ಲೋಕದರ್ಶನ ವರದಿ
ಬೈಲಹೊಂಗಲ, 27: ಸದಸ್ಯರಿಗೆ ಕಿತ್ತೂರ ರಾಣಿ ಚನ್ನಮ್ಮ ಸಹಕಾರಿ ಮೇಲಿನ ವಿಶ್ವಾಸವೇ ಬೆಳವಣಿಗೆಗೆ ಕಾರಣ ಎಂದು ಸಂಸ್ಥಾಪಕ ಹಾಗೂ ನೂತನ ಅಧ್ಯಕ್ಷ ಡಾ: ವ್ಹಿ.ಎಸ್. ಸಾಧುನವರ ಹೇಳಿದರು.
ಅವರು ಪಟ್ಟಣದ ಕಿತ್ತೂರ ರಾಣಿ ಚನ್ನಮ್ಮ ಸಹಕಾರಿಯ ಆಡಳಿತ ಮಂಡಲಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮಾತನಾಡಿ, ಸಂಸ್ಥೆಯ ಮೇಲೆ ಆರಂಭದಿಂದಲೂ ಸದಸ್ಯರು ವಿಶ್ವಾಸವಿಟ್ಟು ಸಹಕಾರಿ ಆಡಳಿತ ಮಂಡಲಿಯನ್ನು ಅವಿರೋಧ ಆಯ್ಕೆ ಮಾಡಿ ನಮ್ಮ ಜವಾಬ್ದಾರಿ ಹೆಚ್ಚಿಸಿದ್ದು ಅವರ ಪ್ರೀತಿ ವಿಸ್ವಾಸಕ್ಕೆ ಚ್ಯುತಿ ಬರದಂತೆ ಕಾರ್ಯನಿರ್ವಹಿಸುತ್ತಿರುವೆೆವು.
ಈಗಾಗಲೆ ನಮ್ಮ ಅಧಿಕಾರಾವಧಿಯಲ್ಲಿ ಸಹಕಾರಿಯು 119 ಶಾಖೆಗಳು, ಸುಮಾರು 1000-ಜನ ಸಿಬ್ಬಂದಿ, ರೂ.550 ಕೋಟಿ ದುಡಿಯುವ ಬಂಡವಾಳ, ರೂ.520 ಕೋಟಿ ಠೇವಣಿಗಳು, ಸನ್ 2017-18 ರಲ್ಲಿ ಲಾಭ ರೂ. 1.38 ಕೋಟಿ ಹೊಂದಿರುವುದು 1.50 ಲಕ್ಷ ತೃಪ್ತ ಗ್ರಾಹಕರನ್ನು ಹೊಂದಿದ್ದು, ಶೇಕಡಾ 12 ರಷ್ಟು ಡಿವ್ಹಿಡೆಂಡ್ ನೀಡಲಾಗಿದೆ. ಸದಸ್ಯರ ಸಕಾಲಿಕ ಸಾಲ ಮರುಪಾವತಿ ಹಾಗೂ ಸಿಬ್ಬಂದಿಗಳ ಸತತ ಪರಿಶ್ರಮದಿಂದ ಇದು ಸಾದ್ಯವಾಗಿದೆ. ಬರುವ ದಿನಗಳಲ್ಲಿ ಸಹಕಾರಿಯಿಂದ ಇನ್ನೂ ನೂರಾರು ಶಾಖೆಗಳನ್ನು ರಾಜ್ಯಾಧ್ಯಂತ ತೆರೆದು ಸದಸ್ಯರಿಗೆ ಗುಣಮಟ್ಟದ ಸೇವೆ ನೀಡಿ ಸಹಕಾರಿಯ ಅಭಿವೃದ್ದಿಗೆ ಜೊತೆಗೆ ನಿರುದ್ಯೋಗಿ ಯುವಕ ಯುವತಿಯರ ದುಡಿಯುವ ಕೈಗಳಿಗೆ ಉದ್ಯೋಗ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುವದಾಗಿ ತಿಳಿಸಿದರು.
ಸಹಕಾರಿಯ ಉಪಾಧ್ಯಕ್ಷರಾಗಿ ಮಾಜಿ ಪುರಸಭಾಧ್ಯಕ್ಷ ಮಲ್ಲನಾಯ್ಕ ಪಾಟೀಲ ಅವಿರೋಧವಾಗಿ ಆಯ್ಕೆಯಾದರು
ಚುನಾವಣಾ ನಿವರ್ಾಹಣಾಧಿಕಾರಿ ಹಾಗೂ ಸಹಕಾರಿ ಸಂಘಗಳ ಸಹಾಯಕ ನಿಬಂಧಕರಾದ ಎನ್.ಎನ್.ಸರಾಫ, ಅಧಿಕಾರಿ ಎ ಕೆ ಮಾಸ್ತಿ ಹಾಗೂ ವಿಶೇಷಾದಿಕಾರಿ ಬಸವರಾಜ ಹೊಂಗಲ ಇವರು ಆಡಳಿತ ಮಂಡಳಿಗೆ ಅಧಿಕಾರ ಹಸ್ತಾಂತರಿಸಿದರು.
ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರು ವಿರುಪಾಕ್ಷಿ ಶಿವಲಿಂಗಪ್ಪಾ ಸಾಧುನವರ, ಮಲ್ಲನಾಯ್ಕ ಗೌಡಪ್ಪ ಪಾಟೀಲ, ಬಾಳಪ್ಪ ನಿಂಗಪ್ಪಾ ಚೌಡಣ್ಣವರ, ಬೊಮ್ಮನಾಯ್ಕ ಅಣ್ಣಾಸಾಹೇಬ ಪಾಟೀಲ, ಅರವಿಂದ ಲಕ್ಷ್ಮಣರಾವ ಕಲಕುಟಕರ, ಸುನೀಲ ಶಿವಗೌಡ ಪಾಟೀಲ, ಬಾಬು ಗಂಗಾಧರ ಹರಕುಣಿ, ಕಿರಣ ವಿರುಪಾಕ್ಷಿ ಸಾಧುನವರ, ಶಿವಪುತ್ರಪ್ಪ ಶಿವಲಿಂಗಪ್ಪ ತಟವಾಟಿ, ನಿಂಗನಗೌಡ ಮುದಿಗೌಡ ಪಾಟೀಲ, ಶಾಂತವ್ವ ಶಂಕರೆಪ್ಪ ಹೊಸಮನಿ. ವಿಶ್ವನಾಥ ವಿರುಪಾಕ್ಷಪ್ಪ ದೇಶನೂರ, ಶಶಿಧರ ಮಡಿವಾಳಪ್ಪ ಉಪ್ಪಿನ. ಸುಜಾತಾ ಪರಪ್ಪ ತಟವಾಟಿ, ಕಸ್ತೂರೆವ್ವಾ ವೀರಪ್ಪ ಕೊಪ್ಪದ. ರಾಜು ಮಲ್ಲಪ್ಪ ರಾಮಣ್ಣವರ ದುರಗಪ್ಪ ಬಾಳಪ್ಪ ಕಲಕುಟಕರ ಈ ಎಲ್ಲರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಎನ್.ಎನ್.ಸರಾಫ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಮ್.ವ್ಹಿ.ಸಾಲಿಮಠ ಇವರು ತಿಳಿಸಿದ್ದಾರೆ.