ಕರಾಟೆ ಆತ್ಮರಕ್ಷಣೆಯ ಕಲೆ :ಚಿತ್ರನಟ ಸೌರಭ್

 ಮುಂಬಯಿ: ಬುದ್ಧಿಜೀವಿ ಮನುಷ್ಯನಿಗೆ  ಗುರುಗಳ ದಯೆ  ಸರ್ವಶ್ರೇಷ್ಠವಾದುದು. ಆದ್ದರಿಂದ ಪ್ರತಿಯೊಬ್ಬ ಶಿಷ್ಯಂದಿರು ಗುರು ಗಳನ್ನು ಗೌರವಿಸಿ ಸಮ್ಮಾನಿಸು ವುದು ಪ್ರಧಾನ ಗುರು ದಕ್ಷಿಣೆ. ಕರಾಟೆಯಂತಹ ಕ್ರೀಡೆಗೆ ಪೋಷಕ, ಪಾಲಕರ ಪ್ರೋತ್ಸಾಹ ಅತ್ಯವಶ್ಯ. ಜಾಗತೀಕರಣದ ಯುಗದಲ್ಲಿ ಸ್ವರಕ್ಷಣೆಗೆ ಕರಾಟೆ ಪೂರಕವಾಗಿದೆ. ಕರಾಟೆ ಕಲಿಕೆಯು ನನ್ನ ಬದುಕನ್ನೇ ಬದಲಾಯಿಸಲು ಸಾಧ್ಯವಾಗಿದ್ದು ನಾನು ನಟಿಸಿದ ಪ್ರಥಮ ಚಲನ ಚಿತ್ರಕ್ಕೆ ಕರಾಟೆಯ ಸಾಹಸ ಜನ ಪ್ರಿಯತೆಗೆ ಸಾಕ್ಷಿಯಾಯಿತು. ಕರಾಟೆ ಆತ್ಮರಕ್ಷಣೆ-ಭದ್ರತೆಯ ಕಲೆ ಯಾಗಿದೆ. ಇಂತಹ ಕರಾಟೆಯಿಂದ ಶಿಸ್ತುಬದ್ಧ ಬದುಕು ಸಾಧ್ಯ. ಅಲ್ಲದೆ ಇದರಿಂದ ಆರೋಗ್ಯವು ಸಮತೋಲನದಲ್ಲಿರುತ್ತದೆ ಎಂದು ಬ್ಲಾತಕ್ಬೆಲ್ಟ್ ಕರಾಟೆಪಟು ತೌಳವ ಸೂಪರ್ಸ್ಟಾರ್ ಚಿತ್ರನಟ ಸೌರಭ್ ಎಸ್. ಭಂಡಾರಿ ಕಡಂದಲೆ ತಿಳಿಸಿದರು.

                .7 ರಂದು ವಿಕ್ರೋಲಿ ಪೂರ್ವ ಠಾಗೋರ್ ನಗರದಲ್ಲಿನ ಸಂದೇಶ ಕಾಲೇಜ್ ಸಭಾಗೃಹದಲ್ಲಿ ಮಿ| ಚೇವ್ ಚೂ ಶೂಟ್ ಸ್ಥಾಪಿತ ಕರಾಟೆ ಬುಡೊಕಾನ್ ಇಂಟರ್ನ್ಯಾಷನಲ್ ಸಂಯೋಜಿತ ರೈನ್ಬೋ ಬುಡೊಕಾನ್ ಕರಾಟೆ ಆಕಾಡೆಮಿ ಆಯೋಜಿಸಿದ್ದ 6ನೇ ರೈನ್ಬೋ ಕಪ್ 2018-2019 ಚಾಂಪಿಯನ್ಶಿಪ್ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದರು.

                ಕರಾಟೆ ಬುಡೊಕಾನ್ ಇಂಟರ್ ನ್ಯಾಷನಲ್ ಆಸ್ಟ್ರೇಲಿಯಾ, ಇಂಡಿ ಯನ್ ಒಲಿಂಪಿಕ್ ಅಸೋಸಿ ಯೇಶನ್, ಕರಾಟೆ ಬುಡೊಕಾನ್ ಫೆಡರೇಶನ್ ಇಂಡಿಯಾ ಮತ್ತು ಮಹಾರಾಷ್ಟ್ರ ಕರಾಟೆ ಅಸೋಸಿ

                ಯೇಶನ್ ಇವುಗಳ ಸಹಯೋಗ ದೊಂದಿಗೆ ಸಯೋಜಿಸ ಲ್ಪಟ್ಟ  ಕರಾಟೆ ಪಂದ್ಯಾಟವನ್ನು ಕಡಂದಲೆ ಸುರೇಶ್ ಎಸ್. ಭಂಡಾರಿ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು

                ಭಂಡಾರಿ ಸೇವಾ ಸಮಿತಿ ಮುಂಬಯಿ ಇದರ ನಿಕಟಪೂರ್ವ ಮಹಿಳಾಧ್ಯಕ್ಷೆ ಶೋಭಾ ಸುರೇಶ್ ಭಂಡಾರಿ ಕರಾಟೆ ಗ್ರಾಂಡ್ ಮಾಸ್ಟರ್  ರಿಚ್ಚರ್ಡಎಲ್. ಟಿ. ಚೇವ್ ಅವರ ಭಾವಚಿತ್ರಕ್ಕೆ ಪುಷ್ಪವೃಷ್ಟಿಗೈದರು. ಸಂದೇಶ ಕಾಲೇಜ್ನ ಮುಖ್ಯಸ್ಥ ಸಂದೇಶ್ ಮಾತ್ರೆ ಅವರು ಶ್ರೀಫಲ ಹೊಡೆದು ಸಂಪ್ರದಾಯಿಕವಾಗಿ ಸ್ಪರ್ಧೆಗೆ ಚಾಲನೆ ನೀಡಿದರು.

                ಸುರೇಶ್ ಭಂಡಾರಿ ಮಾತನಾಡಿ, ಕರಾಟೆ ಜಪಾನ್ ಮೂಲದ್ದಾದರೂ ಮನುಕುಲದ ಆತ್ಮಸ್ಥೈರ್ಯ ಬಲಪಡಿಸುವ ಕಲಾ ಕ್ರೀಡೆಯಾಗಿದೆ. ಇದರಿಂದ ಸ್ವಂತಿಕೆಯ ಮನೋಬಲ ಹೆಚ್ಚುತ್ತದೆ. ಕರಾಟೆ  ಜೀವನ ರಕ್ಷಣಾತ್ಮಕ ಕಲೆಯೂ ಹೌದು.

                 ಸ್ವಂತ ಸ್ವರಕ್ಷಣೆಗೆ ದೊಡ್ಡ ಸಾಧನಾ ತಂತ್ರವಾದ ಕಲೆಯನ್ನು ಮೈಗೂಡಿಸುವುದರಿಂದ ಸ್ವರಕ್ಷಣೆಗೆ ಆಶ್ರಯವಾಗಬಲ್ಲದು. ಇದು ಸ್ಪಧರ್ೆಯಲ್ಲ ಶಾರೀರಿಕ, ಮನೋಶಕ್ತಿ  ತುಂಬುವ ಆಟ. ಎದುರಾಳಿಯನ್ನು ಎದುರಿಸುವ  ಕಲೆಯಾಗಿದೆ ಎಂದರು.

                ಮಾಜಿ ಮಾರ್ಷಲ್ ಆಟ್ರ್ಸ

                ಮಾಜಿ ಪಟು ನಿಜಾಮುದ್ದೀನ್ ಮುಲ್ಲಾ, ಸಲೀಮ್ ಗುಲ್ಖಾನ್, ದಯಾನಂದ ಪೂಜಾರಿ, ಬ್ರಿಜೇಸ್ ಸಿಂಗ್, ನರೇಶ್ ಎನ್. ಬಾಡೇಕರ್, ಸೃಷ್ಟಿ ವಿ. ಶೆಟ್ಟಿ, ರಾಜೇಂದ್ರ ಪಿ. ಬೋಸ್ಲೆಪ್ರವೀಣ್ ಪೈಪ್ರಸಾದ್ ಹಿಂದೂಲ್ಕರ್, ಆನಂತ್ ಕುಲೆ, ಸಂತೋಷ್ ಚವ್ಹಾಣ್ ಉಪಸ್ಥಿತರಿದ್ದರುಕಟಾಸ್, ಕುಮಿಟೆ, ವೆಪ್ಪನ್ಸ್  ಸ್ಪರ್ಧೆಯಲ್ಲಿ ಸ್ಪರ್ಧಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.