ತಿರುವನಂತಪುರಂ 20: ಶತಮಾನದ ಬೀಕರ ಮಳೆ, ಪ್ರವಾಹ ಹಾಗೂ ಭೂಕುಸಿತದಿಂದ ನಲುಗಿರುವ ದೇವರನಾಡು ಕೇರಳದಲ್ಲಿ ಮಳೆ ಆರ್ಭಟ ಕಡಿಮೆಯಾಗಿದ್ದು, ರಕ್ಷಣಾ ಮತ್ತು ಪರಿಹಾರ ಕಾಯರ್ಾಚರಣೆ ಚುರುಕುಗೊಂಡಿದೆ. ನೆರೆ ಪೀಡಿತ 14 ಜಿಲ್ಲೆಗಳಲ್ಲಿ ಸಾವಿರಾರು ಸಂತ್ರಸ್ತರು ರಕ್ಷಣೆ ಮತ್ತು ಪರಿಹಾರಕ್ಕಾಗಿ ಹಾತೊರೆಯುತ್ತಿದ್ದಾರೆ. ರಾಜ್ಯದಲ್ಲಿ 8 ಲಕ್ಷಕ್ಕೂ ಅಧಿಕ ಮಂದಿ ಬೀದಿಪಾಲಾಗಿದ್ದು ಅವರಿಗೆ ಪುನವರ್ಸತಿ ಕಲ್ಪಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಇದೇ ವೇಳೆ ಮಳೆಯಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದ್ದು, ಪರಿಸ್ಥಿತಿ ನಿಭಾಯಿಸಲು ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕೇರಳದಲ್ಲಿ ಶನಿವಾರ ಅಬ್ಬರಿಸಿ 25ಕ್ಕೂ ಹೆಚ್ಚು ಜನರನ್ನು ಆಪೋಶನ ತೆಗೆದುಕೊಂಡಿದ್ದ ವರುಣರಾಯ ಭಾನುವಾರ ತನ್ನ ಆರ್ಭಟವನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಿದ್ದಾನೆ. ಇನ್ನೂ ನಾಲ್ಕೈದು ದಿನ ಮಳೆಯ ರಭಸ ಕಡಿಮೆ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಳೆ ಪ್ರಕೋಪ ಕಡಿಮೆಯಾಗಿರುವುದರಿಂದ ರಕ್ಷಣಾ ಮತ್ತು ಪರಿಹಾರ ಕಾಯರ್ಾಚರಣೆ ಚುರುಕುಗೊಂಡಿದೆ. ಹೆಲಿಕಾಪ್ಟರ್ಗಳ ಮೂಲಕ ಸಂತ್ರಸ್ತರನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗಿದೆ.
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಾವಿರಾರು ಸಂತ್ರಸ್ತರು ಆತಂಕದಿಂದ ರಕ್ಷಣೆಗಾಗಿ ಎದುರು ನೋಡುತ್ತಿದ್ದಾರೆ.
ಕೇರಳದಲ್ಲಿ ಈಗಾಗಲೇ 1,500ಕ್ಕೂ ಹೆಚ್ಚು ನಿರಾಶ್ರಿತ ಶಿಬಿರಗಳು ಹಾಗೂ 3,750 ಮೆಡಿಕಲ್ ಕ್ಯಾಂಪ್ಗಳು ಕಾಯರ್ಾಚರಣೆ ನಡೆಸುತ್ತಿವೆ. ಅಲ್ಲದೇ ಸ್ಥಳೀಯ ಸಂಘ-ಸಂಸ್ಥೆಗಳು ಸಹ ನಿರಾಶ್ರಿತರಿಗೆ ಸಹಾಯ ಹಸ್ತ ಚಾಚಿವೆ. ಕನರ್ಾಟಕ ಸೇರಿದಂತೆ ನೆರೆಹೊರೆ ರಾಜ್ಯಗಳ ಸಮಾಜ ಸೇವಾ ಸಂಘಟನೆಗಳು ಅಗತ್ಯವಾದ ವಸ್ತುಗಳನ್ನು ಪೂರೈಸಿ ಮಾನವೀಯತೆ ಮೆರೆದಿವೆ.
ದೇಶದ ವಿವಿಧ ರಾಜ್ಯಗಳು ಹಾಗೂ ವಿದೇಶಗಳಿಂದಲೂ ಕೇರಳಕ್ಕೆ ಭಾರಿ ಪ್ರಮಾಣದ ಪರಿಹಾರ ಸಾಮಗ್ರಿಗಳು ಹಾಗೂ ಧನಸಹಾಯ ರವಾನೆಯಾಗುತ್ತಿವೆ.
ರಾಜ್ಯದ ಹಲವೆಡೆ ಆರಂಭಿಸಲಾಗಿರುವ ಪರಿಹಾರ ಕೇಂದ್ರಗಳಲ್ಲಿ ಈವರೆಗೆ ಏಳು ಲಕ್ಷಕ್ಕೂ ಹೆಚ್ಚು ಜನರು ಆಶ್ರಯ ಪಡೆದಿದ್ದಾರೆ. ಪರಿಹಾರ ಕೇಂದ್ರಗಳಿಗೆ ಸೇರ್ಪಡೆಯಾಗುತ್ತಿರುವ ಸಂತ್ರಸ್ತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.
ಎನ್ಡಿಆರ್ಎಫ್, ಐಟಿಬಿಪಿ, ಭಾರತೀಯ ಸೇನೆಯ ಮೂರು ಪಡೆಗಳು, ಕರಾವಳಿ ರಕ್ಷಣಾ ಪಡೆ ಹಾಗೂ ರಾಜ್ಯ ಅಗ್ನಿಶಾಮಕ ದಳ ಸಿಬ್ಬಂದಿ ರಾಜ್ಯದ ವಿವಿಧೆಡೆಗಳಿಂದ ಸಹಸ್ರಾರು ಪ್ರವಾಹ ಪೀಡಿತರನ್ನು ಸ್ಥಳಾಂತರಿಸಿದ್ದಾರೆ.
20 ಸಾವಿರ ಕೋಟಿ ರೂ. ನಷ್ಟ
ಶತಮಾನದ ಮಹಾಮಳೆಯಿಂದ ಸಂಭವಿಸಿದ ಪ್ರವಾಹದಿಂದ ದೇವರ ನಾಡು ಕೇರಳದಲ್ಲಿ ಬರೋಬ್ಬರಿ 15ರಿಂದ 20 ಸಾವಿರ ಕೋಟಿ ರೂಪಾಯಿಯಷ್ಟು ನಷ್ಟವಾಗಿದೆ ಎಂದು ವಾಣಿಜ್ಯೋದ್ಯಮಿಗಳ ಮಹಾಸಂಘ ಅಸೋಚಾಮ್ ತಿಳಿಸಿದೆ.
ಆಗಸ್ಟ್ 8ರಿಂದ 15ರವರೆಗೆ ಕೇರಳ ರಾಜ್ಯ ಧಾರಾಕಾರ ಮಳೆಗೆ ತತ್ತರಿಸಿ ಹೋಗಿತ್ತು. ರಾಜ್ಯದ ಸುಮಾರು 37 ಡ್ಯಾಂಗಳ ಗೇಟ್ ಗಳನ್ನು ತೆರೆಯಲಾಗಿತ್ತು. ಮಳೆ, ಪ್ರವಾಹದಿಂದ ಕೇರಳದಲ್ಲಿ 361 ಮಂದಿ ಸಾವನ್ನಪ್ಪಿದ್ದರು. ಸುಮಾರು 10 ಲಕ್ಷ ಮಂದಿ ನಿರಶ್ರಿತರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ.
ಅಸೋಚಾಮ್ ವರದಿ ಪ್ರಕಾರ, ಶತಮಾನ ಕಂಡು ಕೇಳರಿಯದ ಪ್ರವಾಹಕ್ಕೆ ಕೇರಳ ಅಪಾರ ಪ್ರಮಾಣದ ಹಾನಿಗೊಳಗಾಗಿದೆ. ಇದನ್ನು ಸರಿಪಡಿಸಲು ಕೆಲವು ತಿಂಗಳುಗಳ ಅಗತ್ಯವಿದೆ. ಅದರಲ್ಲೂ ಪ್ರವಾಸೋದ್ಯಮ, ಬೆಳೆಗಳು, ಬಂದರು ಪ್ರದೇಶದ ವ್ಯಾಪಾ ವಹಿವಾಟು ಲಕ್ಷಾಂತರ ಜನರ ಬದುಕಿಗೆ ಕೊಳ್ಳಿ ಇಟ್ಟಿದೆ.
ಕೇರಳ ಪ್ರಮುಖವಾಗಿ ಪ್ರವಾಸೋದ್ಯಮ, ಭತ್ತ, ಕಾಳುಮೆಣಸು, ಏಲಕ್ಕಿ, ಟೀ, ಕಾಫಿ, ಕೊಬ್ಬರಿ ಸೇರಿದಂತೆ ಕೃಷಿಯಿಂದ 8 ಲಕ್ಷ ಕೋಟಿ ತಲಾ ಆದಾಯವನ್ನು(ಜಿಎಸ್ ಟಿ-ಗ್ರಾಸ್ ಡೊಮೆಸ್ಟಿಕ್ ಪ್ರಾಡಕ್ಟ್) ಹೊಂದಿದೆ. ಅಲ್ಲದೇ ವಾಣಿಜ್ಯ-ವಹಿವಾಟಿನ ಜೀವನಾಡಿಯಾದ ಕೊಚ್ಚಿ ಬಂದರು ಸೇರಿದಂತೆ ರಾಜ್ಯದ ಬಹುತೇಕ ಪ್ರದೇಶಗಳು ಮಳೆಯಿಂದ ಅಪಾರ ನಷ್ಟ ಅನುಭವಿಸಿದೆ ಎಂದು ಅಸೋಚಾಮ್ ಹೇಳಿದೆ.
ಮಳೆ ಮತ್ತು ಪ್ರವಾಹದಿಂದ ಕೇರಳದಲ್ಲಿ 27 ಸಾವಿರ ಮನೆಗಳು ನಾಶವಾಗಿದೆ. ಸುಮಾರು 45 ಸಾವಿರ ಎಕರೆಯಷ್ಟು ಕೃಷಿಭೂಮಿ ಜಲಾವೃತಗೊಂಡು ಹಾಳಾಗಿದೆ. 134 ಸೇತುವೆ ಹಾಗೂ ಪಿಡಬ್ಯುಡಿಯ 16 ಸಾವಿರ ಕಿಲೋ ಮೀಟರ್ ರಸ್ತೆ ಹಾಗೂ ಸ್ಥಳೀಯ 82 ಸಾವಿರ ಕಿಲೋ ಮೀಟರ್ ರಸ್ತೆ ಸಂಪೂರ್ಣವಾಗಿ ನಾಶವಾಗಿ ಹೋಗಿದೆ ಎಂದು ವಿವರಿಸಿದೆ.
ಮೂಲಭೂತ ಸೌಕರ್ಯಗಳಾದ ರಸ್ತೆ, ವಿದ್ಯುತ್ ಕಂಬ, ಬ್ರಾಡ್ ಬ್ಯಾಂಡ್ ಕೇಬಲ್, ಸೇತುವೆಗಲ ಮರು ನಿಮರ್ಾಣಕ್ಕೆ ತುಂಬಾ ಸಮಯವೇ ತೆಗೆದುಕೊಳ್ಳಲಿದೆ. ಮನೆಗಳ ಪುನರ್ ನಿಮರ್ಾಣಕ್ಕೆ ತಿಂಗಳುಗಟ್ಟಲೇ ಬೇಕಾಗಲಿದೆ ಎಂದು ವರದಿ ತಿಳಿಸಿದೆ.
ಪ್ರವಾಸೋದ್ಯಮ ಮತ್ತು ಕ್ಯಾಶ್ ಕ್ರಾಪ್ ಕೇರಳಿಗರ ಜೀವನಾಡಿ. ಇವೆರಡೂ ಸಂಪೂರ್ಣವಾಗಿ ನಾಶವಾಗಿ ಬಿಟ್ಟಿದೆ. ಇದು ದೀರ್ಘಕಾಲದ ನಷ್ಟವಾಗಿದ್ದು, ಲಕ್ಷಾಂತರ ಜನರ ಬದುಕಿಗೆ ಹೊಡೆತ ನೀಡಿದೆ ಎಂದು ವಿವರಿಸಿದೆ.
ಬಾಕ್ಸ್
ಕೊಡಗು, ಕೇರಳ ಪ್ರವಾಹಕ್ಕೆ ಸ್ವಯಂಕೃತ ತಪ್ಪುಗಳೇ ಕಾರಣ; ಹೈ
ಬೆಂಗಳೂರು: ಕೊಡಗು ಹಾಗೂ ಕೇರಳ ಪ್ರವಾಹ ಪರಿಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿದ ಹೈಕೋರ್ಟ, ಪ್ರವಾಹದ ಆಪತ್ತು ಬಂದೊದಗಲು ಮನುಷ್ಯನ ತಪ್ಪುಗಳೇ ಕಾರಣ. ಇನ್ನಾದರೂ ನಾವು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಸೋಮವಾರ ಹೈಕೋಟರ್್ ಮುಖ್ಯನ್ಯಾಯಮೂತರ್ಿ ದಿನೇಶ್ ಮಹೇಶ್ವರಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ರಿಟ್ ಅಜರ್ಿಯ ವಿಚಾರಣೆ ವೇಳೆ ಮೌಖಿಕವಾಗಿ ಈ ಆತಂಕ ವ್ಯಕ್ತಪಡಿಸಿದ ಸಿಜೆಐ, ಪ್ರಕೃತಿ ವಿರುದ್ಧ ಮಾನವ ಹೋದಾಗ ಈ ರೀತಿ ಆಗುತ್ತೆ. ಇದೇನು ಏಕಾಏಕಿ ಒಂದೇ ದಿನದಲ್ಲಿ ಸಂಭವಿಸಿದ್ದಲ್ಲ. ಭೂಕಂಪ ಆಗಿದ್ದರೆ ಒಂದೇ ದಿನದಲ್ಲಿ ಸಂಭವಿಸಿದ್ದು ಅಂತ ಹೇಳಬಹುದು. ಆದರೆ ಇದು ಮಾನವನ ಸ್ವಯಂಕೃತ ಅಪರಾಧಗಳಿಂದ ಆದ ತಪ್ಪುಗಳಿಂದ ಸಂಭವಿಸಿದ್ದು ಎಂದು ಹೇಳಿದರು. ಇನ್ನಾದರು ನಾವು ಎಚ್ಚೆತ್ತುಕೊಳ್ಳಬೇಕು. ಮನುಷ್ಯನಿಂದ ಪ್ರಕೃತಿಗೆ ಆಪತ್ತು ಬಂದೊದಗಿದೆ. ಎಲ್ಲೋ ನಾವೆ ಇದಕ್ಕೆಲ್ಲಾ ಕಾರಣ ಅಂತ ಅನ್ನಿಸುತ್ತಿದೆ ಎಂದು ತಿಳಿಸಿದರು.
ಒಂದೆಡೆ ಕೊಚ್ಚಿ ಹೋದ ಬದುಕು, ಮತ್ತೊಂದೆಡೆ ಕಳ್ಳರ ಕಾಟ
ಕೊಡಗು/ಮಡಿಕೇರಿ: ಕಂಡು ಕೇಳರಿಯದ ರೀತಿಯಲ್ಲಿ ಕೊಡಗು ಮಹಾಮಳೆಗೆ ತತ್ತರಿಸಿ ಹೋಗಿದ್ದರೆ, ಮತ್ತೊಂದೆಡೆ ನೆರೆ ಪೀಡಿತ ಪ್ರದೇಶಗಳಲ್ಲಿ ಕಳ್ಳರ ಹಾವಳಿಗೆ ಜನ ಬೆಚ್ಚಿ ಬಿದ್ದಿದ್ದಾರೆ. ಮಡಿಕೇರಿಯ ಜೋಡುಪಾಲದ ಸುತ್ತಮುತ್ತಲಿನಲ್ಲಿ ಸುಮಾರು 30 ಮನೆಗಳಿಗೆ ಕನ್ನ ಹಾಕಲಾಗಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ. ನೆರೆ ಪೀಡಿತ ಪ್ರದೇಶಗಳಲ್ಲಿ ಗುಂಪು, ಗುಂಪಾಗಿ ಬರುವ ತಂಡ ಮನೆಯ ಹೆಂಚುಗಳನ್ನು ಇಳಿಸಿ ಚಿನ್ನಾಭರಣ, ಹಣ, ವಾಹನಗಳನ್ನು ಕದ್ದೊಯ್ಯುತ್ತಿದ್ದಾರೆ ಎಂದು ವರದಿ ವಿವರಿಸಿದೆ. ಮಳೆಯ ಅಬ್ಬರದಿಂದ ಜೀವ ಉಳಿಸಿಕೊಳ್ಳಲು ಜನರು ಪುನರ್ವಸತಿ ಕೇಂದ್ರಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಈ ಪರಿಸ್ಥಿತಿಯನ್ನೇ ಬಳಸಿಕೊಂಡ ಖದೀಮರು ಊರಿನೊಳಗೆ ಹೋಗಿ ಕಳ್ಳತನಕ್ಕೆ ಇಳಿದಿದ್ದಾರೆ. ಈ ಬಗ್ಗೆ ಅಲಟರ್್ ಆಗಿರುವ ಪೊಲೀಸ್ ಇಲಾಖೆ ಇದೀಗ ದಕ್ಷಿಣ ಕನ್ನಡ, ಕೊಡಗು ಗಡಿಯಲ್ಲಿ ಸಂಪಾಜೆ ಬಳಿ ಚೆಕ್ ಪೋಸ್ಟ್ ಗಳನ್ನು ಹಾಕಿ ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲದೇ ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಲು ಸಾರ್ವಜನಿಕರಿಗೆ ನಿಷೇಧ ಹೇರಲಾಗಿದೆ.
'ಆತಂಕ ಬೇಡ, ನಿಮ್ಮೊಂದಿಗೆ ಸಕರ್ಾರವಿದೆ'
ಬೆಂಗಳೂರು: ಕೊಡಗು ಜಿಲ್ಲೆಯಲ್ಲಿ ಹಲವು ವರ್ಷಗಳ ನಂತರ ದೊಡ್ಡ ಅನಾಹುತ ಸಂಭವಿಸಿದೆ.ಮಳೆ, ಪ್ರವಾಹದಿಂದ 7 ಮಂದಿ ಸಾವನ್ನಪ್ಪಿದ್ದಾರೆ. 845 ಮನೆಗಳು ಸಂಪೂರ್ಣ ನಾಶವಾಗಿದ್ದು, 58 ಸೇತುವೆಗಳು ಕೊಚ್ಚಿ ಹೋಗಿದ್ದು, 123 ಕಿಲೋ ಮೀಟರ್ ರಸ್ತೆ ಹಾಳಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಸೋಮವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೂಲಭೂತ ಸೌಕರ್ಯಕ್ಕಾಗಿ ರಾಜ್ಯ ಸಕರ್ಾರ ನೂರು ಕೋಟಿ ಬಿಡುಗಡೆ ಮಾಡಿದೆ. ಕೊಡಗಿನಲ್ಲಿ ಪ್ರಾಕೃತಿಕ ವಿಕೋಪದ ನಂತರ 2 ದಿನ ಭೇಟಿ ನೀಡಿದ್ದೆ ಎಂದರು. ಕೊಡಗಿನ ಪ್ರವಾಹ, ಮಳೆ ಪರಿಸ್ಥಿತಿಗೆ ರಾಜ್ಯ ಸಕರ್ಾರ ಹಾಗೂ ಅಧಿಕಾರಿಗಳು ತಕ್ಷಣ ಸ್ಪಂದಿಸಿದ್ದಾರೆ. 24 ಗಂಟೆಯೂ ರಕ್ಷಣಾ ಕಾಯರ್ಾಚರಣೆ ನಡೆಯುತ್ತಿದೆ. ಯಾವುದಕ್ಕೂ ಜನರು ಆತಂಕ ಪಡುವುದು ಬೇಡ, ನಿಮ್ಮೊಂದಿಗೆ ಸಕರ್ಾರವಿದೆ ಎಂದು ಭರವಸೆ ನೀಡಿದರು. 773 ಮನೆಗಳು ಭಾಗಶವಾಗಿ ಹಾನಿಗೊಂಡಿದೆ. 128 ಸಕರ್ಾರಿ ಕಟ್ಟಡಗಳಿಗೆ ಹಾನಿಯಾಗಿದೆ. 3,800 ವಿದ್ಯುತ್ ಕಂಬಗಳು ಹಾನಿಯಾಗಿ ಮುರಿದು ಹೋಗಿದೆ ಎಂದು ವಿವರ ನೀಡಿದರು. ವಾಯುಪಡೆಯಿಂದ ವಿಶೇಷ ವಿಮಾನ ಕೂಡಾ ಬೀಡುಬಿಟ್ಟಿದೆ. ಸಂತ್ರಸ್ತರಿಗೆ ನರೇಗಾ ಯೋಜನೆಯಡಿ ಕೆಲಸ ಕೊಡಿಸಲಾಗುವುದು ಎಂದರು. ನೆರೆ ಸಂತ್ರಸ್ತರು ಪಾತ್ರೆ ಖರೀದಿಸಲು ಸಕರ್ಾರದಿಂದಲೇ ಹಣ ನೀಡಲಾಗುವುದು ಎಂದು ತಿಳಿಸಿದರು.