ಮುಖ್ಯೋಪಾಧ್ಯಾಯ ಎ ಎನ್ ತೋಟಗಿಗೆ ಬೀಳ್ಕೊಡುಗೆ

ಗೋಕಾಕ 29: ತಾಲೂಕಿನ ಮಮದಾಪೂರ ಗ್ರಾಮದ ಚಿಂತಾಮಣಿ ಪಾವಟೆ ಪ್ರೌಢ ಶಾಲೆಯ ಆವರಣದಲ್ಲಿ ಇದೇ ಪ್ರೌಢ ಶಾಲೆಯಲ್ಲಿ ಸುದೀರ್ಘ ಸೇವೆಸಲ್ಲಿಸಿ ಮುಖ್ಯೋಪಾಧ್ಯಾಯರಾಗಿ ವಯೋನಿವೃತ್ತಿ ಹೊಂದಿದ ಎ ಎನ್ ತೋಟಗಿ ಯವರ ಬೀಳ್ಕೊಡುವ ಸಮಾರಂಭವು ಜರುಗಿತು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮೀಣ ವಿದ್ಯಾವರ್ಧಕ ಸಂಘದ ಚೇರಮನ್ ರಾದ ಎಂ. ಆರ್ ಕಮತರವರು ವಹಿಸಿಕೊಂಡಿದ್ದರು.  

ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಮೂಹ ಸಂಪನ್ಮೂಲ ಅಧಿಕಾರಿಗಳಾದ ಮಲ್ಲಿಕಾರ್ಜುನ ಪಾಟೀಲ ಅವರು ಮಾತನಾಡಿ, ಎಲ್ಲ ಕ್ಷೇತ್ರಗಳಿಗಿಂತ ಗುರುವಿನ ಸ್ಥಾನ ಮೌಲ್ಯಯುತವಾದುದು ಎಂದು ಗುರುವಿನ ಸ್ಥಾನದ ಮಹತ್ವ ತಿಳಿಸಿದರು. ಅತಿಥಿ ಉಪನ್ಯಾಸಕರಾಗಿ ಆಗಮಿಸಿದ ಸಾಹಿತಿ, ಶ್ರೇಷ್ಠವಾಗ್ಮಿ ಚಂದ್ರಶೇಖರ ಅಕ್ಕಿಯವರು ಬೀಳ್ಕೊಡುವ ಸಮಾರಂಭ ಎಂದರೆ ಇದೊಂದು ಋಣ ತೀರಿಸುವ ಕಾರ್ಯಕ್ರಮ, ಆ ಮೂಲಕ ತೋಟಗಿಯವರ ವ್ಯಕ್ತಿತ್ವವನ್ನು ಅವರು ಶ್ಲ್ಯಾಘಿಸಿದರು. ಅಧ್ಯಕ್ಷರ ಪರವಾಗಿ ಮುಖ್ಯೋಪಾಧ್ಯಾಯ ರ. ವೀ ದೇಮಶೆಟ್ಟಿ ಅಧ್ಯಕ್ಷೀಯ ಮಾತುಗಳನ್ನಾಡಿದರು. ಶಿಕ್ಷಕರ ಪರವಾಗಿ ಸಿ ಎಂ ಪಟಾತ ಮಾತನಾಡಿದರು. 

ವೇದಿಕೆಯಲ್ಲಿ ನಿವೃತ್ತ ಮುಖ್ಯೋಪಾಧ್ಯಾಯ ಎ. ಎನ್ ತೋಟಗಿ, ಗ್ರಾ. ವಿ. ಸಂಘದ ಗೌ. ಕಾರ್ಯದರ್ಶಿ ಈರಣ್ಣ ಜನ್ಮಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಘದ ಎಲ್ಲ ಸದಸ್ಯರು, ನಿವೃತ್ತ ಮುಖ್ಯೋಪಾಧ್ಯಾಯ ಎಂ. ಎನ್ ಗಾಣಗಿ, ಹಳೆಯ ವಿದ್ಯಾರ್ಥಿಗಳು, ಸ್ಥಳೀಯ ಎಲ್ಲ ಪ್ರಾಥಮಿಕ ಶಾಲೆಯ ಗುರುಬಳಗ, ಸತ್ಕರಿತರ ಕುಟುಂಬ ಸದಸ್ಯರು ಹಾಗು ಆಪ್ತೇಷ್ಟರು, ಶಾಲಾ ಎಲ್ಲ ಸಿಬ್ಬಂದಿ ಪಾಲ್ಗೊಂಡಿದ್ದರು. 

ಆರಂಭದಲ್ಲಿ ಎಮ್ ಎ ಪಟ್ಟಣ  ಸರ್ವರನ್ನು ಸ್ವಾಗತಿಸಿದರು. ಎ ಎಂ ಕಮತ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಸುಜಾತಾ ಕೆಂಚನ್ನವರ ವಂದಿಸಿದರು.