ಸಂಕೇಶ್ವರ : 'ಪಡೆಯುವ ಅಂಕಗಳಿಗಿಂತ ಗಳಿಸುವ ಜ್ಞಾನ ಶ್ರೇಷ್ಠ' ಎಂದು ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ಕೆ.ಬಿ.ಗುಡಶಿ ಅವರು ಹೇಳಿದರು. ಸ್ಥಳೀಯ ದು.ವಿ.ಸಂ. ಸಂಘದ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಹುಕ್ಕೇರಿ ತಾಲೂಕು ಪ್ರೌಢಶಾಲಾ ವಿದ್ಯಾರ್ಥಿಗಳ ವಿಜ್ಞಾನ ವಸ್ತುಪ್ರದರ್ಶನ ಮತ್ತು ಭಿತ್ತಿಚಿತ್ರ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡುತ್ತಾ 'ಇಂದು ವಿದ್ಯಾಥರ್ಿಗಳು ಅಂಕಗಳಿಸುವುದೇ ಮುಖ್ಯವೆಂದು ತಿಳಿದುಕೊಂಡಿದ್ದಾರೆ.
ಆದರೆ ಅಂಕಗಳಿಸುವುದಕ್ಕಿಂತ ಜ್ಞಾನ ಸಂಪಾದನೆ ಶ್ರೇಷ್ಠವಾದುದು. ವಿದ್ಯಾಥರ್ಿಗಳು ತಮ್ಮೊಳಗಿನ ಪ್ರತಿಭೆಯನ್ನು ಸೃಜನಾತ್ಮಕ ಚಟುವಟಿಕೆಗಳ ಮೂಲಕ ವ್ಯಕ್ತ ಪಡಿಸಿಕೊಳ್ಳಬೇಕು. ತಮ್ಮ ಕನಸುಗಳನ್ನು ನನಸುಗೊಳಿಸಿಕೊಳ್ಳುವ ದಿಶೆಯಲ್ಲಿ ಪ್ರಯತ್ನಿಸಬೇಕು' ಎಂದು ಅಭಿಪ್ರಾಯಪಟ್ಟರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಬೆಳಗಾವಿಯ ನಿವೃತ್ತ ಪ್ರಾಧ್ಯಾಪಕರಾದ ಡಾ. ಗುರುದೇವಿ ಹುಲೆಪ್ಪನವರಮಠ ಅವರು 'ನಾವು ಜಗ ಮೆಚ್ಚಿಸಲು ಬದುಕುವುದ್ಕಕಿಂತ ಆತ್ಮ ಮೆಚ್ಚುವಂತೆ ಬದುಕಬೇಕು. ವಿಜ್ಞಾನವನ್ನು ಅಧ್ಯಯನ ಮಾಡುವುದೆಂದರೆ ವೈಜ್ಞಾನಿಕ, ವೈಚಾರಿಕ ಮನೋಭಾವನೆಯನ್ನು ಬೆಳೆಸಿಕೊಳ್ಳುವುದು.
ವಿದ್ಯಾರ್ಥಿಗಳು ಯಾವುದೇ ವಿಷಯವನ್ನು ಕಣ್ಣುಮುಚ್ಚಿ ನಂಬಬಾರದು. ಪ್ರಶ್ನಿಸುವ ಮೂಲಕ ವಿಷಯದ ಸತ್ಯಾಸತ್ಯತೆಯನ್ನು ಅರಿಯಬೇಕು. ವಿದ್ಯಾರ್ಥಿಗಳು ತಮ್ಮಲ್ಲಿ ವೈಚಾರಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳಲು ಇಂತಹ ಸ್ಪರ್ಧೆಗಳು ಸಹಾಯಕಾರಿಯಾಗುತ್ತವೆ' ಎಂದು ತಿಳಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಸ್ಥಾನಿಕ ನಿಯಂತ್ರಣ ಸಮೀತಿಯ ಚೇರ್ಮನ್ರಾದ ವಿನಯಕುಮಾರ ಪಾಟೀಲ ಅವರು ವಹಿಸಿಕೊಂಡು 'ಗ್ರಾಮೀಣ ಭಾಗದ ವಿದ್ಯಾಥರ್ಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ನಮ್ಮ ಸಂಘವು ನಿರಂತರವಾಗಿ ಶ್ರಮಿಸುತ್ತಿದೆ.
ಆದ್ದರಿಂದ ಎಲ್ಲ ವಿದ್ಯಾರ್ಥಿಗಳು ನಮ್ಮ ಸಂಘದ ಸದುಪಯೋಗವನ್ನು ಪಡೆದುಕೊಂಡು ತಮ್ಮ ಜೀವನವನ್ನು ಸರಿಯಾಗಿ ರೂಪಿಸಿಕೊಳ್ಳಬೇಕು' ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿಗಳನ್ನು, ಆಡಳಿತ ಮಂಡಳಿಯ ಸದಸ್ಯರಾದ ಕೆ.ಎಂ.ನಿಂಗನೂರಿ, ವಿಜಯ ರವದಿ ಅವರನ್ನು ಸತ್ಕರಿಸಲಾಯಿತು. ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಸಮಾರಂಭ ಪ್ರಾರಂಭವಾಯಿತು. ಪ್ರ್ರಾಚಾರ್ಯರಾದ ಎಸ್.ಯು.ಯರಗಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಾ. ಶ್ರೀಶೈಲ ಮಠಪತಿ ಅತಿಥಿಗಳನ್ನು ಪರಿಚಯಿಸಿದರು. ಸಮಾರಂಭದಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಡಿಡಿಪಿಯು ಸಂಜಯ ಕಾಂಬಳೆ, ಹುಕ್ಕೇರಿ ತಾಲೂಕಿನ ಬಿಇಒ ಮೋಹನ ದಂಡಿನ, ಆಡಳಿತ ಮಂಡಳಿಯ ಸದಸ್ಯರಾದ ಮಲಗೌಡಾ ಪಾಟೀಲ, ಕಾರ್ಯದಶರ್ಿಗಳಾದ ಜಿೆ.ಎಸ್.ಕೊಟಗಿ, ಕಾರ್ಯನಿರ್ವಾಹಕರಾದ ಬಿ.ಎ.ಪೂಜಾರ ಉಪಸ್ಥಿತರಿದ್ದರು.
ಹುಕ್ಕೇರಿ ತಾಲೂಕಿನ ಪ್ರೌಢಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಮಹಾವಿದ್ಯಾಲಯದ ಸಿಬ್ಬಂದಿಯವರು ಹಾಜರಿದ್ದರು. ಪ್ರೊ. ಸತೀಶ ತೇರಣಿ ಮತ್ತು ಪ್ರೊ. ಲಕ್ಷ್ಮೀ ಕೊಬರ್ು ನಿರೂಪಿಸಿದರು. ಪ್ರೊ. ಝಡ್.ಡಿ. ಮುಲ್ತಾನಿ ವಂದಿಸಿದರು.