* ಒಳ ಚರಂಡಿಗೆ ಯತ್ನ,
* ಕೆಪಿಎಸ್ ಶಾಲೆಗೆ ಶೀಘ್ರ ಅಡಿಗಲ್ಲು,
* ವಿವಿಧ ಅಭಿವೃದ್ಧಿ ಕಾಮಗಾರಿಗಳ ಚಾಲನೆ,
ಕೆರೂರ 15: ಈಗಿನ ಪಟ್ಟಣ ಪಂಚಾಯತಿಯನ್ನು ಶೀಘ್ರದಲ್ಲೇ ಪುರಸಭೆಯನ್ನಾಗಿ ಬಡ್ತಿ ಹೊಂದಲಿದೆ ಈ ಬಗ್ಗೆ ನಗರಾಭಿವೃದ್ಧಿ, ಪೌರಾಡಳಿತ ಸಚಿವರು ತಾತ್ವಿಕ ಒಪ್ಪಿಗೆ ನೀಡಿದ್ದಾರೆ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.
ಅವರು ಪಟ್ಟಣ ಪಂಚಾಯತ ಆವರಣದಲ್ಲಿ ಶನಿವಾರ 15 ನೇ ಹಣಕಾಸು ಯೋಜನೆ ಅಡಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು ಪಟ್ಟಣ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು ಅಭಿವೃದ್ಧಿಗೆ ಸಾಕಷ್ಟು ಅನುದಾನದ ಕೊರತೆ ಕಾಣುತ್ತಿದೆ ಪ್ರಸಕ್ತ ಜನಸಂಖ್ಯೆ ಅನುಸಾರ ಪುರಸಭೆಯಾಗಿ ಬಡ್ತಿ ಹೊಂದಲು ಎಲ್ಲ ಅರ್ಹತೆ ಇದೆ. ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಕೆಲಸಗಳು ನಿಂತಿಲ್ಲ ನಮ್ಮ ಬಾದಾಮಿ ಕ್ಷೇತ್ರ ಅಭಿವೃದ್ಧಿ ಕೆಲಸಗಳು ಟಿಕಾರರಿಗೆ ದಿಟ್ಟ ಉತ್ತರ ನೀಡಲಿದ್ದು ಮುಂದಿನ ದಿನಗಳಲ್ಲೂ ಗ್ಯಾರಂಟಿ ನಿಲ್ಲಲ್ಲ ಮಹಿಳೆಯರು ಆತಂಕಪಡಬೇಡಿ ಎಂದು ಅಭಯ ನೀಡಿದರು.ಪಟ್ಟಣಕ್ಕೆ ಮಂಜೂರಾದ ನೂತನ ಕೆಪಿಎಸ್ ಶಾಲೆಗೆ ಹೊರವಲಯದ ಕೆಐಡಿಬಿ ಜಮೀನಿನಲ್ಲಿ ಸಚಿವರನ್ನು ಕರೆತಂದು ಶೀಘ್ರದಲ್ಲೆ ಅಡಿಗಲ್ಲು ಹಾಕಲಾಗುವದು ಆರೋಗ್ಯ, ಶಿಕ್ಷಣಕ್ಕೆ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.
ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಮೌಲಾನ ಆಜಾದ ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆ, ಹುಲ್ಮನಿ ಕೈಗಾರಿಕಾ ಪ್ರದೇಶ ಬಳಿ ನೂತನ ನಾಡ ಕಚೇರಿ ಕಾರ್ಯಾಲಯದ ಕಟ್ಟಡ, ಸರ್ಕಾರಿ ಪ್ರೌಢ ಶಾಲೆಯ ಕೊಠಡಿಗಳು ಹಾಗೂ ಚಿನಗುಂಡಿ ಪ್ಲಾಟನ ಎಲ್ ಪಿ ಎಸ್ ಪ್ರಾಥಮಿಕ ಶಾಲೆಯ ನೂತನ ಕೊಠಡಿಗಳ ಶಾಸಕ ಭೀಮಸೇನ ಚಿಮ್ಮನಕಟ್ಟಿ ಉದ್ಘಾಟಿಸಿದರು.
ಮುಖ್ಯಾಧಿಕಾರಿ ರಮೇಶ ಮಾಡಬಾಳ ಪ್ರಾಸ್ತಾವಿಕ ಮಾತನಾಡಿದರು, ಮುದ್ದುಸಂಗ ದೇವಾಂಗಮಠ ಸಾನಿಧ್ಯ ವಹಿಸಿದರು.ತಹಸಿಲ್ದಾರ್ ಮಧುರಾಜ, ಸಿಡಿಪಿಓ ಮುಲ್ಲಾ,ಪಪಂ ಅಧ್ಯಕ್ಷೆ ನಿರ್ಮಲಾ ಮದಿ, ಹಿರಿಯ ಕಾಂಗ್ರೆಸ್ ಮುಖಂಡರಾದ ಬಿ ಬಿ ಸೂಳಿಕೇರಿ, ಉಸ್ಮಾನಸಾಬ ಅತ್ತಾರ, ಎಂ ಜಿ ಕಿತ್ತಲಿ, ಸದಾನಂದ ಮದಿ, ಮೋದಿನಸಾಬ ಚಿಕ್ಕೂರ, ಪಪಂ ಸದಸ್ಯರಾದ ವಿಠಲಗೌಡ ಗೌಡರ, ಪರಶುರಾಮ ಮಲ್ಲಾಡದ, ಮಲ್ಲಪ್ಪ ಹಡಪದ, ಯಾಸಿನ ಖಾಜಿ, ಶಂಕರ ಕೆಂದೂಳಿ, ಅಶೋಕ ಹರಣಶಿಕಾರಿ, ಗೋಪಾಲ ಪೂಜಾರ, ಸುರೇಶ ಪೂಜೇರಿ, ಸತೀಶ ಕ್ಷತ್ರಿ, ಶ್ರೀಧರ ಕಾಂಬಳೆ, ದಿನೇಶ ಸೋಪದಾರ ಇದ್ದರು.