಯವಾಗುತ್ತಿಲ್ಲ. ಮಳೆಯಿಂದಾಗಿ ಸೃಷ್ಟಿಯಾಗಿರುವ ಅವಾಂತರಗಳಿಂದಾಗಿ ಜನರು ಮನೆಗಳಲ್ಲಿಯೇ ಸಿಲುಕಿ ಹಾಕಿಕೊಂಡಿದ್ದಾರೆ. ಇಂತಹ ಮಳೆಯನ್ನು ಈ ಹಿಂದೆಂದೂ ನೋಡಿರಲಿಲ್ಲ ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.
ಜಲ ಪ್ರಳಯಕ್ಕೆ ನೂರಾರು ಬಲಿ
ನವದೆಹಲಿ 17: ದೇವರ ನಾಡು ಕೇರಳ ಶತಮಾನದಲ್ಲೇ ಕಂಡು ಕೇಳರಿಯದ ಜಲಪ್ರಳಯದಿಂದ ತತ್ತರಿಸಿದೆ. ವರುಣನ ಮರಣ ಮೃದಂಗದಲ್ಲಿ ಈವರೆಗೆ 116 ಮಂದಿ ಬಲಿಯಾಗಿದ್ದಾರೆ. ಭೀಕರ ಪ್ರಕೃತಿ ವಿಕೋಪಗಳಿಗೆ ಹಲವರು ಕಣ್ಮರೆಯಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ.
ಕೇರಳ ವಿವಿಧ ಭಾಗಗಳಲ್ಲಿ ಸಾವು-ನೋವಿನ ವರದಿಗಳು ಬರುತ್ತಲೇ ಇವೆ. ಪ್ರಧಾನಿ ನರೇಂದ್ರ ಮೋದಿ ಇಂದು ಸಂಜೆ ಕರಾವಳಿ ರಾಜ್ಯ ಕೇರಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಖುದ್ದಾಗಿ ಅವಲೋಕಿಸಲಿದ್ದಾರೆ.
ಇಂದು ಬೆಳಗ್ಗೆ ಸಹ ಪ್ರಧಾನಿ ಮೋದಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ. ಅಗತ್ಯವಾದ ಎಲ್ಲ ನೆರವಿನ ಭರವಸೆ ನೀಡಿದ್ದಾರೆ. ಸಂಜೆ ರಾಜ್ಯಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಾಮಶರ್ಿಸುವುದಾಗಿ ತಿಳಿಸಿದ್ಧಾರೆ. ನಿರಂತರ ಮಳೆ, ಪ್ರವಾಹ ಮತ್ತು ಭೂಕುಸಿತಗಳಿಂದ ಕೇರಳ ಜನತೆ ಕಂಗಾಲಾಗಿದ್ದು, ರೈಲು ಮತ್ತು ವಿಮಾನಗಳ ಸಂಚಾರ ಸ್ಥಗಿತಗೊಂಡಿದೆ. ರಾಜ್ಯದ 14 ಜಿಲ್ಲೆಗಳಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ. ನೈಸಗರ್ಿಕ ವಿಕೋಪದಿಂದಾಗಿ ಆಗಸ್ಟ್ 26ರವರೆಗೆ ಕೊಚ್ಚಿ ವಿಮಾನವನ್ನು ಬಂದ್ ಮಾಡಲಾಗಿದೆ.
ನದಿಗಳು, ಉಪ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿ ರಾಜ್ಯದಲ್ಲಿನ 35ಕ್ಕೂ ಜಲಾಶಯಗಳ ಎಲ್ಲ ಗೇಟ್ಗಳನ್ನು ತೆರೆಯಲಾಗಿದೆ.
ಕೇರಳದಲ್ಲಿನ ಭೀಕರ ನೆರೆ ಹಾವಳಿ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ರಾಜ್ಯಾದ್ಯಂತ ರಕ್ಷಣಾ ಮತ್ತು ಪರಿಹಾರ ಕಾಯರ್ಾಚರಣೆಗಳನ್ನು ಕ್ಷಿಪ್ರವಾಗಿ ಕೈಗೊಳ್ಳುವಂತೆ ಈಗಾಗಲೇ ರಕ್ಷಣಾ ಸಚಿವಾಲಯಕ್ಕೆ ಸೂಚನೆ ನೀಡಿದ್ದಾರೆ.