ಕಾರಟಗಿ : ದೇಶಕ್ಕೆ ಅಪಾರ ಕೊಡುಗೆ ನೀಡಿದ ಮಹಾನ್ ನಾಯಕ ಸಂವಿಧಾನ ಶಿಲ್ಪಿ ಅಂಬೇಡ್ಕರ

ಲೋಕದರ್ಶನ ವರದಿ 

ಕಾರಟಗಿ 14:  ಡಾ. ಬಾಬಾ ಸಾಹೇಬ್ ಅಂಬೇಡ್ಕರರು ದೇಶಕ್ಕೆ  ಅಪಾರವಾದ ಕೊಡುಗೆ ನೀಡುವ ಮೂಲಕ ಮಹಾನ್ ನಾಯಕರಾಗಿ ಸಂವಿಧಾನ ಶಿಲ್ಪಿ ಎನಿಸಿಕೊಂಡರು ಎಂದು  ರಾಜ್ಯ ಛಲವಾದಿ ಮಹಾಸಭಾದ ಪ್ರ.ಕಾರ್ಯದಶರ್ಿ ರಮೇಶ ತೊಂಡಿಹಾಳ ಹೇಳಿದರು. 

ತೊಂಡಿಹಾಳ ಗ್ರಾಮದ ಸಮೀಪದ ಉಸಗಿನ ಕ್ಯಾಂಪ್ನಲ್ಲಿ ಹಮ್ಮಿಕೊಂಡ ಡಾ. ಅಂಬೇಡ್ಕರರ 128ನೇ ಜನ್ಮದಿನ, ಉಸಗಿನ ಕ್ಯಾಪ್ಗೆ  ಜೈ ಭೀಮ ನಗರ ಎಂದು ಮರು ನಾಮಕರಣ ಹಾಗೂ ನೂತನ ಜೈ ಭೀಮ ವೃತ್ತ ಉದ್ಘಾಟಿಸಿ ಮಾತನಾಡಿದ ಅವರು ಅಂಬೇಡ್ಕರರನ್ನು ಎಂದು ಯಾರು ಜಾತಿಯಿಂದ ಅಳೆಯಬಾರದು. ಅವರೊಬ್ಬ ದೇಶಭಕ್ತರು ಯಾವುದೇ ಒಂದು ಜಾತಿಗೆ ಸೀಮಿತರಾದವರಲ್ಲ ಸರ್ವಧಮರ್ಿಯರ ಮನಭಾವಕ್ಕೆ ತಕ್ಕವರಾಗಿದ್ದರು. ಅವರ ಆದರ್ಶಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಸಾಕು ನಾವು ಕೂಡ ಜೀವನದಲ್ಲಿ ಬಹಳಷ್ಟು ಸಾಧನೆಗಳನ್ನು ಗೈಯಬಹುದು ಎಂದರು.  ಇದಕ್ಕೂ ಮೊದಲು ಅಂಬೇಡ್ಕರರ ಜಯಂತಿಯ ಅಂಗವಾಗಿ ಅಂಬೇಡ್ಕರರ ಭಾವಚಿತ್ರದ ಮೆರವಣಿಗೆಯನ್ನು ಮಹಿಳೆಯರ ಕುಂಭೋತ್ಸವದೊಂದಿಗೆ ನಡೆಯಿತು. ನಂತರ  ನೂತನವಾಗಿ ನಾಮಕರಣಗೊಂಡ "ಜೈ ಭೀಮ ನಗರ" ದಲ್ಲಿ "ಜೈ ಬೀಮ ವೃತ್ತ' ದಲ್ಲಿ ಅಂಬೇಡ್ಕರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ನೂತನ ವೃತ್ತದ ಉದ್ಘಾಟನೆ ನಡೆಯಿತು.

ಈ ಸಂದರ್ಭದಲ್ಲಿ  ಸಮಾಜದ ಹಿರಿಯರಾದ  ಸಣ್ಣ ದುರಗಪ್ಪ,  ಪರಸಪ್ಪ, ಸೋಮಪ್ಪ, ದೊಡ್ಡಯಂಕೋಬಣ್ಣ,  ಪ್ರಮುಖರಾದ  ವಿರುಪಣ್ಣ,  ಶರಣಪ್ಪ ಹುಲ್ಲೇಶ,  ಶಿವರೇಡ್ಡಿ,  ಭೀಮೇಶ, ದೇವೇಂದ್ರಪ್ಪ,  ರಾಮಣ್ಣ ಗೋಮಸರ್ಿ,  ಚೌಡಪ್ಪ, ಹಾಗೂ ಛಕಲವಾಧಿ ಮಹಾಸಭಾದ ಪಧಾದಿಕಾರಿಗಳು ಯುವಕರು ಮಹಿಳೆಯರು ಇತರರು ಇದ್ದರು.