ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮಾಚರಣೆ

ಕಲಬುರಗಿ 26: ದಿ. 26ರಂದು ಗುಲಬರ್ಗಾ ವಿಶ್ವವಿದ್ಯಾಲಯದ ಕಲಬುರಗಿ ಕನ್ನಡ ಅಧ್ಯಯನ ಸಂಸ್ಥೆಯ ಹರಿಹರ ಸಭಾಂಗಣದಲ್ಲಿ ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮಾಚರಣೆ ಸರಣಿ ಉಪನ್ಯಾಸ ಮಾಲೆ-8 ನಾಡೋಜ ಡಾ. ಕಮಲಾ ಹಂಪನಾ ಅವರ ನುಡಿನಮನ ಕಾರ್ಯಕ್ರಮ ಜರುಗಿತು. 

ಕಥಾ ಸಾಹಿತ್ಯವು ಪ್ರಾಚೀನ ಕಾಲದಿಂದಲೂ ಬೆಳೆದುಕೊಂಡು ಬಂದ ಒಂದು ಪರಂಪರೆಯಾಗಿದೆ ಮೂಲಬೌದ್ಧ, ಜೈನ ಧರ್ಮ ಪ್ರಚಾರಕ ಕಥೆಗಳಾಗಿದ್ದವು. ಕಥೆಗಳು ಧರ್ಮ ಪ್ರಚಾರದೊಂದಿಗೆ ತನ್ನ ಸಮುದಾಯದಲ್ಲಿನ ಶೋಷಣೆಗಳ ನೆಲೆಯನ್ನು ಎತ್ತಿ ಹಿಡಿತಿದ್ದವು. ಹೀಗೆ ಕಥೆಗಳ ಪರಂಪರೆಯನ್ನು ಬೆಳೆದುಕೊಂಡು ಬಂದವು. ವಿದೇಶಿಯರು ಭಾರತಕ್ಕೆ ಬಂದು ಇಲ್ಲಿನ ಕನ್ನಡ ಅಕ್ಷರಗಳನ್ನು ಕಲಿತುಕೊಂಡು ಸಂಪಾದನೆ ಸಂಗ್ರಹ ಮಾಡಿ ಓದುಗರ ಮುಂದಿಡುವ ಪ್ರಯತ್ನ ಮಾಡಿದ್ದಾರೆ. ಇವರು ಮಾಡಿದ ಸಂಶೋಧನೆ ಪ್ರಭಾವದಿಂದಾಗಿ ಕನ್ನಡ ಕಥಾ ಪರಂಪರೆ ವಿಸ್ತಾರಗೊಂಡಿತು. ಹೀಗಾಗಿ ಅನೇಕ ಜನ ಕಥೆಗಾರರು ಹೊಸ ಹೊಸ ನೆಲೆಯಲ್ಲಿ ಕಥೆಗಳನ್ನು ಬರೆಯಲು ಪ್ರಾರಂಭಿಸಿದರು. ಇದರಲ್ಲಿ ಮೊದಲಿಗೆ ನಾವು ಪಂಜೆಯವರ  ನನ್ನ ಚಿಕ್ಕ ತಾಯಿ, ನನ್ನ ಚಿಕ್ಕ ತಂದೆ ಎಂಬ ಸಣ್ಣ ಕಥೆಯನ್ನು ಪ್ರಕಟಿಸಿದರು. ಇವರ ತರುವಾಯ ಕನ್ನಡದಲ್ಲಿ ಸಣ್ಣ ಕಥೆಗಳ ಯುಗವೇ ಪ್ರಾರಂಭವಾಯಿತು. ಆಗ ಮಾಸ್ತಿಯವರು ಕನ್ನಡದ ಸಣ್ಣ ಕಥೆಗಳ ಜನಕರಾದರು ಮುಂದೆ ಬಂದ ಅನೇಕ ಕಥೆಗಾರರು ಸಣ್ಣ ಕಥೆಗಳು ಬರೆಯಲು ಮುಂದಾದರು. ನವ್ಯ ಸಾಹಿತ್ಯ ಕಾಲಘಟ್ಟಕ್ಕೆ ಸಣ್ಣ ಕಥೆಗಳೇ ಪ್ರಚೂರ ಸ್ಥಿತಿಯಲ್ಲಿದ್ದವು. ಇವುಗಳ ಭಾಷೆಯೊಂದಿಗೆ ವಸ್ತು ಬದಲಾಗುತ್ತಾ ಸಾಗಿತು. ಆಗ ನವ್ಯ ಕಾಲಘಟ್ಟದ ಕತೆಗಾರರು ಸುತ್ತಮುತ್ತಲಿನ ಶೋಷಣೆಗಳು ಕಂದಾಚಾರ ಭೂಮಿ ವಿಷಯಗಳೇ ಮೂಲ ವಸ್ತುವಾಗಿಸಿಕೊಂಡು ಕಥೆಗಳನ್ನು ರಚನೆಗೊಂಡಿರುವ ಪರಂಪರೆಯನ್ನು ನೋಡಬಹುದು. ದಲಿತರ ಬದುಕಿನ ಅಂತರಾಳದ ಕಥೆಗಳನ್ನು ಕಥೆಯ ಬದುಕಾಗಿಸಿಕೊಂಡು ಬರೆಯುತ್ತಿದ್ದರು.  ಕುವೆಂಪು ಅವರ ಕಾದಂಬರಿಗಳಲ್ಲಿನ ಅಸ್ಪೃಶ್ಯ ಚಿಂತನೆ ಮುಂದೆ ದೇವನೂರು ಮಾದೇವವರ ಕಥೆಗಳಲ್ಲಿ ದಲಿತರ ಬದುಕನ್ನು ಪ್ರತಿನಿಧಿಸುವ ಕಥೆಗಳಾಗಿವೆ. ಇದರಲ್ಲಿ ಡಾಂಬರ್ ಬಂದದ್ದು ಅಮಾಸ ಮುಂತಾದ ಕಥೆಗಳು ದಲಿತರ ಬದುಕನ್ನು ಕೇಂದ್ರವಾಗಿಸಿಕೊಂಡು ಹುಟ್ಟಿಕೊಂಡಿವೆ. ದೇವನೂರ ಕಥೆಗಳು ಎಲ್ಲಿ ನಿಲ್ಲುತ್ತವೆಯೊ ಅಲಿಂದ ಪೋತೆಯವರ ಕಥೆಗಳು ಪ್ರಾರಂಭವಾಗುತ್ತವೆ. ಡಾ. ಎಚ್‌.ಟಿ ಪೋತೆಯವರ ಕಥೆಗಳು ಕುಟುಂಬ, ಸಮಾಜ, ಅಸ್ಯೃಶ್ಯರ ಬದುಕಿನ ನೈಜ ಚಿತ್ರಣವನ್ನು ಕೇಂದ್ರವಾಗಿಸಿಕೊಂಡುದಲ್ಲಿದೆ ಅಂಬೇಡ್ಕರ್‌ವಾದ ದಟ್ಟವಾಗಿ ಕಾಣುತ್ತದೆ. ಇದು ಕನ್ನಡ ಸಾಹಿತ್ಯಕ್ಕೆ ದಕ್ಕಿದ ಪ್ರಥಮ ಚಿಂತನೆ ಆಗಿದ್ದು. ಇವರ ಕಥೆಗಳು ಕನ್ನಡ ನಾಡಿನ ಉದ್ದಗಲಕ್ಕೂ ಓದಬೇಕಾದ ಮತ್ತು  ಮಾದರಿಯ ಸಂಶೋಧನೆಗಳು ಮಾಡಬೇಕಾದ ಕಥೆಗಳಾಗಿವೆ ಎಂದು ಡಾ. ಸೋಮಣ್ಣ ಹೊಂಬಳ್ಳಿಯವರು ಹೇಳಿದ್ದಾರೆ.  

ಇವತ್ತಿನ ಯುವ ಪೀಳಿಗೆಯು ಕಥೆಗಳನ್ನು ಹೆಚ್ಚೆಚ್ಚು ಓದಬೇಕಾಗಿದೆ ಸಮಾಜದಲ್ಲಿ ನಡೆಯುತ್ತಿರುವ ಪ್ರಚಲಿತ ವಿದ್ಯಮಾನಗಳನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ವಿದ್ಯಾರ್ಥಿಗಳು ಸಾಹಿತ್ಯ ವಿದ್ಯಾರ್ಥಿಯಾಗಿರದೇ, ಸಾಹಿತ್ಯತರ ವಿಷಯಗಳನ್ನು ಕುರಿತು ಓದುವುದು ಮತ್ತು ವಿದ್ಯಾರ್ಥಿ ನೆಲೆಯಿಂದ ಬದ್ಧತೆಯನ್ನು ರೂಡಿಸಿಕೊಂಡು ಒಳ್ಳೆಯ ಬದುಕು ಕಟ್ಟಿಕೊಳ್ಳಬೇಕೆಂದು ಅಧ್ಯಕ್ಷೆಯ ನುಡಿಗಳಲ್ಲಿ ಪ್ರೊ ಎಚ್ ಪೋತೆಯವರು ನುಡಿದರು ಇದಲ್ಲದೆ ಕಮಲಾ ಹಂಪನಾ ಅವರ ಸಾಹಿತ್ಯ ಸಾಧನೆಯನ್ನು ಮೆಲುಕು ಹಾಕಿದರು. ಡಾ ಸುಲಾಬಾಯಿ ಕಾಳಮಂದರಗಿ ಸ್ವಾಗತಿಸಿದರು ಡಾ ಶಿವಶರಣಪ್ಪ ಪಿ.ಎಚ್‌. ಕೋಡ್ಲಿಯವರು ಅಥಿತಿ ಪರಿಚಯ ಮಾಡಿದರು, ಡಾ ಶಿವಗಂಗಾ ಬಿಲಗುಂದಿ ವಂದಿಸಿದರು ಡಾ ಸುನೀಲ ಜಾಬಾದಿಯವರು ನಿರೂಪಿಸಿದರು ಡಾ ಶ್ರೀಶೈಲ ನಾಗರಾಳ್, ಡಾ ಸೂರ್ಯಕಾಂತ್ ಸುಜ್ಯಾತ, ಡಾ ಸಂತೋಷ ಕಂಬಾರ, ಡಾ ಎಂ ಬಿ ಕಟ್ಟಿ, ಡಾ. ಹಣಮಂತ ಮೇಲಕೇರಿ, ಡಾ ಪ್ರಕಾಶ ಸಂಗಮ, ಡಾ ಗವಿಸಿದ್ದಪ್ಪ ಪಾಟೀಲ್ ಉಪಸ್ಥಿತರಿದ್ದರು.