ಬೆಳಗಾವಿ ವಿಭಾಗ ಮಟ್ಟದ ಕೆಜೆವಿಎಸ್ ಸಮ್ಮೇಳನ 69 ಮಾಜಿ ಸೈನಿಕರಿಗೆ ಪ್ರಶಸ್ತಿ ಪ್ರದಾನ
ಮುಧೋಳ 29: ನಾವು ಸ್ವತಂತ್ರ್ಯವಾಗಿ ಈ ದೇಶದಲ್ಲಿ ಓಡಾಡಿಕೊಂಡು ಇದ್ದೇವೆ ಎಂದರೆ ಅದಕ್ಕೆ ಮೂಲ ಕಾರಣ ನಮ್ಮ ಸೈನಿಕರು. ಸೈನಿಕರ ಆರೋಗ್ಯ ಹಾಗೂ ಅವರ ಕುಶಲೋಪರಿ ವಿಚಾರಿಸುವುದು ಎಲ್ಲರ ಕರ್ತವ್ಯವಾಗಿದೆ’ ಎಂದು ಮನೋರೋಗ ತಜ್ಞ ಡಾ.ಸಿ. ಆರ್.ಚಂದ್ರಶೇಖರ ಹೇಳಿದರು.
ನಗರದ ಶಿರಡಿ ಸಾಯಿ ಶಿಕ್ಷಣ ಸಂಸ್ಥೆಯ ಸಾಯಿನಿಕೇತನ ಸಿ.ಬಿ.ಎಸ್.ಇ ಶಾಲಾ ಆವರಣದಲ್ಲಿ ಕೇಂದ್ರ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಜಿಲ್ಲಾ ಘಟಕ ಹಾಗೂ ಮುಧೋಳ ತಾಲ್ಲೂಕು ಘಟಕದ ವತಿಯಿಂದ ಬೆಳಗಾವಿ ವಿಭಾಗ ಕೆಜೆವಿಎಸ್ ಸಮ್ಮೇಳನ ಹಾಗೂ 69ನೆಯ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ 69 ಮಾಜಿ ಯೋಧರಿಗೆ ಸೈನಿಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಶಿರಡಿ ಸಾಯಿ ಶಿಕ್ಷಣ ಸಂಸ್ಥೆಯ ಕಾರ್ಯಾಧ್ಯಕ್ಷ ರಾಜೇಶ ವಾಲಿ ಮಾತನಾಡಿ, ‘ಪ್ರತಿಯೊಬ್ಬ ಮನುಷ್ಯನಿಗೂ ವಿಜ್ಞಾನ ಬೇಕೇ ಬೇಕು. ಎಲ್ಲ ರಂಗದಲ್ಲಿಯೂ ವಿಜ್ಞಾನ ಕಾಣಬಹುದು. ಸೈನಿಕರು ದೇಶ ಕಾಯಲು ಮಾತ್ರವಲ್ಲಿ ನೆರೆ,ಬರದ ಸಮಯದಲ್ಲಿ, ಕಷ್ಟಕಾಲದಲ್ಲಿ ಆಪತ್ಬಾಂಧವರಾಗುತ್ತಾರೆ’ ಎಂದು ಹೇಳಿದರು. ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಕಾರ್ಯದರ್ಶಿ ಇ.ಬಸವರಾಜು ಸಮಿತಿಯ ಗೌರವಾಧ್ಯಕ್ಷ ಡಾ.ಶಿವಾನಂದ ಕುಬಸದ, ನಿವೃತ್ ಮೇಜರ್ ಅಪ್ಪಾಸಾಬ ನಿಂಬಾಳಕರ, ಹಿರಿಯ ವಕೀಲ ಪ್ರಕಾಶ ವಸ್ತ್ರದ ಮಾತನಾಡಿದರು.
ಪಶುಸಂಗೋಪನಾ ಇಲಾಖೆಯ ನಿವರತ್ ಉಪ ನಿರ್ದೇಶಕ ಡಾ.ಆರ್. ಎ. ಕುಲಕರ್ಣಿ, ವಿಜಯಪುರ ಜಿಲ್ಲಾ ಅಧ್ಯಕ್ಣ ಜಿ. ಎಸ್. ಕಾಂಬಳೆ, ಜಿಲ್ಲಾಧ್ಯಕ್ಷ ಸಿದ್ದಣ್ಣ ಬಾಡಗಿ, ತಾಲ್ಲೂಕಾ ಅಧ್ಯಕ್ಷ ವೆಂಕಟೇಶ ಗುಡೆಪ್ಪನವರ, ಮುಖ್ಯ ಶಿಕ್ಷಕ ವೆಂಕಟೇಶ ಪಾಟೀಲ್, ಜಿಲ್ಲಾ ಕಾರ್ಯದರ್ಶಿ ಸಂಜಯ ನಡುವಿನಮನಿ, ಉಮಾ ಕಾತರಕಿ.ಚಂದ್ರಶೇಖರ ನಾಗವಂದ, ಮಾಜಿ ಸೈನಿಕರ ಸಂಘದ ಅದ್ಯಕ್ಷ ಶ್ರೀಶೈಲ್ ಪಸಾರ , ಶೇಷಪ್ಪ ಪೋತರಡ್ಡಿ, ಜಿ.ಕೆ. ಹುಸೇನಬಾಯಿ, ಗೀತಾ ಕಲೂತಿ, ಅಶ್ವಿನಿ ಅಂಗಡಿ, ಆರ್.ಐ,ಹಣಗಿ, ಸೇರಿದಂತೆ ಇತರರು ಇದ್ದರು. 69 ಮಾಜಿ ಯೋಧರಿಗೆ ಸೈನಿಕ ರತ್ನ ಪ್ರಶಸ್ತಿ ಹಾಗೂ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಯಿತು.