ಕಾಗರ್ಿಲ್ ವಿಜಯೋತ್ಸವ ಕಾರ್ಯಕ್ರಮ


ಲೋಕದರ್ಶನ ವರದಿ

ವಿಜಯಪುರ 27:  ನಗರದ ಲೀಡರ್ಸ ಎಕ್ಸಲ್ರೇಟಿಂಗ ಡೆವಲೆಪಮೆಂಟ ಪ್ರೊಗ್ರಾಮ್ ಮತ್ತು ಎಸ.ಬಿ.ಕಲಾ ಮತ್ತು ಕೆ.ಸಿ.ಪಿ.ವಿಜ್ಷಾನ ಮಹಾವಿದ್ಯಾಲಯದ ಸಹಯೋಗದಲ್ಲಿ  ಕಾಗರ್ಿಲ್ ವಿಜಯೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.ಈ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಸುಬೇದಾರ ಬಾಬು ಸುರೇಶ ಕೋರಿ ರವರು ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕಾಗರ್ಿಲ್ ಯುದ್ದ ಪ್ರದೇಶದ ಮತ್ತು ನಮ್ಮ ಸೈನಿಕರ ತ್ಯಾಗ ಮನೋಭಾವನೆಯನ್ನು ಶ್ಲಾಘಿಸಿದರಲ್ಲದೆ, ದೇಶದ ಏಳ್ಗೆಗೆ ಮೊದಲು ಯುವಕರು ದುಶ್ಚಟಗಳಿಂದ ದೂರವಾಗಿ ದೈಹಿಕವಾಗಿ ಸಧೃಡರಾಗಿರಬೇಕು ಹಾಗೂ ದೇಶದ ರಕ್ಷಣೆಗೆ ಸದಾ ಸನ್ನದ್ದರಾಗಿರಬೇಕೆಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಅಥಿತಿಗಳಾಗಿ ಆಗಮಿಸಿದ್ದ ವಿಕ್ರಮ ಪಾಟೀಲ ರವರು ಮಾತನಾಡಿ ನಮ್ಮ ದೇಶದ ಸೈನಿಕರು ದೇಶದ ಗಡಿ ಭಾಗದಲ್ಲಿ ಹಗಲಿರುಳೆನ್ನದೆ ದೇಶದ ರಕ್ಷಣೆಗಾಗಿ ಕಾರ್ಯನಿರ್ವಹಿಸಿ ಸಾರ್ಥಕತೆ ಮೆರೆಯುತ್ತಿದ್ದಾರೆ, ದೇಶದ ರಕ್ಷಣೆಗೆ ಯುವ ಸಮೂಹವು ಕೂಡಾ ನಿಯತ್ತು ಮತ್ತು ಬದ್ದತೆಯಿಂದ ಕಾರ್ಯನಿರ್ವಹಿಸಬೇಕೆಂದು ವಿದ್ಯಾಥರ್ಿಗಳಿಗೆ ಕಿವಿಮಾತು ಹೇಳಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಪೊ.ಕೆ.ಜಿ.ಪೂಜಾರಿ ರವರು ಮಾತನಾಡಿ ದೇಶದ ಗಡಿಯಲ್ಲಿ ಸೈನಿಕರು ನಮ್ಮ ರಕ್ಷಣೆ ಮಾಡಿದರೆ ದೇಶದಲ್ಲಿ ಪ್ರತಿಯೊಬ್ಬ ಭಾರತೀಯನ ಮನ ಮನದಲ್ಲಿ ದೇಶಭಕ್ತಿಯ ಚಿಂತನೆಯನ್ನು ಮೂಡಿಸಿ ಸಧೃಡ ರಾಷ್ಟ್ರ ನಿಮರ್ಾಣಕ್ಕೆ ಮುಂದಾಗಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಕುಮಾರಿ ಅಕ್ಷತಾ ಸುಕಾಳಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನು ಮಾತನಾಡಿ ಕಾಗರ್ಿಲ್ ಯುದ್ದದ ಪರಿಚಯವನ್ನು ತಿಳಿಸಿಕೊಟ್ಟರು. 

ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಪ್ರೊ.ಯು.ಎಸ್. ಪೂಜಾರಿ, ಪ್ರೊ.ಸಾತಿಹಾಳ, ಹಾಗೂ ಲೀಡ್ ನ ಪ್ರಮೋದ ಹುಕ್ಕೇರಿ , ಸಂತೋಷ ಬಿರಾದಾರ ಮತ್ತು ವಿದ್ಯಾಥರ್ಿಗಳಾದ ಆಕಾಶ, ವಿಠ್ಠಲ, ಶಂಕರ,ಸುಧಾ ಬಿರಾದಾರ ಉಮಾ ನಾವದಗಿ, ಕಲ್ಮೇಶ,ಶರಣು  ಮತ್ತು ಮಹಾವಿದ್ಯಾಲಯದ ವಿದ್ಯಾಥರ್ಿ ವಿದ್ಯಾಥರ್ಿನಿಯರು ಉಪಸ್ಥಿತರಿದ್ದರು.