ಬೆಳಗಾವಿ, 12: ಇದೇ 23 ರಿಂದ ಮೂರು ದಿನಗಳ
ಕಾಲ ನಡೆಯಲಿರುವ ಕಿತ್ತೂರ ಉತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಊಟ, ಕಲಾವಿದರ ವಸತಿ,
ಜನರ ಸುರಕ್ಷತೆಯಲ್ಲಿ ಯಾವುದೇ ಲೋಪ ಉಂಟಾಗದಂತೆ ಸೂಕ್ತ
ವ್ಯವಸ್ಥೆ ಕಲ್ಪಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್. ಬಿ.ಬೊಮ್ಮನಹಳ್ಳಿ
ಸೂಚನೆ ನೀಡಿದರು.
ಕಿತ್ತೂರು
ಉತ್ಸವದ ಹಿನ್ನೆಲೆಯಲ್ಲಿ ಶುಕ್ರವಾರ (ಅ.12) ಕಿತ್ತೂರಿಗೆ ಭೇಟಿ ನೀಡಿ ಪೂರ್ವ
ಸಿದ್ಧತೆ ಪರಿಶೀಲಿಸಿದ ಬಳಿಕ ನಡೆದ ಸಭೆಯಲ್ಲಿ
ಅವರು ಮಾತನಾಡಿದರು.
ಮೊದಲ
ಬಾರಿಗೆ ಹೆಲಿಟೂರಿಸಂ ಸೌಲಭ್ಯ ಕಲ್ಪಿಸಿರುವುದರಿಂದ ಎಲ್ಲ ರೀತಿಯ ಸುರಕ್ಷತಾ
ಕ್ರಮಗಳನ್ನು ತೆಗೆದುಕೊಳ್ಳಬೇಕು.
ಕುಸ್ತಿ,
ಸೈಕ್ಲಿಂಗ್, ಮ್ಯಾರಥಾನ್ ಜತೆಗೆ ಈ ಸಲ ಬೋಟಿಂಗ್
ಆಯೋಜಿಸುವ ಬಗ್ಗೆ ಚಚರ್ೆ ನಡೆದಿದ್ದು, ಅಗತ್ಯ ಮುಂಜಾಗ್ರತೆ ವಹಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದರು.
ಸ್ವಚ್ಛತೆ-ಸುರಕ್ಷತೆಗೆ ಆದ್ಯತೆ:
ಮೂರು
ದಿನಗಳ ಉತ್ಸವದಲ್ಲಿ ಸಾವಿರಾರು ಜನರು ಭಾಗವಹಿಸುವುದರಿಂದ ಊಟದ
ಸಂದರ್ಭದಲ್ಲಿ ಸ್ಬಚ್ಛತೆಗೆ ಆದ್ಯತೆ ನೀಡಬೇಕು. ಸಾರ್ವಜನಿಕರಿಗೆ ಉಣಬಡಿಸುವ ಮುಂಚೆ ಆಹಾರ ಸುರಕ್ಷತಾ ಆಧಿಕಾರಿಗಳಿಂದ
ಪರಿಶೀಲನೆ ನಡೆಸಬೇಕು ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ಸೂಚನೆ ನೀಡಿದರು.
ಕ್ರೀಡೆಗಳು,
ಹೆಲಿಟೂರಿಸಂ, ಬೋಟಿಂಗ್ ಸೇರಿದಂತೆ ಹಲವು ಬಗೆಯ ಕಾರ್ಯಕ್ರಮಗಳನ್ನು
ಹಮ್ಮಿಕೊಳ್ಳುವುದರಿಂದ ಜನರ ಸುರಕ್ಷತೆಗೆ ಕ್ರಮಕೈಗೊಳ್ಳಬೇಕು
ಎಂದರು.
ಕಿತ್ತೂರು
ಉತ್ಸವವು ಜಿಲ್ಲಾ ಉತ್ಸವವಾಗಿದ್ದು, ಸಣ್ಣಪುಟ್ಟ ಲೋಪದೋಷಗಳು ಕಂಡುಬಂದರೆ ಅವುಗಳಿಗೆ ಸರಿಪಡಿಸುವ ಮೂಲಕ ಒಟ್ಟಾರೆಯಾಗಿ ಉತ್ಸವವನ್ನು
ಯಶಸ್ವಿಯಾಗಿಸಲು ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ
ಶಾಸಕ ಮಹಾಂತೇಶ ದೊಡ್ಡಗೌಡರ ಅವರು, ಈ ಬಾರಿ ಅನೇಕ
ಗಣ್ಯರು ಉತ್ಸವದಲ್ಲಿ ಭಾಗವಹಿಸಲಿದ್ದು, ಉತ್ಸವವನ್ನು ಅಚ್ಚುಕಟ್ಟಾಗಿ ನಡೆಸಲು ಎಲ್ಲ ರೀತಿಯ ಸಿದ್ಧತೆ
ಮಾಡಿಕೊಳ್ಳಲಾಗುವುದು ಎಂದರು.
ಮೂರು ದಿನಗಳ ಉತ್ಸವದಲ್ಲಿ
ಪ್ರತಿದಿನ 15 ರಂತೆ ಒಟ್ಟು 45 ಬಗೆಯ
ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು. ಸ್ಥಳೀಯ, ರಾಜ್ಯ ಹಾಗೂ ರಾಷ್ಟ್ರಮಟ್ಟದ ಕಲಾವಿದರಿಗೆ
ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಕನ್ನಡ ಮತ್ತು
ಸಂಸ್ಕೃತಿ ಇಲಾಖೆಯ ಸಹಾಯಕ ನಿದರ್ೆಶಕ ಶ್ರೀಶೈಲ್ ಕರಿಶಂಕರಿ ವಿವರಿಸಿದರು.
ಉತ್ಸವದ ಎರಡನೇ ದಿನ ಮೂಡಬಿದಿರೆಯ ಆಳ್ವಾಸ್ ನುಡಿಸಿರಿ ತಂಡದ 200 ಕಲಾವಿದರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಬೈಲಹೊಂಗಲ ಉಪವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಹೇಳಿದರು. ಕಲಾವಿದರ ಊಟ ವಸತಿ, ವೇದಿಕೆ, ಮೆರವಣಿಗೆ, ವೀರಜ್ಯೋತಿ ಸಂಚಾರ ಸೇರಿದಂತೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅವರು ಸಭೆಯಲ್ಲಿ ತಿಳಿಸಿದರು. ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು ವೇದಿಕೆಯ ಸ್ಥಳ ಪರಿಶೀಸಿದರು. ನಂತರ ವಸ್ತು ಸಂಗ್ರಹಾಲಯ ವೀಕ್ಷಿಸಿದರು.