ಕವಿಚಕ್ರವರ್ತಿ ರನ್ನಪರ್ವ ಬಿತ್ತಿಪತ್ರ ಬಿಡುಗಡೆ: ಸುರೇಶ ರಾಜಮಾನೆ ವಿಭಿನ್ನ ಪ್ರಚಾರ
ಮುಧೋಳ 14: ಅತ್ತ ರನ್ನಬೆಳಗಲಿಯಲ್ಲಿ ವಿದ್ಯಕ್ತವಾಗಿ ರನ್ನರಥಕ್ಕೆ ಚಾಲನೆ ದೊರೆಯುತ್ತಿರುವ ಸುಸಮಯದಲ್ಲೇ ಇತ್ತ ಹಲಕಿ ಗ್ರಾಮದಲ್ಲಿ ಚಿಂಚಖಂಡಿ ಕೆ.ಡಿ ಕ್ಲಸ್ಟರ್ ಮಟ್ಟದ ಎಪ್ ಎಲ್.ಎನ್ ಕಲಿಕಾ ಹಬ್ಬದ ಕಾರ್ಯಕ್ರಮದ ಆಕರ್ಷಣೆಯಾಗಿ ರನ್ನ ವೈಭವದ ಜಾಗೃತಿ ಮತ್ತು ಪ್ರಚಾರಕ್ಕಾಗಿ ಮೆಟಗುಡ್ಡ ಗ್ರಾಮದ ಡೋಣಿಯವರ ತೋಟದ ಶಾಲೆಯ ಮಕ್ಕಳು ಮತ್ತು ಶಿಕ್ಷಕರಾದ ಸುರೇಶ ಎಲ್.ರಾಜಮಾನೆ, ಆರ್.ಎಮ್.ಸುತಾರ್ ತಯಾರಿಸಿದ “ಕವಿಚಕ್ರವರ್ತಿ ರನ್ನ ಪರ್ವ” ಎಂಬ ಬಿತ್ತಿಪತ್ರ ಎಲ್ಲರ ಗಮನ ಸೆಳೆಯಿತು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಹಾಗೂ ಚಿಚಖಂಡಿ ಕೆ.ಡಿ ಕ್ಲಸ್ಟರ್‌ನ ಸಮೂಹ ಸಂಪನ್ಮೂಲ ವ್ಯಕ್ತಿ ಆನಂದ ಪೂಜಾರಿ ಅವರು ಭಿತ್ತಿಪತ್ರ ಬಿಡುಗಡೆಗೊಳಿಸಿ ರನ್ನ ವೈಭವ ನಮ್ಮ ನಾಡಿನ ನಮ್ಮ ನೆಲದ ಅಸ್ಮಿತೆಯಾಗಿರುವುದರಿಂದ ಅದರ ಪ್ರಚಾರ ಕಾರ್ಯ ತುರ್ತಾಗಿ ನಡೆಯುತ್ತಿದೆ. ಅದಕ್ಕೆ ಪೂರಕವಾಗಿ ಸುರೇಶ ರಾಜಮಾನೆಯವರು ತಯಾರಿಸಿದ “ಕವಿಚಕ್ರವರ್ತಿ ರನ್ನಪರ್ವ” ಎಂಬ ಭಿತ್ತಿಪತ್ರ ಕವಿಯ ಕುರಿತು ಕವಿಯ ಸಾಹಿತ್ಯದ ಕುರಿತು ಮಾಹಿತಿಯನ್ನು ಹೊಂದಿದ್ದು ಕವಿರನ್ನನ ಕುರಿತು ರನ್ನವೈಭದ ಕುರಿತು ವಿಭಿನ್ನವಾಗಿ ಗಮನಸೆಳೆದ ಸುರೇಶ ರಾಜಮಾನೆಯವರಿಗೆ ವಿಶೇಷವಾಗಿ ಅಭಿನಂದಿಸಿದರು. ಕಲಿಕಾ ಹಬ್ಬವು ಮುಗಿಯುವವರೆಗೂ ಈ ಭಿತ್ತಿಪತ್ರದ ಪ್ರದರ್ಶನ ಇರುತ್ತದೆ ಎಲ್ಲರೂ ವಿಕ್ಷೀಸಬೇಕೆಂದು ಮನವಿ ಮಾಡಿದರು.
ಡೋಣಿತೋಟದ ಶಾಲೆಯ ಮಕ್ಕಳು ವಿಕ್ಷಿಸಲು ಬಂದವರಿಗೆಲ್ಲ ಕವಿ ರನ್ನನ ಕುರಿತು ಪರಿಚಯ ಮಾಡಿದರು. ಬಿತ್ತಿಪತ್ರ ಪ್ರದರ್ಶನದ ಮಾಹಿತಿ ನೀಡಲು ಶಾಲೆಯ ವಿದ್ಯಾರ್ಥಿಗಳಾದ ಚೇತನಾ, ಸೌಜನ್ಯ, ಶಾಹಿನಾ, ಅಪ್ಸನಾ, ಬಾಳಪ್ಪ,ತೌಸಿಪ್,ಮಹಾಂತೇಶ, ರೂಪಾ ಇವರೆಲ್ಲ ನಾಹಿತಿ ನೀಡಿದರು. ಉಪಸ್ಥಿತರಿದ್ದ ಸುರೇಶ ರಾಜಮಾನೆಯವರು ರನ್ನ ನಮ್ಮ ನೆಲದ ಹೆಮ್ಮೆ, ನಮ್ಮ ನೆಲದ ಗರ್ವ, ನಮ್ಮ ನೆಲದ ಗಟ್ಟಿ ಧ್ವನಿ ಗಂಡು ಕವಿ ಶಕ್ತಿ ಕವಿ ಎಂದೆ ಹೆಸರಾಗಿರುವ ಮಹಾಕವಿ ರನ್ನನ ನೆಲದಲ್ಲಿ ನಾವಿರೊದು ನಮಗೆಲ್ಲರಿಗೂ ಹೆಮ್ಮೆಯ ವಿಷಯವೇ ಹೌದು. ರನ್ನ ವೈಭವಕ್ಕೆ ಬನ್ನಿ ರನ್ನನಿಗೆ ಜೈ ಎನ್ನಿ ಇದೆ ಪೆಬ್ರುವರಿ 22,23,24 ರಂದು ರನ್ನಬೆಳಗಲಿ ಮತ್ತು ಮುಧೋಳದಲ್ಲಿ ನಡೆಯುವ ರನ್ನವೈಭವಕ್ಕೆ ಬನ್ನಿ ಎಂದು ಬಿನ್ನವಿಸಿಕೊಂಡರು.
ಶಿಕ್ಷಕರುಗಳಾದ ರಸೂಲ್ ಹೊಸಕೋಟಿ, ಸಂಜೀವ ಕಂಬಾರ್ , ಮುತ್ತು ತುಂಗಳ, ದೊಡಮನಿ,ಪೋತರೆಡ್ಡಿ, ಶಿವಾನಂದ ಉಪ್ಪಿನ್ ಬಿ.ಆರಿ್ಪಗಳು, ಜ್ಯೋತಿ ಶೇಡಬಾ, ಎಲ್ಲರೂ ಈ ಸುಮಧುರ ಗಳಿಗೆಗೆ ಸಾಕ್ಷಿಯಾದರು.