ಕಿತ್ತೂರು ಉತ್ಸವ ಪೂರ್ವಭಾವಿ ಸಭೆ

ಚನ್ನಮ್ಮ ಕಿತ್ತೂರು 02ಃ   ಅಕ್ಟೋಬರ 23, 24 ಮತ್ತು 25 ರಂದು ನಡೆಯುವ ಕಿತ್ತೂರು ಉತ್ಸವಕ್ಕೆ ಸರಕಾರದಿಂದ 1 ಕೋಟಿ ಅನುದಾನ ಮೂರು ದಿನ ಅದ್ದೂರಿ ಕಿತ್ತೂರು ಉತ್ಸವ ಆಚರಣೆ ಮಾಡಲಾಗುವದೆಂದು ಬೃಹತ ಕೈಗಾರಿಕಾ ಮತ್ತು ಜಿಲ್ಲಾ ಉತ್ಸುವಾರಿ ಸಚಿವ ಜಗದೀಶ ಶೆಟ್ಟರ ಹೇಳಿದರು.

ಇಲ್ಲಿಯ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಅಕ್ಟೋಬರ 23, 24 ಮತ್ತು 25 ರಂದು ನಡೆಯುವ ಕಿತ್ತೂರು ಉತ್ಸವದ ಪೂರ್ವ ಬಾವಿ ಸಭೆಯಲ್ಲಿ ಮಂಗಳವಾರ ಮಾತನಾಡಿದ ಅವರು, ಜಿಲ್ಲೆಯಲ್ಲಿ ಅತೀವೃಷ್ಟಿಯಿಂದ ಹಾನಿಯಾಗಿದೆ ಸತ್ಯ. ಹಾನಿಗೊಳಗಾದವರನ್ನು ಸರಕಾರ ಸಂತೈಸುತ್ತಿದೆ. ಪರಂಪರಾಗತವಾಗಿ ಮಾಡುತ್ತ ಬಂದ ಕಿತ್ತೂರು ಉತ್ಸವನ್ನು ಈ ಕಾರಣ ಭಂಗಗೊಳಿಸುವುದು ಬೇಡ. ಉತ್ತರ ಕರ್ನಾಟಕದ ಹೆಮ್ಮೆಯ ಉತ್ಸವ ಮತ್ತು ರಾಣಿ ಚನ್ನಮ್ಮಾಜಿಯ ಕಿತ್ತೂರಿನ ಇತಿಹಾಸ ಶೌರ್ಯ, ಸಾಹಸ, ಸ್ಪೂರ್ತಿದಾಯಕವಾಗುವ ಈ ನಿಟ್ಟಿನಲ್ಲಿ ಉತ್ಸವವನ್ನು ಪ್ರತಿ ವರ್ಷದಂತೆ ಈ ವರ್ಷವು ಅರ್ಥಪೂರ್ಣವಾಗಿ ಆಚರಿಸಲು ತಿರ್ಮಾನಿಸಲಾಗಿದೆ. 

ಈ ಸಲವೂ ಕೂಡ ನಮ್ಮ ಮುಖ್ಯಮಂತ್ರಿಗಳನ್ನು ಉತ್ಸವ ಉದ್ಘಾಟನಾ ದಿನದಂದು ಕರೆತಂದು ಕಿತ್ತೂರಿಗೆ ಹೊಸ ಯೋಜನೆಗಳನ್ನು ಘೋಷಿಸುವಂತೆ ಒತ್ತಾಯಿಸುತ್ತೇವೆ ಆಗಿನ ಶಾಸಕ ಸುರೇಶ ಮಾರಿಹಾಳ ಅವರು ರಾಣಿ ಚನ್ನಮ್ಮಾಜಿಯ ಸ್ಥಳವನ್ನು ಕಿತ್ತೂರು ತಾಲೂಕು ಮಾಡಲು ಒತ್ತಡ ಹಾಕಿದ್ದರಿಂದ ನಾನು ಸಿಎಂ ಆಗಿದ್ದಾಗ ಅಧಿಸೂಚನೆ ತಂದು ಕಿತ್ತೂರು ತಾಲೂಕನ್ನಾಗಿ ಮಾಡಿದೆ. ತಾಲೂಕಿಗೆ ಅವಶ್ಯವಿರುವ ಕಚೇರಿಗಳು ಸೇರಿದಂತೆ ಎಲ್ಲ ಸೌಲಭ್ಯಗಳನ್ನು ನೀಡಲು ಶ್ರಮವಹಿಸುವದಾಗಿ ಹೇಳಿದರು. 

ಜಿಲ್ಲೆಯಲ್ಲಿ ಪ್ರವಾಹದಿಂದ ಸಾಕಷ್ಟು ಹಾನಿ ಸಂಭವಿಸಿದೆ ಅದಕ್ಕೆ ಸರಕಾರದಿಂದ ತ್ವರಿತತಿಯಲ್ಲಿ ಅನುದಾನ ನೀಡಲಾಗುತ್ತಿದ್ದು, ಸಂತ್ರಸ್ತರಿಗೆ ಯಾವುದೆ ತೊಂದರೆಯಾಗದಂತೆ ಸ್ಪಂದಿಸುವ ಕೆಲಸ ಸರಕಾರ ಮಾಡುತ್ತಿದೆ. ಕಿತ್ತೂರು ಹತ್ತಿರದ 600 ಎಕರೆಯಲ್ಲಿ ನಿರ್ಮಾಣವಾಗಿರುವ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕೆಯನ್ನು ಅಭಿವೃದ್ಧಿ ಪಡಿಸಲು ಉದ್ಧಿಮೆದಾರರಿಗೆ ಎಲ್ಲ ಸೌಲಭ್ಯ ಕಲ್ಪಸಲಾಗುವದು. ಹಾವೇರಿಯಿಂದ ಬೆಳಗಾವಿವರೆಗೆ ಕೈಗಾರಿಕಾ ಕಾರಿಡಾರನ್ನು ಪ್ರಧಾನ ಮಂತ್ರಿಗಳು ಮಾಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ಕೈಗಾರಿಕಾ ಬೆಳೆಯಲಿದೆ.

ಶಾಸಕ ಮಹಾಂತೇಶ ದೊಡಗೌಡರ ಮಾತನಾಡಿ, ಪ್ರವಾದಿಂದ ಜನತೆ ನೋವು ಅನುಭವಿಸಿದ್ದಾರೆ. ಅದನ್ನು ಮರೆಸಲು ತಾಯಿ ಚನ್ನಮ್ಮಾಜಿ ಉತ್ಸವವನ್ನು ಆಚರಿಸಲಾಗುವದು. ಮೊದಲು ಉತ್ಸವಕ್ಕೆ ರೂ. 30 ಲಕ್ಷ ಬರುತ್ತಿತ್ತು ಆದರೆ ಈಗ ರೂ. 1 ಕೋಟಿ ಅನುದಾನ ಬರಲು ಕ್ರಮ ಕೈಗೊಳ್ಳಲಾಗಿದೆ.  ಸಿ.ಎಂ ಒಪ್ಪಿಗೆ ನೀಡಿದ್ದಾರೆ. ಕಿತ್ತೂರು ಉತ್ಸವಕ್ಕೆ ನಾಡಿನ ಜನತೆ ಆಗಮಿಸಿ ಉತ್ಸವ ಯಶಸ್ವಿಗೊಳಿಸಬೇಕು. ಕಿತ್ತೂರು ಕೋಟೆ ಅಭಿವೃದ್ಧಿಯಾಗದಿರುವದು ನೋವಿದೆ. ಕೋಟೆ ಅಭಿವೃದ್ಧಿ ಪಡಿಸಲು ಈಗಾಗಲೇ ಕಿತ್ತೂರು ಪ್ರಾಧಿಕಾರಕ್ಕೆ 200 ಕೋಟಿ ಅನುದಾನಕ್ಕೆ ಬೇಡಿಕೆ ಇಡಲಾಗಿದೆ ಎಂದು ಹೇಳಿದರು. ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳರಾಜಯೋಗೀಂದ್ರ ಸ್ವಾಮೀಜಿ ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿದರು. ಜಿಲ್ಲಾಧಿಕಾರಿ ಎಸ್.ಬಿ.ಬೊಮ್ಮನಹಳ್ಳಿ, ಎಸ್. ಪಿ. ಲಕ್ಷಣ ನಿಂಬರಗಿ, ಜಿಪಂ ಸದಸ್ಯರಾದ ಬಸವ್ವ ಕೊಲಕಾರ, ರಾಧಾ ಕಾದ್ರೋಳ್ಳಿ, ಕಿತ್ತೂರು ತಹಶೀಲ್ದಾರ ಪ್ರವೀಣ ಜೈನ್, ಸೇರಿದಂತೆ ಜಿಲ್ಲೆಯ ಅಧಿಕಾರಿಗಳು ಭಾವಹಿಸಿದರು. ಎ.ಸಿ ಶಿವಾನಂದ ಭಜಂತ್ರಿ ಸ್ವಾಗತಿಸಿದರು.